ನವದೆಹಲಿ : ಮಕ್ಕಳು ದೇವರ ರೂಪ ಎನ್ನುತ್ತಾರೆ. ಮಕ್ಕಳಿಗೆ ಒಳ್ಳೆಯದು-ಕೆಟ್ಟದ್ದು, ಸರಿ ತಪ್ಪುಗಳ ಕಲ್ಪನೆಯೇ ಇರುವುದಿಲ್ಲ. ಅವರದ್ದು ನಿಷ್ಕಲ್ಮಶ ಪ್ರೀತಿ. ಆ ಮುಗ್ದ ಪ್ರೀತಿಗೆ ಎಂಥವರು ಕೂಡಾ ಮನಸೋಲಲೇ ಬೇಕು. ಸಂತೋಷವಾದಾಗ ಕೇಕೆ ಹಾಕಿ ನಗುತ್ತದೆ. ಕಷ್ಟದಲ್ಲಿರುವವರನ್ನು ಕಂಡರಂತೂ ಆ ಮುಗ್ದ ಮನಸ್ಸು ಮರುಗಿ ಬಿಡುತ್ತದೆ. ಇಂಥಹ ನಿಷ್ಕಲ್ಮಶ ಮನಸ್ಸಿನ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ.
ನಾಯಿಯ ಬಾಯಾರಿಕೆಯನ್ನು ನೀಗಿಸಲು, ತನ್ನೆಲ್ಲಾ ಶ್ರಮ ಹಾಕಿದ ಕಂದಮ್ಮ :
ಪುಟ್ಟ ಬಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿದೆ. ಆ ವಿಡಿಯೋ ನೋಡಿದರೆ ಎಂಥವರೂ ಸಂತೋಷ ಪಡಬೇಕು. ಆ ಸಹೃದಯಿ ಬಾಲಕನ ಕೆಲಸಕ್ಕೆ ಬೆನ್ನು ತಟ್ಟಬೇಕು. ಈ ವೀಡಿಯೋದಲ್ಲಿ (Viral video) ಪುಟ್ಟ ಮಗುವೊಂದು ನಾಯಿಯ ಬಾಯಾರಿಕೆಯನ್ನು ನೀಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ನಾಯಿಯ ದಾಹ ತಣಿಸಲು ಮಗು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸುವುದನ್ನು ನೋಡಬಹುದು.
ಇದನ್ನೂ ಓದಿ : Viral Video:ಸಿನಿಮೀಯ ರೀತಿಯಲ್ಲಿ ವರನ ಮುಂದೆಯೇ ವಧುವಿಗೆ ಸಿಂಧೂರ್ ಹಚ್ಚಿದ ಪ್ರಿಯಕರ.. ದಂಗಾದ ಮದುವೆ ಮನೆ.!
ಮನ ಗೆಲ್ಲುತ್ತದೆ ಮಗುವಿನ ಪರಿಶ್ರಮ :
ಮಗುವಿನ ಪರಿಶ್ರಮದ ಈ ವಿಡಿಯೋ ಎಲ್ಲರ ಮನ ಗೆದ್ದಿದೆ. ಈ ವಿಡಿಯೋವನ್ನು (video) ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಟ್ವಿಟರ್ನಲ್ಲಿ (twitter) ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರು ಹೃದಯಸ್ಪರ್ಶಿ ಶೀರ್ಷಿಕೆಯನ್ನು ಕೂಡಾ ಬರೆದಿದ್ದಾರೆ.
कद कितना ही छोटा हो, हर कोई किसी की यथासंभव #Help कर सकता है.
Well done kid. God Bless you.VC- Social Media.#HelpChain #Kindness #BeingKind pic.twitter.com/yQu4k5jyh1
— Dipanshu Kabra (@ipskabra) December 7, 2021
ಈ ಮಗುವಿಗೆ ಹ್ಯಾಂಡ್ ಪಂಪ್ ಅನ್ನು ಬಳಸುವುದು ಕಷ್ಟವಾಗುತ್ತಿದೆ. ಆದರೂ ತನ್ನ ಶಕ್ತಿ ಮೀರಿ, ಪ್ರಯತ್ನಿಸಿ, ನಾಯಿಯ ದಾಹ ನೀಗಿಸುತ್ತದೆ ಮಗು. ಮಗು ಜಿಗಿದು ಜಿಗಿದು ಹ್ಯಾಂಡ್ ಪಂಪನ್ನು ಬಳಸುತ್ತಿದೆ. ಪಂಪ್ ನಿಂದ ಬರುವ ನಿರನ್ನು ಕುಡಿದು ನಾಯಿ ಕೂಡಾ ತನ್ನ ಬಾಯಾರಿಕೆಯನ್ನು ತೀರಿಸಿಕೊಳ್ಳುತ್ತದೆ.
ಇದನ್ನೂ ಓದಿ : Viral Video: ಹಸೆಮಣೆ ಮೇಲೆ ವರಮಾಲೆ ಎಸೆದು ಹೋದ ವಧು, ಮುಂದೇನಾಯ್ತು, ನೀವೇ ನೋಡಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ