ನೀವು ನಕಲಿ ಗಾಂಧಿ ಕುಟುಂಬದ ಪಳೆಯುಳಿಕೆಯೇ?: ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು

ವಿಧಾನ ಪರಿಷತ್ ಚುನಾವಣಾ ಅಖಾಡದಲ್ಲಿ ಸಿದ್ದರಾಮಯ್ಯನವರು ಎಲ್ಲಿಯೂ ಸದ್ದು ಮಾಡುತ್ತಿಲ್ಲವೆಂದು ಬಿಜೆಪಿ ಕುಟುಕಿದೆ.  

Written by - Zee Kannada News Desk | Last Updated : Dec 6, 2021, 02:21 PM IST
  • ಬಿಜೆಪಿ & ಆರ್​ಎಸ್​ಎಸ್ ಗೋಡ್ಸೆ ಪಳಿಯುಳಿಕೆಗಳು ಎಂದಿದ್ದ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು
  • ಸಿದ್ದರಾಮಯ್ಯನವರೇ ನೀವು ನಕಲಿ ಗಾಂಧಿ ಕುಟುಂಬದ ಪಳೆಯುಳಿಕೆಯೇ? ಎಂದು ಬಿಜೆಪಿ ಪ್ರಶ್ನೆ
  • ಚುನಾವಣಾ ಸೋಲುಗಳನ್ನು ಡಿಕೆಶಿ ತಲೆಗೆ ಕಟ್ಟಲು ವ್ಯವಸ್ಥಿತ ಸಂಚು ರೂಪುಗೊಂಡಿದೆಯೇ? ಎಂದು ಟೀಕೆ
ನೀವು ನಕಲಿ ಗಾಂಧಿ ಕುಟುಂಬದ ಪಳೆಯುಳಿಕೆಯೇ?: ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು  title=
ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ

ಬೆಂಗಳೂರು: ಬಿಜೆಪಿ ಮತ್ತು ಆರ್​ಎಸ್​ಎಸ್(BJP & RSS) ಮಹಾತ್ಮ ಗಾಂಧೀಜಿಯವರಿಗೆ ಗುಂಡಿಕ್ಕಿ ಕೊಂದ ನಾಥೂರಾಮ್ ಗೋಡ್ಸೆ ಪಳಿಯುಳಿಕೆಗಳು ಎಂದು ಹೇಳಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ. #ಬುರುಡೆರಾಮಯ್ಯ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯ(Siddaramaiah)ನವರೇ ನೀವು ನಕಲಿ ಗಾಂಧಿ ಕುಟುಂಬದ ಪಳೆಯುಳಿಕೆಯೇ?’ ಎಂದು ಪ್ರಶ್ನಿಸಿದೆ.

Siddaramaiah.jpg

ಚುನಾವಣಾ ಸೋಲು ಡಿಕೆಶಿ ತಲೆಗೆ ಕಟ್ಟಲು ಸಂಚು!

ತನ್ನ ಮತ್ತೊಂದು ಟ್ವೀಟ್ ನಲ್ಲಿ ‘ವಿಧಾನ ಪರಿಷತ್ ಚುನಾವಣಾ(Karnataka MLC Election) ಅಖಾಡದಲ್ಲಿ ಸಿದ್ದರಾಮಯ್ಯನವರು ಎಲ್ಲಿಯೂ ಸದ್ದು ಮಾಡುತ್ತಿಲ್ಲ. ಟಿಕೆಟ್‌ ಹಂಚಿಕೆಯ ಕಾರಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಸಿದ್ದರಾಮಯ್ಯ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇದು ಕಾಂಗ್ರೆಸ್ ಪರಿಷತ್ ಅಭ್ಯರ್ಥಿಗಳ ಮೇಲೂ‌ ಪರಿಣಾಮ ಬೀರಲಿದ್ದು, ಚುನಾವಣಾ ಸೋಲುಗಳನ್ನು ಡಿಕೆಶಿ ತಲೆಗೆ ಕಟ್ಟಲು ವ್ಯವಸ್ಥಿತ ಸಂಚು ರೂಪುಗೊಂಡಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಡೆಲ್ಟಾವನ್ನೇ ಎದುರಿಸಿದ್ದೇವೆ ‘ಒಮಿಕ್ರಾನ್’ ಬಗ್ಗೆ ಹೆದರಿಕೆ ಬೇಡ: ಸಚಿವ ಸುಧಾಕರ್

‘ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಆಯ್ಕೆ ವಿಚಾರ ಬಂದಾಗ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾದರು. ಡಿಕೆಶಿ(DK Shivakumar) ಆಯ್ಕೆ ಮಾಡಿಕೊಂಡ ದುಡ್ಡಿನ‌ ಅಭ್ಯರ್ಥಿಗಳಿಗೆ ಕಾಂಗ್ರೆಸ್ ವರಿಷ್ಠರೂ ಮಣೆ ಹಾಕಿದರು. ತನ್ನವರಲ್ಲದ ಅಭ್ಯರ್ಥಿಗಳ ಪರ ಶ್ರಮ ವಿನಿಯೋಗಿಸುವುದಕ್ಕೆ ಸಿದ್ದರಾಮಯ್ಯ ಸಿದ್ಧರಿಲ್ಲವೇ?’ ಎಂದು ಬಿಜೆಪಿ ಟೀಕಿಸಿದೆ.

ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೂ ಕಾಂಗ್ರೆಸ್‌ ಮೇಲೆ ವಿಶ್ವಾಸವಿಲ್ಲ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai)ಯವರ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಯುಪಿಎ ಅಂಗಪಕ್ಷಗಳೇ ರಾಹುಲ್‌ ಗಾಂಧಿ ಅವರ ನಾಯಕತ್ವ ಒಪ್ಪುತ್ತಿಲ್ಲ. ಇನ್ನು ದೇಶದ ಜನ ಹೇಗೆ ಒಪ್ಪುತ್ತಾರೆ? ಕಾಂಗ್ರೆಸ್‌ ಪಕ್ಷದವರು ಭ್ರಮೆಯಲ್ಲಿದ್ದಾರೆ. ಅಧಿಕಾರ ವಂಚಿತರಾಗಿ ಹತಾಶರಾಗಿದ್ದಾರೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಲು ಗಾಂಧೀಜಿ ಕರೆ ನೀಡಿದ್ದರು. ಇದೀಗ ದೇಶದ ಜನತೆ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಲು ಸಿದ್ಧರಾಗಿದ್ದಾರೆ. ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೂ ಕಾಂಗ್ರೆಸ್‌ ಮೇಲೆ ವಿಶ್ವಾಸವಿಲ್ಲ. ಕಾಂಗ್ರೆಸ್ ಮಿತ್ರ ಪಕ್ಷದವರಿಗೆ ಕೂಡಾ ಕಾಂಗ್ರೆಸ್‌ ಮೇಲೆ ಭರವಸೆ ಇಲ್ಲ’ವೆಂದು ಟೀಕಿಸಿದೆ.  

ಇದನ್ನೂ ಓದಿ: ಮೂರು ಅಥವಾ ಹೆಚ್ಚು Covid-19 ಪ್ರಕರಣಗಳಿರುವ ಪ್ರದೇಶಗಳನ್ನು ಕ್ಲಸ್ಟರ್‌ಗಳಾಗಿ ವರ್ಗೀಕರಿಸಲಾಗುವುದು: ಸಿಎಂ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News