ಪಾಟ್ನಾ: ಭ್ರಷ್ಟ ಅಧಿಕಾರಿಗಳ ವಿರುದ್ಧ ವಿಶೇಷ ಜಾಗೃತ ದಳದ ದಾಳಿ ಮುಂದುವರೆದಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ವಿಯು (Special Vigilance Unit) ಶುಕ್ರವಾರ ಸಮಸ್ತಿಪುರದ ಸಬ್ರಿಜಿಸ್ಟ್ರಾರ್ ಮಣಿ ರಂಜನ್ (Mani Ranjan) ಮೇಲೆ ದಾಳಿ ನಡೆದಿದೆ. ಸಬ್ ರಿಜಿಸ್ಟ್ರಾರ್ನ 3 ಸ್ಥಳಗಳ ಮೇಲೆ ನಡೆದ ಈ ದಾಳಿಯಲ್ಲಿ, ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ದಾಳಿ ವೇಳೆ ಪತ್ತೆಯಾದ ಆಸ್ತಿ, ಸಂಪತ್ತು ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ.
1.62 ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿರುವ ಸಬ್ ರಿಜಿಸ್ಟ್ರಾರ್ :
ಸಮಸ್ತಿಪುರ ಸಬ್ ರಿಜಿಸ್ಟ್ರಾರ್ ಮಣಿರಂಜನ್ (Mani Ranjan) ಸರ್ಕಾರಿ ಹುದ್ದೆಯಲ್ಲಿದ್ದಾಗ 1.62 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದರು. ಏಕಕಾಲದಲ್ಲಿ ಪಾಟ್ನಾ (Patna), ಮುಜಾಫರ್ಪುರ ಮತ್ತು ಸಮಸ್ತಿಪುರದಲ್ಲಿ (Samastipur Sub Registrar) ದಾಳಿ ನಡೆಸಿದ ಅಧಿಕಾರಿಗಳು ಈ ಹಣವನ್ನು ಜಪ್ತಿ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಗಳಿಕೆ ಆರೋಪ ನಿಜವೆಂದು ಕಂಡು ಬಂದ ಹಿನ್ನೆಲೆಯಲ್ಲಿ ಸಬ್ ರಿಜಿಸ್ಟ್ರಾರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ : UIDAI: ನವಜಾತ ಶಿಶುಗಳಿಗೆ ಶೀಘ್ರದಲ್ಲೇ ಆಸ್ಪತ್ರೆಯಲ್ಲಿಯೇ ಸಿಗಲಿದೆ ಆಧಾರ್ ಸಂಖ್ಯೆ
ಸಬ್ ರಿಜಿಸ್ಟ್ರಾರ್ ವಿರುದ್ಧ ಈ ಸೆಕ್ಷನ್ಗಳ ಅಡಿಯಲ್ಲಿ ಕ್ರಮ:
ಪಾಟ್ನಾ ಅವರು ಸಬ್ ರಿಜಿಸ್ಟ್ರಾರ್ ಮಣಿ ರಂಜನ್ ವಿರುದ್ಧ ಸೆಕ್ಷನ್ 13(B), R/W 13(13)(D), R/W ಸೆಕ್ಷನ್ 12 ಮತ್ತು IPC ಯ ಕಲಂ 120B ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಾದ ಬಳಿಕ ಸಬ್ ರಿಜಿಸ್ಟ್ರಾರ್ (SVU) ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ನ್ಯಾಯಾಲಯಕ್ಕೆ (Special Court) ವಿಶೇಷ ಜಾಗೃತ ದಳ ಅನುಮತಿ ಕೋರಿತ್ತು. ಕೋರ್ಟ್ (Court) ಅನುಮತಿ ಪಡೆದು ಶುಕ್ರವಾರ ಬೆಳಗ್ಗೆ ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿದೆ.
ದಾಳಿಯಲ್ಲಿ 500 ಮತ್ತು 2000ದ ನೋಟುಗಳಿದ್ದ ಚೀಲಗಳು ಪತ್ತೆ :
ಸಮಸ್ತಿಪುರ ಸಬ್ ರಿಜಿಸ್ಟ್ರಾರ್ ಮಣಿರಂಜನ್ ಅವರಿಗೆ ಸೇರಿದ ಸ್ಥಳಗಳಲ್ಲಿ ನಡೆಸಿದ ದಾಳಿಯ ವೇಳೆ, 500 ಮತ್ತು 2000 ರೂಪಾಯಿಗಳ ಹಲವಾರು ಬಂಡಲ್ಗಳು ಪತ್ತೆಯಾಗಿವೆ.
ಇದನ್ನೂ ಓದಿ : Petrol Price : ಮತ್ತೆ ಅಗ್ಗವಾಗಲಿದೆ 'ಪೆಟ್ರೋಲ್ ಬೆಲೆ' : ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.