ನವದೆಹಲಿ: ಬೋಲ್ಯಾಂಡ್ ಪಾರ್ಕ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಸೋಲನ್ನು ಅನುಭವಿಸುವ ಮೂಲಕ ಮುಖಭಂಗ ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ರಿಷಬ್ ಪಂತ್ 85, ಹಾಗೂ ಕೆ.ಎಲ್.ರಾಹುಲ್ 55 ಅವರ ಅರ್ಧಶತಕದ ನೆರವಿನಿಂದಾಗಿ ಆರು ವಿಕೆಟ್ ನಷ್ಟಕ್ಕೆ 287 ರನ್ ಗಳನ್ನು ಗಳಿಸಿತು.
ಇದನ್ನೂ ಓದಿ: Oscars 2022 : 2022 ರ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ತಮಿಳು ಸಿನಿಮಾ 'ಜೈ ಭೀಮ್'!
288 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಜನ್ನೆಮನ್ ಮಾಲನ್ ಅವರ 91 ಹಾಗೂ ಕ್ವಿಂಟನ್ ಡಿಕಾಕ್ ಅವರ 78 ರನ್ ಗಳ ನೆರವಿನಿಂದಾಗಿ ಕೇವಲ ಮೂರು ವಿಕೆಟ್ ಗಳ ನಷ್ಟಕ್ಕೆ ಇನ್ನೂ 11 ಎಸೆತಗಳು ಬಾಕಿ ಇರುವಂತೆ ಗೆಲುವನ್ನು ಸಾಧಿಸಿತು.ಡಿಕಾಕ್ ಮತ್ತು ಮಾಲನ್ ಅವರ ಮೊದಲ ವಿಕೆಟ್ ಗೆ 132 ರನ್ ಗಳ ಜೊತೆಯಾಟದಿಂದಾಗಿ ತಂಡವು ಉತ್ತಮ ಆರಂಭವನ್ನು ಕಂಡಿತು.
South Africa seal comfortable win to take unassailable lead in the series 👏🏻
Half-centuries from openers Janneman Malan and Quinton de Kock take them to a 2-0 series win! 👌🏻
Watch the series live on https://t.co/CPDKNxoJ9v (in select regions)#SAvIND | https://t.co/GgjKcxXNrB pic.twitter.com/MWeG1l4y6s
— ICC (@ICC) January 21, 2022
ಈಗ ಭಾರತ ತಂಡವು ಏಕದಿನ ಸರಣಿಯಲ್ಲಿ ಸೋಲನ್ನು ಅನುಭವಿಸುವುದರ ಮೂಲಕ ಟೆಸ್ಟ್ ಜೊತೆಗೆ ಏಕದಿನ ಪಂದ್ಯದಲ್ಲೂ ಮುಖಭಂಗವನ್ನು ಅನುಭವಿಸಿದೆ. ಇನ್ನೊಂದೆಡೆಗೆ ಮುಂದಿನ ನಾಯಕನೆಂದೇ ಬಿಂಬಿತವಾಗಿರುವ ಕೆ.ಎಲ್.ರಾಹುಲ್ ಈಗ ಸತತವಾಗಿ ಎರಡೂ ಪಂದ್ಯಗಳಲ್ಲಿ ಸೋಲನ್ನು ಅನುಭವಿಸುವುದರ ಮೂಲಕ ಸರಣಿ ಕೂಡ ಕೈ ತಪ್ಪಿದಂತಾಗಿದೆ.
ಇದನ್ನೂ ಓದಿ: Watch: ಉಲ್ಟಾ ಬ್ಲೌಸ್ ಧರಿಸಿ ಸುದ್ದಿಯಾದ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.