ನವದೆಹಲಿ : 2021ನೇ ವರ್ಷಕ್ಕೆ ಕಾಲಿಡಲಿದ್ದು, ಹೊಸ ವರ್ಷ ಆರಂಭವಾಗಲಿದೆ. ಮುಂಬರುವ ವರ್ಷವು ಅತ್ಯಂತ ಯಶಸ್ವಿಯಾಗಿರಬೇಕು ಎಂದು ಬಯಸಿದರೆ ಇದಕ್ಕಾಗಿ ಉತ್ತಮ ಅವಕಾಶವಿದೆ. ಡಿಸೆಂಬರ್ 30 ರಂದು ಸಫಲ ಏಕಾದಶಿ (saphala ekadashi). ಈ ದಿನದಂದು ವಿಶೇಷವಾದ ಕಾರ್ಯವನ್ನು ಮಾಡುವುದರಿಂದ ವಿಷ್ಣುವನ್ನು (Lord Vishnu) ಒಲಿಸಿಕೊಳ್ಳಬಹುದು. ಅಲ್ಲದೆ ವಿಷ್ಣು ನಮ್ಮ ಮನದ ಆಸೆಯನ್ನು ಈಡೆರಿಸುತ್ತಾನೆ. ಮಾರಾಲ್ಲ ಜೀವನದಲ್ಲಿ ಸಾಕಷ್ಟು ಪ್ರಗತಿ ಸಿಗುತ್ತದೆ. ಇದಲ್ಲದೆ, ಇದು 2021ರ ಕೊನೆಯ ಏಕಾದಶಿಯಾಗಿದೆ.
ಸಫಲ ಏಕಾದಶಿ ಅನದರೆ ಏನು ?
ಪೌಷ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲ ಏಕಾದಶಿ (saphala ekadashi). ಎಂದು ಕರೆಯಲಾಗುತ್ತದೆ. ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ (Astrology), ಈ ದಿನದಂದು ಉಪವಾಸ ಕೈಗೊಳ್ಳುವುದರಿಂದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಈ ದಿನದಂದು ಉಪವಾಸ ಆಚರಿಸುವವರ ಮೇಲೆ ವಿಷ್ಣುವಿನ (Lord Vishnu) ವಿಶೇಷ ಅನುಗ್ರಹವಿರುತ್ತದೆ. ಪುರಾಣಗಳ ಪ್ರಕಾರ, ಮಹಾಭಾರತಕ್ಕೂ ಮೊದಲು ಪಾಂಡವರು ಸಫಲ ಏಕಾದಶಿಯ ಉಪವಾಸವನ್ನು ಆಚರಿಸಿದ್ದರೂ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ನಾಳೆಯಿಂದ ಧನುರ್ ಮಾಸ ಆರಂಭ, ಈ ತಿಂಗಳಲ್ಲಿಯೂ ನಡೆಸಬಹುದು ಈ ಶುಭ ಕಾರ್ಯಗಳನ್ನು
ಮಂಗಳಕರ ಸಮಯ ಮತ್ತು ಪೂಜಾ ವಿಧಾನ :
ಸಫಲ ಏಕಾದಶಿ ಡಿಸೆಂಬರ್ 29 ರಂದು ಸಂಜೆ 04:12 ರಿಂದ ಪ್ರಾರಂಭವಾಗಿ, ಡಿಸೆಂಬರ್ 30 ರಂದು ಮಧ್ಯಾಹ್ನ 01:40 ರವರೆಗೆ ಇರುತ್ತದೆ. ಪೂಜೆಗೆ ಶುಭ ಸಮಯ ಮಧ್ಯಾಹ್ನ 1 ಗಂಟೆಯ ಮೊದಲು ಇರುತ್ತದೆ. ಆದರೆ ಉಪವಾಸ ಪಾರಣ ಡಿಸೆಂಬರ್ 31 ರಂದು ಬೆಳಿಗ್ಗೆ 07:14 ರಿಂದ 09:18 ನಿಮಿಷಗಳವರೆಗೆ ಇರುತ್ತದೆ. ಸಫಲ ಏಕಾದಶಿಯ ದಿನ ಪ್ರಾತಃಕಾಲ ಸ್ನಾನ ಮಾಡಿ ವಿಷ್ಣುವಿನ (Lord Vishnu) ದರ್ಶನ ಪಡೆದು ವ್ರತವನ್ನು ಆರಂಭಿಸಬೇಕು.
ಪೂಜೆಗಾಗಿ ಅರಿಶಿನ-ಅಕ್ಷತೆಯನ್ನು ದೇವರಿಗೆ ಅರ್ಪಿಸಿ. ನಂತರ ಧೂಪ-ದೀಪವನ್ನು ಬೆಳಗಬೇಕು. ಹಣ್ಣುಗಳು, ಪಂಚಾಮೃತ, ತೆಂಗಿನಕಾಯಿ, ವೀಳ್ಯದೆಲೆ, ಆಮ್ಲಾ, ದಾಳಿಂಬೆ ಮತ್ತು ಲವಂಗ ಇತ್ಯಾದಿಗಳನ್ನು ಅರ್ಪಿಸಿ. ಉಪವಾಸದ ದಿನದಂದು ಗರಿಷ್ಠ ಸಮಯದವರೆಗೆ ಶ್ರೀ ಹರಿ ನಾಮವನ್ನು ಜಪಿಸಲು ಪ್ರಯತ್ನಿಸಿ. ಇದಲ್ಲದೇ ಉಪವಾಸದ ಮರುದಿನ ಬಡವರಿಗೆ ಅನ್ನದಾನ ಮಾಡಿ.
ಇದನ್ನೂ ಓದಿ : Vastu Shastra: ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಒಳ್ಳೆಯದೇ? ನಿಮಗಿದು ಗೊತ್ತಿರಲಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.