ಬೆಂಗಳೂರು : ದೇಶದಲ್ಲಿ ಕರೋನ ವೈರಸ್ (Coronavirus) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲೂ ಕರೋನಾ ಆತಂಕ ಮನೆ ಮಾಡಿದೆ. ಇದೀಗ ಬೆಂಗಳೂರಿನಲ್ಲಿ ನಿತ್ಯ ಸೋಂಕಿತರ ಸಂಖ್ಯೆ ೩೦ ಸಾವಿರದ ಗಡಿ ದಾಟಿದೆ. ಅಲ್ಲದೆ, ಪ್ರತೀ ದಿನ ಬೆಂಗಳೂರಿನಲ್ಲಿ 5 ರಿಂದ 10 ಜನ ಕೊರೊನಾಗೆ (Corona) ಬಲಿಯಾಗುತ್ತಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ರಾಜ್ಯ ರಾಜಧಾನಿಯಲ್ಲಿ ಕರೋನ ಮೂರನೇಯ ಅಲೆ ಆರಂಭವಾಯಿತೇ ಎಂಬ ಭಯ ಎದುರಾಗಿದೆ.
30 ಸಾವಿರ ದಾಟಿದ ನಿತ್ಯದ ಸೋಂಕಿತರ ಸಂಖ್ಯೆ :
ರಾಜ್ಯ ರಾಜಧಾನಿಯಲ್ಲಿ ಕರೋನಾ (COVID-19) ಅಟ್ಟಹಾಸ ಮುಂದುವರೆದಿದೆ. ಪ್ರತಿದಿನ ಬೆಂಗಳೂರಿನಲ್ಲಿ 5 ರಿಂದ 10 ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ನಿತ್ಯ ಸೋಂಕಿತರ ಸಂಖ್ಯೆ ೩೦ ಸಾವಿರದ ಗಡಿ ದಾಟಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ, 3ನೇ ಅಲೆಯಲ್ಲಿ ಆಗುತ್ತಿರುವ ಸಾವುಗಳಿಗೆ ಕಾರಣ ಏನು.? ಎನ್ನುವ ಪ್ರಶ್ನೆ ಕೂಡಾ ಕಾಡುತ್ತಿದೆ.
ಇದನ್ನೂ ಓದಿ : ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ: ಆರಗ ಜ್ಞಾನೇಂದ್ರ
ಲಸಿಕೆ ಪಡೆದಿದ್ದರೂ ಯಾಕೆ ಸಂಭವಿಸುತ್ತಿದೆ ಸಾವು ?
ಈ ಮಧ್ಯೆ, ಡಬಲ್ ಡೋಸ್ ಲಸಿಕೆ (Corona Vaccine) ಪಡೆದಿದ್ದರೂ, ಸಾವು ಸಂಭವಿಸುತ್ತಿರುವ ಬಗ್ಗೆ ಹಲವರಲ್ಲಿ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೃತಪಟ್ಟವರಿಗೆ ಕೋಮಾರ್ಬಿಡಿಟಿ ಇತ್ತಾ ಎಂಬವುದರ ಬಗ್ಗೆ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ.
ಸದ್ಯ ಬೆಂಗಳೂರಿನಲ್ಲಿ ಕಳೆದ 7 ದಿನಗಳಲ್ಲಿ 33 ಜನ ಕೊರೊನಾಗೆ ಬಲಿ:
ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ 33 ಜನ ಕರೋನಾದಿಂದ (Corona in Bengaluru) ಮೃತಪಟ್ಟಿದ್ದಾರೆ. ಈ ಪೈಕಿ 22 ಮಂದಿ, ಅನ್ಯ ರೋಗಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕರೋನ ಸೋಂಕು ಧೃಡಪಟ್ಟ ನಂತರ ನಿಧನರಾಗಿದ್ದಾರೆ. ಇನ್ನು ಉಳಿದ 11 ಜನ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.
* 21 ರಿಂದ 40 ವರ್ಷದ 5 ಮಂದಿ ಸಾವು
* 41-60 ವಯಸ್ಸಿನ 9 ಜನ ಸಾವು
* 61-100 ವಯಸ್ಸಿನ 19 ಜನ ಸಾವು
ಇದನ್ನೂ ಓದಿ : ಪ್ರಾಣಿಗಳಿಗೂ 'ಕೊರೊನಾ' ಸಂಕಷ್ಟ! ಲಾಕ್ ಡೌನ್ ಮಾಡಿದ್ರೆ ಮತ್ತಷ್ಟು ಕಷ್ಟ ಕಷ್ಟ..
7 ಮಂದಿ ಡಬಲ್ ಡೋಸ್ ವ್ಯಾಕ್ಸಿನ್ ಪಡೆದಿದ್ದರೂ ಕೊರೊನಾಗೆ ಬಲಿ :
ಕರೋನಾದಿಂದ ಮೃತಪಟ್ಟವರಲ್ಲಿ 7 ಮಂದಿ ಎರಡೂ ಡೋಸ್ ಕರೋನ ಲಸಿಕೆ (Corona Vaccine) ಪಡೆದಿದ್ದರು. ಅಲ್ಲದೆ, ಈ ಏಳು ಮಂದಿಗೆ ಬೇರೆ ಯಾವುದೇ ಕಾಯಿಲೆ ಕೂಡಾ ಇರಲಿಲ್ಲ. ಯಾವುದೇ ಖಾಯಿಲೆ ಇಲ್ಲದೆ ಇದ್ದರೂ, ಕೊರೊನಾದಿಂದ ಮೃತ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ 7 ಮಂದಿಯ ಸಾವಿಗೆ ಕಾರಣ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದೆ.
20 ವರ್ಷದೊಳಗಿನ 12 ವರ್ಷದ ಒಂದು ಮಗು ಕೊರೊನಾಗೆ ಬಲಿಯಾಗಿದ್ದು, ಈ ಮಗು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿತ್ತು. ಇನ್ನು, 21-40 ವಯಸ್ಸಿನ 5 ಜನರ ಪೈಕಿ 4 ಜನ ವ್ಯಾಕ್ಸಿನ್ ಪಡೆದಿರಲಿಲ್ಲ, ಈ ನಾಲ್ಕು ಜನ ಸಿಂಗಲ್ ಡೋಸ್ ವ್ಯಾಕ್ಸಿನ್ (Double dose vaccine) ಕೂಡ ಪಡೆದಿರಲ್ಲಿಲ್ಲ. ವ್ಯಾಕ್ಸಿನ್ ಪಡೆಯದೇ ಇರುವ ಕಾರಣ, ಕರೋನ ಕಾಣಿಸಿಕೊಂಡ ನಂತರ ತೀವ್ರ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಸಿ ಮೃತಪಟ್ಟಿದ್ದಾರೆ.
ಅನ್ಯರೋಗಗಳಿಂದ ಬಳಲುತ್ತಿದ್ದ 22 ಮಂದಿ :
ಇನ್ನು ಕೊರೊನಾ (Coronavirus) ಸೋಂಕು ತಗುಲಿ ಮೃತ ಪಟ್ಟ ೨೨ ಮಂದಿ ಇತರ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ರೋಗಿಗಳು ಅಂಗಾಂಗ ವೈಫಲ್ಯ, ಬಿಪಿ, ಶುಗರ್, ಕಿಡ್ನಿ ವೈಫಲ್ಯ, ಲಿವರ್ ಫೇಲ್ಯೂರ್ ನಂತಹ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ರೋಗಿಗಳು ಕೂಡಾ ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದರು. ಆದರೆ ಇತರ ರಿಗಗಳಿಂದ ಬಳಲುತ್ತಿದ್ದ ಕಾರಣ, ಕರೋನಾ ಸೋಂಕು ದೃಢ ಪಟ್ಟ ನಂತರ ಮೃತಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ