ಲಕ್ನೋ: ಕರ್ನಾಟಕದ ಮಾದರಿಯಂತೆಯೇ ಉತ್ತರ ಪ್ರದೇಶ(Uttar Pradesh)ದಲ್ಲಿಯೂ ಈಗ ಗೋವುಗಳಿಗೆ ಆಂಬುಲೆನ್ಸ್ ಸೇವೆ ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಡಿಸೆಂಬರ್ನಿಂದ ರಾಜ್ಯದಲ್ಲಿ ಹಸುಗಳ ಚಿಕಿತ್ಸೆಗಾಗಿ 24 ಗಂಟೆಗಳ ‘ಅಭಿನವ್ ಆಂಬ್ಯುಲೆನ್ಸ್’ ಸೇವೆ(Abhinav Ambulance Service)ಯನ್ನು ಪ್ರಾರಂಭಿಸಲು ಸಜ್ಜಾಗಿದೆ.
ಈ ಸೇವೆಯಡಿ ಹಸುಗಳನ್ನು ಕನಿಷ್ಠ ಸಮಯದಲ್ಲಿ ಪಶುವೈದ್ಯಕೀಯ ಆಸ್ಪತ್ರೆ(Veterinary Hospital)ಗೆ ಸಾಗಿಸಲಾಗುವುದು. ಇದಲ್ಲದೆ ಹಸುಗಳ ತಳಿಗಳ ಸುಧಾರಣೆಗಾಗಿ ರಾಜ್ಯ ಸರ್ಕಾರವು ದನ ಸಾಕಣೆದಾರರಿಗೆ ಸೂಕ್ತ ವ್ಯವಸ್ಥೆಯನ್ನು ಒದಗಿಸಲಿದೆ. ರಾಜ್ಯ ಸರ್ಕಾರ 515 ವಿನೂತನ ಆಂಬುಲೆನ್ಸ್ ಗಳನ್ನು ಓಡಿಸಲು ಯೋಜನೆ ರೂಪಿಸಿದೆ. ಪ್ರತಿ ಆಂಬ್ಯುಲೆನ್ಸ್ ನಲ್ಲಿ ಪಶುವೈದ್ಯರ ಜೊತೆಗೆ ಇಬ್ಬರು ಪಶುವೈದ್ಯಕೀಯ ಸಿಬ್ಬಂದಿ ಕೂಡ ದಿನದ 24 ಗಂಟೆಗಳ ಕಾಲ ಸೇವೆಗೆ ಲಭ್ಯವಿರುತ್ತಾರೆ. ಸೇವೆಯ ಸುಗಮ ಕಾರ್ಯಾಚರಣೆಗಾಗಿ ಕಾಲ್ ಸೆಂಟರ್ ಅನ್ನು ಸಹ ಸ್ಥಾಪಿಸಲಾಗುತ್ತದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Petrol-Diesel Price : ದೇಶದಲ್ಲೆ ಇಲ್ಲಿ ತುಂಬಾ ಕಡಿಮೆ ಬೆಲೆಗೆ ಸಿಗುತ್ತೆ ಪೆಟ್ರೋಲ್!
ಸೇವಾ ಕೇಂದ್ರಕ್ಕೆ ಕರೆ ಮಾಡಿದ ನಂತರ ಒಬ್ಬರು 15 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸೇವೆ(Ambulance Service)ಯ ಪ್ರಯೋಜನಗಳನ್ನು ಪಡೆಯಬಹುದು. ಪ್ರಾಣಿ ಸಾಕಣೆದಾರರು ಸಹ ಇಂತಹ ಸೌಲಭ್ಯಗಳನ್ನು ಪಡೆಯಬಹುದು. ಮತ್ತೊಂದೆಡೆ ಹಸುಗಳ ತಳಿ ಸುಧಾರಣೆ ಕಾರ್ಯಕ್ರಮದಡಿ ರಾಜ್ಯ ಸರ್ಕಾರವು ದನ ಸಾಕುವವರಿಗೆ 3 ಬಾರಿ ಹಸುಗಳ ಉಚಿತ ಗರ್ಭಧಾರಣೆಯ ಸೌಲಭ್ಯವನ್ನು ಒದಗಿಸುತ್ತದೆ. ‘ಭ್ರೂಣ ಕಸಿ’ ತಂತ್ರದ ಮೂಲಕ ಹಸುಗಳಿಗೆ ಶೇ.100ರಷ್ಟು ಗರ್ಭಧಾರಣೆಯನ್ನು ಸರ್ಕಾರವೇ ಮಾಡಲಿದೆ. ಈ ಪ್ರಯೋಗವನ್ನು ಮೊದಲು ಬಾರಾಬಂಕಿ ಜಿಲ್ಲೆಯಲ್ಲಿ ಮಾಡಲಾಗಿತ್ತು, ಇದು ಅನುಕೂಲಕರ ಫಲಿತಾಂಶ ನೀಡಿತ್ತು. ಆದ್ದರಿಂದ ಈ ಸೌಲಭ್ಯವನ್ನು ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಸರ್ಕಾರ ಉತ್ಸುಕವಾಗಿದೆ.
ಈ ಯೋಜನೆಯ ಜಾರಿಯನ್ನು ಖಚಿತಪಡಿಸಿರುವ ರಾಜ್ಯದ ಪಶುಸಂಗೋಪನೆ, ಮೀನುಗಾರಿಕೆ ಮತ್ತು ಡೈರಿ ಅಭಿವೃದ್ಧಿ ಸಚಿವ ಲಕ್ಷ್ಮೀ ನಾರಾಯಣ್ ಚೌಧರಿ(Lakshmi Narayana Chowdary), ‘ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಸುಗಳಿಗೆ ತ್ವರಿತವಾಗಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ಆಂಬುಲೆನ್ಸ್ ಸೇವೆಯನ್ನು ಜಾರಿಗೆ ತರುತ್ತಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಸ್ವತಂತ್ರ ಹಾಗೂ ಬೌದ್ಧಿಕ ಚಾರಿತ್ರ್ಯಕ್ಕೆ ಜೀವ ತುಂಬಿದ ಲೇಖಕಿ Mannu Bhandari ಇನ್ನಿಲ್ಲ
‘ಮುಂದಿನ ತಿಂಗಳು(ಡಿಸೆಂಬರ್)ಪ್ರಾರಂಭವಾಗುವ ‘ಅಭಿನವ್ ಆಂಬ್ಯುಲೆನ್ಸ್’(Abhinav Ambulance ) ಸೇವೆಯನ್ನು ಪ್ರಾರಂಭಿಸಲು 515 ಆಂಬ್ಯುಲೆನ್ಸ್ ಗಳನ್ನು ಸಿದ್ಧಪಡಿಸಲಾಗಿದೆ. ಈ ಸೇವೆಯು ದಿನದ 24 ಗಂಟೆಯೂ ಲಭ್ಯವಿರುತ್ತದೆ. ಲಕ್ನೋದಲ್ಲಿ ಇದಕ್ಕಾಗಿ ಪ್ರತ್ಯೇಕ ಕಾಲ್ ಸೆಂಟರ್ ಅನ್ನು ಸ್ಥಾಪಿಸಲಾಗುವುದು. ಕಾಲ್ ಸೆಂಟರ್ಗೆ ಕರೆ ಮಾಡಿದ ನಂತರ ಗೊತ್ತುಪಡಿಸಿದ ಸ್ಥಳಕ್ಕೆ ಆಂಬ್ಯುಲೆನ್ಸ್ 15-20 ನಿಮಿಷಗಳಲ್ಲಿ ತಲುಪುತ್ತದೆ. ಬಳಿಕ ತ್ವರಿತವಾಗಿ ಗೋವುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಹಸುವಿನ ತಳಿ ಸುಧಾರಣಾ ಕಾರ್ಯಕ್ರಮದಡಿ ದನ ಸಾಕುವವರಿಗೆ 3 ಬಾರಿ ಉಚಿತ ಗರ್ಭಧಾರಣೆಯ ಸೌಲಭ್ಯವನ್ನು ನೀಡಲಾಗುವುದು’ ಎಂದು ಚೌಧರಿ ಹೇಳಿದ್ದಾರೆ. ಕರ್ನಾಟಕದಲ್ಲಿ ಕಳೆದ ವರ್ಷ ಈ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮಾಹಿತಿ ನೀಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.