ದೌರ್ಜನ್ಯದ 5 ವರ್ಷಗಳ ನಂತರ ತಾವು ಎದುರಿಸಿದ ಅವಮಾನದ ಬಗ್ಗೆ ಬಿಚ್ಚಿಟ್ಟ ನಟಿ ಭಾವನಾ ಮೆನನ್

ಕೇರಳದಲ್ಲಿ ತನ್ನನ್ನು ಅಪಹರಿಸಿ ಲೈಂಗಿಕ ಕಿರುಕುಳಕ್ಕೊಳಗಾದ ಆರೋಪದ ಐದು ವರ್ಷಗಳ ನಂತರ, ಮಲಯಾಳಂ ನಟಿ ಭಾವನಾ ಮೆನನ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ತಾವು ಎದುರಿಸಿದ ಅವಮಾನದ ಬಗ್ಗೆ ಮಾತನಾಡಿದ್ದಾರೆ.

Edited by - Chetana Devarmani | Last Updated : Jan 10, 2022, 05:27 PM IST
  • ಕೇರಳದಲ್ಲಿ ತನ್ನನ್ನು ಅಪಹರಿಸಿ ಲೈಂಗಿಕ ಕಿರುಕುಳಕ್ಕೊಳಗಾದ ಆರೋಪ
  • ನನ್ನನ್ನು ಅವಮಾನಿಸಲು ಹಲವು ಪ್ರಯತ್ನಗಳು ನಡೆದಿವೆ
  • ನಟಿ ಭಾವನಾ ಮೆನನ್ Instagram ನಲ್ಲಿ ಪೋಸ್ಟ್
ದೌರ್ಜನ್ಯದ 5 ವರ್ಷಗಳ ನಂತರ ತಾವು ಎದುರಿಸಿದ ಅವಮಾನದ ಬಗ್ಗೆ ಬಿಚ್ಚಿಟ್ಟ ನಟಿ ಭಾವನಾ ಮೆನನ್  title=
ನಟಿ ಭಾವನಾ ಮೆನನ್

ನವದೆಹಲಿ: ಕೇರಳದಲ್ಲಿ ತನ್ನನ್ನು ಅಪಹರಿಸಿ ಲೈಂಗಿಕ ಕಿರುಕುಳಕ್ಕೊಳಗಾದ ಆರೋಪದ ಐದು ವರ್ಷಗಳ ನಂತರ, ಮಲಯಾಳಂ ನಟಿ ಭಾವನಾ ಮೆನನ್ (Malayalam actress Bhavana Menon) ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ತಾವು ಎದುರಿಸಿದ ಅವಮಾನದ ಬಗ್ಗೆ ಮಾತನಾಡಿದ್ದಾರೆ.

"ಇದು ಸುಲಭದ ಪ್ರಯಾಣವಲ್ಲ.  ಈಗ 5 ವರ್ಷಗಳಿಂದ, ನನ್ನ ಮೇಲೆ ಮಾಡಿದ ಹಲ್ಲೆಯ ಭಾರದಲ್ಲಿ ನನ್ನ ಹೆಸರು ಮತ್ತು ನನ್ನ ಗುರುತು ಹತ್ತಿಕ್ಕಲಾಗಿದೆ. ನನ್ನನ್ನು ಅವಮಾನಿಸುವ, ಮೌನಗೊಳಿಸುವ ಮತ್ತು ಪ್ರತ್ಯೇಕಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಮುಂದಾದ ಕೆಲವರನ್ನು ನಾನು ಹೊಂದಿದ್ದೇನೆ" ಎಂದು ಅವರು Instagram ನಲ್ಲಿ ಬರೆದುಕೊಂಡಿದ್ದಾರೆ.

2017ರಲ್ಲಿ ನಗರದ ಹೊರವಲಯದಲ್ಲಿ ಶೂಟಿಂಗ್‌ ನಿಯೋಜನೆ ಮುಗಿಸಿಕೊಂಡು ಕೊಚ್ಚಿಗೆ ಹಿಂತಿರುಗುತ್ತಿದ್ದಾಗ ಭಾವನಾ ಅವರ ಮೇಲೆ ದಾಳಿ ನಡೆದಿತ್ತು. ಅವರ ವಾಹನವನ್ನು ದಾರಿತಪ್ಪಿಸಲಾಗಿತ್ತು ಮತ್ತು ಕ್ರಿಮಿನಲ್ ಗ್ಯಾಂಗ್ ವ್ಯಾನ್‌ನಲ್ಲಿ ಅಪಹರಿಸಿತು.

 

 

ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (alleged sexual assault case) ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದಿಲೀಪ್ ಮತ್ತು ಇತರ ಐವರ ವಿರುದ್ಧ ಕೇರಳ ಪೊಲೀಸರ ಕ್ರೈಂ ಬ್ರಾಂಚ್ ವಿಭಾಗ ಭಾನುವಾರ ಪ್ರಕರಣ ದಾಖಲಿಸಿದೆ.

ಪ್ರಕರಣದ ಇತ್ತೀಚಿನ ಬೆಳವಣಿಗೆಯ ನಂತರ ಭಾವನಾ ಅವರ ಪೋಸ್ಟ್ ಬಂದಿದೆ. ಈ ಪೋಸ್ಟ್‌ನಲ್ಲಿ ಭಾವನಾ, ನಾನು ಬಿಡುವುದಿಲ್ಲ ಮತ್ತು ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಂ.ಎಸ್ ಧೋನಿ ಮದುವೆಗೂ ಮುನ್ನ ದೀಪಿಕಾ ಪಡುಕೋಣೆ ಸೇರಿ ಈ ನಟಿಮಣಿಯರ ಜತೆ ಡೇಟಿಂಗ್ ಮಾಡಿದ್ದರಂತೆ!? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News