ಬೆಂಗಳೂರು: ಬಿಜೆಪಿ ಸೇರಲಿಲ್ಲವೆಂದು ನನ್ನನ್ನು ಜೈಲಿಗೆ ಹಾಕಿಸಿದ್ದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(KPPC President DK Shivakumar) ಹೇಳಿಕೆಗೆ ಕರ್ನಾಟಕ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಬಿಜೆಪಿ, ‘ತಿಹಾರ್ ಯಾತ್ರೆ ನಡೆಸಿ ಹಲವು ವರ್ಷ ಕಳೆದ ಮೇಲೆ ಡಿಕೆಶಿ ನೀಡಿರುವ ಈ ಹೇಳಿಕೆ ನಂಬಲು ಸಾಧ್ಯವೇ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.
‘ಬಹುಶಃ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಬಣ ನೀಡುತ್ತಿರುವ ಹಿಂಸೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಹುಟ್ಟಿಕೊಂಡಿರುವ ಆಕಾಂಕ್ಷಿಗಳು ಹಾಗೂ ನಕಲಿ ಗಾಂಧಿ ಕುಟುಂಬದ ಆಶೀರ್ವಾದ ಕೊರತೆಯಿಂದ ಡಿಕೆಶಿ ಅವರು ಈ ಮಾತು ಆಡಿರಬಹುದು’ ಅಂತಾ ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ಡೆಲ್ಟಾವನ್ನೇ ಎದುರಿಸಿದ್ದೇವೆ ‘ಒಮಿಕ್ರಾನ್’ ಬಗ್ಗೆ ಹೆದರಿಕೆ ಬೇಡ: ಸಚಿವ ಸುಧಾಕರ್
‘ನಾನು ಬಿಜೆಪಿ ಜೊತೆ ಸಹಕರಿಸದೇ ಇರುವುದಕ್ಕಾಗಿ ನನ್ನನ್ನು ತಿಹಾರ್ ಜೈಲಿ(Tihar Jail)ಗೆ ಕಳುಹಿಸಲಾಯ್ತು ಎಂದು ಭ್ರಷ್ಟಾಧ್ಯಕ್ಷ ಡಿಕೆಶಿ ಸಮರ್ಥನೆ ಕೊಟ್ಟುಕೊಂಡಿದ್ದಾರೆ. ಆದರೆ ಸತ್ಯ ಅದಲ್ಲ, ತೆರಿಗೆ ವಂಚನೆ ಹಾಗೂ ಅಕ್ರಮ ಸಂಪತ್ತಿನ ಮೂಲದ ತನಿಖೆಗೆ ಸಹಕರಿಸಿಲ್ಲವೆಂಬ ಕಾರಣಕ್ಕೆ ಇಡಿ ಅಧಿಕಾರಿಗಳು ನಿಮ್ಮನ್ನು ತಿಹಾರಕ್ಕೆ ಕಳುಹಿಸಿದ್ದು’ ಅಂತಾ ಬಿಜೆಪಿ(BJP Karnataka) ಮತ್ತೊಂದು ಟ್ವೀಟ್ ನಲ್ಲಿ ಟೀಕಿಸಿದೆ.
ತಿಹಾರ್ ಯಾತ್ರೆ ನಡೆಸಿ ಹಲವು ವರ್ಷ ಕಳೆದ ಮೇಲೆ @DKShivakumar ನೀಡಿರುವ ಈ ಹೇಳಿಕೆ ನಂಬಲು ಸಾಧ್ಯವೇ?
ಬಹುಶಃ @siddaramaiah ಬಣ ನೀಡುತ್ತಿರುವ ಹಿಂಸೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಹುಟ್ಟಿಕೊಂಡಿರುವ ಆಕಾಂಕ್ಷಿಗಳು ಹಾಗೂ ನಕಲಿ ಗಾಂಧಿ ಕುಟುಂಬದ ಆಶೀರ್ವಾದ ಕೊರತೆಯಿಂದ ಡಿಕೆಶಿ ಅವರು ಈ ಮಾತು ಆಡಿರಬಹುದು.
— BJP Karnataka (@BJP4Karnataka) December 6, 2021
ಬಿಜೆಪಿ ವಿರುದ್ಧ ಡಿಕೆಶಿ ಆರೋಪವೇನು..?
‘ನಾನು ಬಿಜೆಪಿ ಸೇರಲಿಲ್ಲವೆಂಬ ಕಾರಣಕ್ಕೆ ಕಾರಾಗೃಹಕ್ಕೆ ಕಳುಹಿಸಿದರು’ ಎಂದು ಬಿಜೆಪಿ(BJP) ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದರು. ‘ಬಿಜೆಪಿಯವರಿಗೆ ಬಂಬಲ ಕೊಡಲಿಲ್ಲ, ಅವರೊಂದಿಗೆ ಹೋಗಲಿಲ್ಲವೆಂಬ ಕಾರಣಕ್ಕೆ ನನ್ನನ್ನು ಕಾರಾಗೃಹಕ್ಕೆ ಕಳುಹಿಸಿದರು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ದಾಖಲೆಗಳು ಇವೆಯಲ್ಲಾ’ ಅಂತಾ ಡಿಕೆಶಿ ಹೇಳಿದ್ದರು.
ಮುಂದುವರಿದು ಮಾತನಾಡಿದ್ದ ಡಿಕೆಶಿ, ‘ಕಾಂಗ್ರೆಸ್(Congress) ಉಸಿರು ನಿಲ್ಲಿಸುತ್ತೇವೆಂದು ಹೇಳಿರುವ ಬಿ.ಎಸ್.ಯಡಿಯೂರಪ್ಪ(BS Yediyurappa) ತಮಗಾಗಿರುವ ನೋವಿನಿಂದ ಆ ರೀತಿ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಮೇಲೆ ಹೇಳಕ್ಕಾಗಲ್ಲವಲ್ಲ? ದುಃಖ, ದುಮ್ಮಾನ, ದಾಳಿ, ಮಾನಸಿಕ ಹಿಂಸೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಇವೆಲ್ಲ ಅವರಿಗೆ ಎಲ್ಲಿ ಹೇಳಕ್ಕಾಗುತ್ತದೆ? ಅವರ ಕೋಪ ತಾಪ ಹೊರಗೆ ಹಾಕಬೇಕಲ್ಲ. ಹೀಗಾಗಿ ಕಾಂಗ್ರೆಸ್ ವಿರುದ್ಧ ಅವರು ಮಾತನಾಡುತ್ತಿದ್ದಾರೆ. ನಮ್ಮನ್ನು ಶಾಶ್ವತವಾಗಿ ವಿರೋಧಪಕ್ಷದಲ್ಲಿಕೂರಿಸುತ್ತೇವೆಂದು ಹೇಳುತ್ತಿದ್ದಾರೆ. ಆದರೆ ಅವರ ಬಿಜೆಪಿ ಪಕ್ಷದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅವರು ಯೋಚಿಸಲಿ’ ಎಂದು ಡಿಕೆಶಿ ತಿರುಗೇಟು ನೀಡಿದ್ದರು.
ಇದನ್ನೂ ಓದಿ: ಕರ್ನಾಟಕ, ತೆಲಂಗಾಣದಲ್ಲಿ ಕೋವಿಡ್ ಸ್ಫೋಟ... 72 ಗಂಟೆಗಳಲ್ಲಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.