ಬೆಂಗಳೂರು: ಕೊಪ್ಪಳದಲ್ಲಿ ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸುವ ಕುರಿತಂತೆ ಸ್ಥಳ ವೀಕ್ಷಣೆ ಮಾಡಿ, ವರದಿ ತಯಾರಿಸಲು ಕ್ರಮ ವಹಿಸಿ ಎಂದು ಕರ್ನಾಟಕ ಸರ್ಕಾರದ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯ ಹಟ್ಟಿ, ಕಲಕೇರಿ ಮತ್ತು ತಾಳಕನಕಾಪೂರ ಗ್ರಾಮಗಳಲ್ಲಿ ಗುರುತಿಸಿರುವ 669 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸುವ ಕುರಿತು ಕೆ.ಎಸ್.ಐ.ಐ.ಡಿ.ಸಿ ನಿಗಮದಿಂದ ಸ್ಥಳ ಪರಿವೀಕ್ಷಣೆಯನ್ನು ಕೈಗೊಂಡು, ನಂತರ ಎಎಐ ಸಂಸ್ಥೆಯಿಂದ ಪೂರ್ವ-ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ : Gold price today : ಚಿನ್ನಾಭರಣ ಪ್ರಿಯರ ಗಮನಕ್ಕೆ : ಇಂದು ಮತ್ತೆ ಚಿನ್ನ - ಬೆಳ್ಳಿ ಬೆಲೆ ಏರಿಕೆ
ಕೇಂದ್ರ ವಿಮಾನಯಾನ ಸಚಿವಾಲಯದಿಂದ ಕೊಪ್ಪಳ ವಿಮಾನ ನಿಲ್ದಾಣಕ್ಕೆ ಅವಶ್ಯವಿರುವ ಅನುಮೋದನೆಗಳನ್ನು ರಾಜ್ಯ ಸರ್ಕಾರವು ತೆಗೆದುಕೊಳ್ಳುವುದು. ತದನಂತರ ವಿಮಾನ ನಿಲ್ದಾಣಕ್ಕೆ ಗುರುತಿಸುವ ಜಮೀನುಗಳ ಭೂ-ಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಸಚಿವರು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ, ಕೊಪ್ಪಳದಲ್ಲಿ ಭಲ್ಟೋಟ ವಿಮಾನ ನಿಲ್ದಾಣವು ಮೇ: ಎಂ.ಎಸ್.ಪಿ.ಎಲ್ ಖಾಸಗಿ ಸಂಸ್ಥೆಯ ಒಡೆತನದಲ್ಲಿದ್ದು, ಭಲ್ಟೋಟ ವಿಮಾನ ನಿಲ್ದಾಣವು ಪ್ರಾದೇಶಿಕ ವಾಯು ಸಂಪರ್ಕ (ಆರ್.ಸಿ.ಎಸ್) ಯೋಜನೆ- 2.0ರಲ್ಲಿ ಆಯ್ಕೆಯಾಗಿರುತ್ತದೆ.
ಈ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಉಪಯೋಗಿಸುವ ಕುರಿತು ಮೇ: ಎಂ.ಎಸ್.ಪಿ.ಎಲ್ ಖಾಸಗಿ ಸಂಸ್ಥೆಯವರೊಂದಿಗೆ ಸರ್ಕಾರದ ವತಿಯಿಂದ ಹಲವಾರು ಪ್ರಯತ್ನಗಳನ್ನು ಮಾಡಲಾಗಿದ್ದರೂ ಸಹ ಆರ್.ಸಿ.ಎಸ್. ವಿಮಾನಗಳ ಕಾರ್ಯಾಚರಣೆಗೆ ಈ ಸಂಸ್ಥೆಯಿಂದ ಸಕಾರಾತ್ಮಕ ಪ್ರಕ್ರಿಯೆಯ ದೊರೆತಿರುವುದಿಲ್ಲ. ಎ.ಎ.ಐ.ನ ತಂಡವು ಫ್ರೆಬ್ರವರಿ-2021 ರಲ್ಲಿ ಕೊಪ್ಪಳದಲ್ಲಿನ ಭಲ್ಟೋಟ ವಿಮಾನ ನಿಲ್ದಾಣಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಸ್ತುತ 1703 * 30 ಮೀ. ಉದ್ದದ ರನ್-ವೇ ಇರುವುದಾಗಿ ಹಾಗೂ ಎಟಿಆರ್-72 ಮಾದರಿಯ ವಿಮಾನಗಳ ಕಾರ್ಯಾಚರಣೆಗಾಗಿ ಸುಮಾರು 257 ಎಕರೆ ಹೆಚ್ಚುವರಿ ಜಮೀನು ಬೇಕಾಗುತ್ತದೆಂದು ಹಾಗೂ ಎ-320 ಮಾದರಿಯ ವಿಮಾನಗಳ ಕಾರ್ಯಾಚರಣೆಗಾಗಿ ಸುಮಾರು 507 ಎಕರೆ ಹೆಚ್ಚುವರಿ ಜಮೀನು ಬೇಕಾಗುತ್ತದೆಂದು ಅಭಿಪ್ರಾಯವನ್ನು ವರದಿಯಲ್ಲಿ ಅವರು ತಿಳಿಸಿರುತ್ತಾರೆ ಎಂದರು.
ಇದನ್ನೂ ಓದಿ :'ಕೊರೊನಾ ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್'
ಕುಷ್ಟಗಿ ರಸ್ತೆಗೆ ಹೊಂದಿಕೊಂಡಿರು ಸುಮಾರು 669 ಎಕರೆ ಜಮೀನುಗಳಲ್ಲಿ ಭೂ-ಸ್ವಾಧೀನಪಡಿಸಿಕೊಂಡು ಹೊಸ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಲೋಕಸಭಾ ಸದಸ್ಯರು ಮತ್ತು ಶಾಸಕರುಗಳು ಮಾತನಾಡಿ, ಭಲ್ಡೋಟಾ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಉಪಯೋಗಕ್ಕೆ ವಿಮಾನ ನಿಲ್ದಾಣದ ಮಾಲೀಕರಿಂದ ಅನುಮತಿ ದೊರೆಯದ ಕಾರಣ ಹೊಸ ವಿಮಾನ ನಿಲ್ದಾಣವನ್ನು ಅಭಿವೃದ್ಧಿಸುವಂತೆ ತಿಳಿಸಿದರು.ಕೊಪ್ಪಳ ನಗರಕ್ಕೆ ಸಮೀಪವಿರುವ ವಿಮಾನ ನಿಲ್ದಾಣಗಳ ಬಗ್ಗೆ ಕಾರ್ಯಾಚರಣೆಯಲ್ಲಿರುವ ಮತ್ತು ಅಭಿವೃದ್ಧಿ ಪಡಿಸುತ್ತಿರುವ ವಿಮಾನ ನಿಲ್ದಾಣಗಳ ವಿವರಗಳ ಕುರಿತು ಕೆ.ಎಸ್.ಐ.ಐ.ಡಿ.ಸಿ ತಾತ್ರಿಕ ಸಲಹೆಗಾರರು ವಿವರಿಸಿದರು.
ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಬಸಪ್ಪ ಆಚಾರ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಪರಣ್ಣ ಮುನವಳ್ಳಿ, ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಬಸವರಾಜ ದಡೆಸೂಗೂರು, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Watch: ಉಲ್ಟಾ ಬ್ಲೌಸ್ ಧರಿಸಿ ಸುದ್ದಿಯಾದ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.