ನವದೆಹಲಿ : ಆಸ್ಟ್ರೇಲಿಯಾದ ಸ್ಫೋಟಕ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಶೀಘ್ರದಲ್ಲೇ ಭಾರತದ ಅಳಿಯನಾಗಲಿದ್ದಾರೆ. ಇದನ್ನು ಗ್ಲೆನ್ ಮ್ಯಾಕ್ಸ್ವೆಲ್ ಅವರ ಭಾರತೀಯ ಮೂಲದ ಗೆಳತಿ ವಿನಿ ರಾಮನ್ (Vini Raman) ಬಹಿರಂಗಪಡಿಸಿದ್ದಾರೆ. ಮುಂದಿನ ವರ್ಷ ಮ್ಯಾಕ್ಸ್ವೆಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕಾಗಿ ಆಡುತ್ತಾರೆ. ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಕಳೆದ ವರ್ಷ ಭಾರತೀಯ ಮೂಲದ ಗೆಳತಿ ವಿನಿ ರಾಮನ್ ಅವರೊಂದಿಗೆ ಭಾರತೀಯ ಸಂಪ್ರದಾಯಗಳ ಪ್ರಕಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಶೀಘ್ರದಲ್ಲೇ ಭಾರತದ ಅಳಿಯನಾಗಲಿರುವ್ ಮ್ಯಾಕ್ಸ್ವೆಲ್ :
ಕಳೆದ ವರ್ಷ ಮಾರ್ಚ್ನಲ್ಲಿ ಮ್ಯಾಕ್ಸ್ವೆಲ್ (Glenn Maxwell) ಭಾರತೀಯ ಸಂಪ್ರದಾಯದ ಪ್ರಕಾರ ವಿನಿ ರಾಮನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರಿಬ್ಬರ ಫೋಟೋಗಳು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ (Social media) ಸಾಕಷ್ಟು ವೈರಲ್ ಆಗಿದ್ದವು. ಮ್ಯಾಕ್ಸ್ವೆಲ್ ವಿನ್ನಿಯೊಂದಿಗೆ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ವಿನಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ಮ್ಯಾಕ್ಸ್ವೆಲ್ ಜೊತೆಗಿನ ಅನೇಕ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. 2019 ರಲ್ಲಿ, ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಮ್ಯಾಕ್ಸ್ವೆಲ್ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಮತ್ತೆ ಅವರನ್ನು ಸಹಾಜ್ ಸ್ಥಿತಿಗೆ ಮರಳುವಂತೆ ಮಾಡಿರುವುದರಲ್ಲಿ ವಿನ್ನಿ ಪಾತ್ರ ಬಹಳಷ್ಟಿದೆ. ಈ ಮಾಹಿತಿಯನ್ನು ಸ್ವತಃ ಮ್ಯಾಕ್ಸ್ವೆಲ್ ನೀಡಿದ್ದಾರೆ.
ಇದನ್ನೂ ಓದಿ : Virat Vs Ganugly : ಕೊಹ್ಲಿ ಹೇಳಿಕೆಗೆ ಪ್ರತೀಕಾರ ತೀರಿಸಿಕೊಂಡ ಗಂಗೂಲಿ : ಈಗ ಕೈಗೊಳ್ಳಲಿದೆಯೇ BCCI
ಭಾರತೀಯ ಹುಡುಗಿಯನ್ನು ವರಿಸಲಿರುವ ಮ್ಯಾಕ್ಸ್ವೆಲ್ :
ಗ್ಲೆನ್ ಮ್ಯಾಕ್ಸ್ವೆಲ್ ಕಳೆದ ವರ್ಷ ಭಾರತೀಯ ಮೂಲದ ಗೆಳತಿ ವಿನಿ ರಾಮನ್ (Vini Raman) ಅವರೊಂದಿಗೆ ಭಾರತೀಯ ಸಂಪ್ರದಾಯಗಳ ಪ್ರಕಾರ ನಿಶ್ಚಿತಾರ್ಥ ಮಾಡಿಕೊಂಡರು. ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ವಿನಿ ರಾಮನ್ ಅವರ ನಿಶ್ಚಿತಾರ್ಥದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.
ಶೀಘ್ರದಲ್ಲೇ ನೆರವೇರಲಿದೆ ವಿವಾಹ :
ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ವಿನಿ ರಾಮನ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಭಾರತದ ಅಳಿಯನಾಗುವ ಎರಡನೇ ಆಸ್ಟ್ರೇಲಿಯಾದ ಆಟಗಾರನಾಗಲಿದ್ದಾರೆ. ವಿನಿ ರಾಮನ್ ಅವರನ್ನು ಮದುವೆಯಾದ ನಂತರ, ಮ್ಯಾಕ್ಸ್ವೆಲ್ ಶಾನ್ ಟೈಟ್ ನಂತರ ಭಾರತೀಯ ಮೂಲದ ಹುಡುಗಿಯನ್ನು ವಧುವಾಗಿ ಹೊಂದಿರುವ ಎರಡನೇ ಆಸ್ಟ್ರೇಲಿಯಾದ ಆಟಗಾರನಾಗಲಿದ್ದಾರೆ. 2014 ರಲ್ಲಿ, ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಶಾನ್ ಟೈಟ್ ಭಾರತೀಯ ಮೂಲದ ಮಾಸೂಮ್ ಸಿಂಘಾ ಅವರನ್ನು ವಿವಾಹವಾದರು.
ಇದನ್ನೂ ಓದಿ : Sunil GavaSkar : ನಾಯಕತ್ವ ಸ್ಥಾನದಿಂದ ಕೊಹ್ಲಿ ವಜಾ : ಕಾರಣ ಬಹಿರಂಗಪಡಿಸಿದ ಸುನಿಲ್ ಗವಾಸ್ಕರ್!
ಖಿನ್ನತೆಯ ಸಮಯದಲ್ಲಿ ಬೆಂಬಲಿಸಿದ ವಿನಿ ರಾಮನ್ :
2019 ರಲ್ಲಿ, ಮ್ಯಾಕ್ಸ್ವೆಲ್ ತಮ್ಮ ಮಾನಸಿಕ ಸ್ಥಿತಿಯ ಕಾರಣದಿಂದಾಗಿ, ಕ್ರಿಕೆಟ್ನಿಂದ ವಿರಾಮ ತೆಗೆದುಕೊಂಡಿದ್ದರು.
ಮ್ಯಾಕ್ಸ್ವೆಲ್ ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದ್ದರು, ಇದರಿಂದಾಗಿ ಮಾನಸಿಕ ಆರೋಗ್ಯದ ಕಾರಣ ಅಕ್ಟೋಬರ್ 2019 ರಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಾಯಿತು.
ವಿನಿ ರಾಮನ್ನಿಂದಾಗಿ ಮತ್ತೆ ಕ್ರಿಕೆಟ್ಗೆ ಮರಳಿದ ಮ್ಯಾಕ್ಸ್ವೆಲ್ :
ಆದರೆ ನಂತರ ಮ್ಯಾಕ್ಸ್ವೆಲ್ ಅವರು ವಿನಿ ರಾಮನ್ನಿಂದಾಗಿ ಮತ್ತೆ ಕ್ರಿಕೆಟ್ಗೆ ಮರಳುವಂತಾಯಿತು. ತನ್ನಲ್ಲಿನ ಬದಲಾವಣೆಯನ್ನು ಮೊದ್ಲು ಗುರುತಿಸಿದ್ದೇ ವಿನಿ ಎನ್ನುತ್ತಾರೆ ಮ್ಯಾಕ್ಸ್ವೆಲ್ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.