ನವದೆಹಲಿ : ರಿಲಯನ್ಸ್ ಜಿಯೋ ಪ್ಲಾನ್ ಗಳು ( Reliance Jio Plans) ದುಬಾರಿಯಾಗಲಿವೆ. ಹೊಸ ದರಗಳು ಡಿಸೆಂಬರ್ 1 ರಿಂದ ಅಂದರೆ ನಾಳೆಯಿಂದ ಅನ್ವಯವಾಗಲಿದೆ. ಡಿಸೆಂಬರ್ 1 ರಿಂದ ಬಳಕೆದಾರರು ಹೆಚ್ಚಿನ ಹಣ ಪಾವತಿಸಿ ರೀಚಾರ್ಜ್ ಮಾಡಿಕೊಳ್ಳಬೇಕು. ರೀಚಾರ್ಜ್‌ಗಾಗಿ (Recharge plan) ಬಳಕೆದಾರರು ಮೊದಲಿಗಿಂತ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹಳೆಯ ದರಗಳಲ್ಲಿ ರೀಚಾರ್ಜ್ ಮಾಡಲು ಮತ್ತು 480 ರೂಗಳನ್ನು ಉಳಿಸುವ ಮಾರ್ಗವೊಂದಿದೆ.
ಉಳಿಸಬಹುದು 480 ರೂಪಾಯಿ :
480 ರೂ. ಉಳಿಸಲು ಇರುವ ಕೊನೆಯ ಅವಕಾಶ ಇದು. ಡಿಸೆಂಬರ್ 1 ರಿಂದ, ಜಿಯೋ ಹೊಸ ದರವನ್ನು ( Jio new rate) ಜಾರಿಗೆ ತರುತ್ತದೆ. ಅಂದರೆ ಜಿಯೋ ಯೋಜನೆಗಳು (Jio recharge plan) ದುಬಾರಿಯಾಗಲಿವೆ. ಆದರೆ ಮುಂದಿನ ವರ್ಷದ ನವೆಂಬರ್‌ವರೆಗೆ ಹಳೆಯ ದರದಲ್ಲಿ ಡೇಟಾ ಕರೆ ಮತ್ತು SMS ಸೇವೆಯನ್ನು ಪಡೆಯುವ ಮಾರ್ಗವೊಂದಿದೆ. ಹೀಗೆ ಮಾಡಿದರೆ ಹೆಚ್ಚುವರಿ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಬಹುದು. ಜಿಯೋ ವಾರ್ಷಿಕ ಪ್ಲಾನ್ (Jio annuala plan) ಮೂಲಕ ರೀಚಾರ್ಜ್ ಮಾಡಿಕೊಳ್ಳಬೇಕು. ಅಂದರೆ, ಜಿಯೋದ 2399 ರೂ. ಪ್ಲಾನ್ ನೊಂದಿಗೆ ರೀಚಾರ್ಜ್ ಮಾಡುವ ಮೂಲಕ, ಇಡೀ ವರ್ಷಕ್ಕೆ ರೀಚಾರ್ಜ್ ಮಾಡುವುದು ಸಾಧ್ಯವಾಗುತ್ತದೆ.
ADAS ಬಗ್ಗೆ ನಿಮಗೆಷ್ಟು ತಿಳಿದಿದೆ? ವಾಹನ ಚಲಾಯಿಸುವವರು ಇದನ್ನು ತಿಳಿಯಲೇಬೇಕು
ಹೊಸ ದರ ಎಷ್ಟಿರುತ್ತದೆ ?:
2399 ರೂ. ಪ್ಲಾನ್‌ನ ಹೊಸ ಬೆಲೆ 2879 ರೂ. ಆಗಿದೆ. ಇವತ್ತು ಈ ಪ್ಲಾನ್ ಅನ್ನು ರೀಚಾರ್ಜ್ (Recharge) ಮಾಡಿದರೆ, ಗ್ರಾಹಕರಿಗೆ 480 ರೂ. ಲಾಭವಾಗಲಿದೆ. ಈ ಯೋಜನೆಯೊಂದಿಗೆ ನೀವು 365 ದಿನಗಳ ಮಾನ್ಯತೆಯನ್ನು ಸಿಗಲಿದೆ.
ರಿಲಯನ್ಸ್ ಜಿಯೋದ 2399 ರೂ. ಯೋಜನೆ :
ಜಿಯೋದ 2399 ರೂ. ಯೋಜನೆಯಲ್ಲಿ, ಬಳಕೆದಾರರಿಗೆ 2 GB ಡೇಟಾ, ಅನಿಯಮಿತ ಕರೆ ಮತ್ತು 100 SMS ಗಳನ್ನು 365 ದಿನಗಳವರೆಗೆ ನೀಡಲಾಗುತ್ತದೆ. ಇದರೊಂದಿಗೆ, ಜಿಯೋ ಅಪ್ಲಿಕೇಶನ್‌ಗಳಿಗೆ (Jio app) ಉಚಿತ ಆಕ್ಸೆಸ್ ಲಭ್ಯವಿರಲಿದೆ.
ಇದನ್ನೂ ಓದಿ : Google ತನ್ನ ಈ ಆಪ್ ಗಳಿಂದ ನಿಮ್ಮ ಬೇಹುಗಾರಿಕೆ ನಡೆಸುತ್ತಿದೆ, ತಕ್ಷಣ ಈ ಕೆಲಸ ಮಾಡಿ ಅವುಗಳನ್ನು ಸ್ಟಾಪ್ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.