ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಂಗಾಳಿ ಹಾಡು ‘ಕಚ್ಚಾ ಬಾದಮ್’ ಸಾಮಾಜಿಕ ಮಾಧ್ಯಮ(Social Media)ದಲ್ಲಿ ಸಾಕಷ್ಟು ವೈರಲ್ ಆಗಿದೆ. ಅನೇಕ ಸೆಲೆಬ್ರೆಟಿಗಳು ಮತ್ತು ಸಾಮಾನ್ಯ ಜನರು ಈ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಈ ಹಾಡಿನ ಸಾಹಿತ್ಯಕ್ಕೆ ಮನಸೋತಿರುವ ಅನೇಕರು ರೀಲ್ಸ್ ಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಈ ಹಾಡನ್ನು ಇದೀಗ ರಾನು ಮಂಡಲ್(Ranu Mondal)ಕೂಡ ಹಾಡಿದ್ದು ಟ್ರೋಲ್ ಆಗಿದ್ದಾರೆ. ಭುವನ್ ಬಡ್ಯಾಕರ್
ಪಶ್ಚಿಮ ಬಂಗಾಳದ ಕಡಲೆಕಾಯಿ ವ್ಯಾಪಾರಿ ಭೂಬನ್ ಬಡ್ಯಾಕರ್ (Bhuban Badyakar)ಹಾಡಿದ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದೆ. ‘ಕಚ್ಚಾ ಬಾದಾಮ್’ ಹಾಡಿನ(Kacha Badam Song) ಡಿಜೆ ಸೇರಿದಂತೆ ಹಲವು ವರ್ಶನ್‍ಗಳು ಬಂದಿವೆ. ಈ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡುವ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚಿದ್ದ ರಾನು ಮಂಡಲ್ ಈ ವೈರಲ್ ಹಾಡನ್ನು ಹಾಡಿದ್ದಾರೆ. ತಮ್ಮದೇ ಸ್ಟೈಲ್ ನಲ್ಲಿ ರಾನು ಹಾಡಿರುವ ಈ ವಿಡಿಯೋ ಕೂಡ ವೈರಲ್ ಆಗಿದೆ.
ಇದನ್ನೂ ಓದಿ: Pushpa ಚಿತ್ರದ Saami Saami ಹಾಡಿನ ಈ ಪದಗಳ ಬಳಕೆಗೆ Sunidhi Chauhan ಆಕ್ಷೇಪವಿತ್ತಂತೆ
ರಾನು ಮಂಡಲ್ ಗೇಲಿ ಮಾಡಿದ ಜನರು!
ರಾನು ಮಂಡಲ್ ಈ ಹಾಡನ್ನು ಹಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇಂಟರ್ನೆಟ್ ಬಳಕೆದಾರರು ಅವರು ಹಾಡಿರುವ ವಿಡಿಯೋವನ್ನು ಶೇರ್ ಮಾಡಿ ಟ್ರೋಲ್(Ranu Mondal Trolled) ಮಾಡುತ್ತಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಬಹುತೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ರಾನುರನ್ನು ಗೇಲಿ ಮಾಡುತ್ತಿದ್ದಾರೆ. ‘ಓಂ ಶಾಂತಿ ಬಾದಾಮ್’, ‘ಆರ್‌ಐಪಿ ಬಾದಾಮ್’ ಸಾಂಗ್ ಎಂದೆಲ್ಲಾ ಟ್ರೋಲ್ ಮಾಡಿದ್ದಾರೆ.
ಮತ್ತೊಮ್ಮೆ ಹಾಡಲು ರಾನುಗೆ ಅವಕಾಶ ಮಾಡಿಕೊಡಬೇಡಿ. ಈ ಸಾಂಗ್(Ranu Mondal Video) ಕೇಳಲು ನಮಗೆ ಆಗುತ್ತಿಲ್ಲವೆಂದು ಹಿಮೇಶ್ ರೇಶಮಿಯಾರನ್ನು ಟ್ಯಾಗ್ ಮಾಡಿ ಅನೇಕರು ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಸಹದೇವ್ ಡಿರ್ಡನ್ ಅವರ ‘ಬಚ್ಪನ್ ಕಾ ಪ್ಯಾರ್’ ಹಾಡನ್ನು ರಾನು ಮೊಂಡಲ್ ಹಾಡಿದ್ದರು. ಆ ವೇಳೆಯೂ ಅವರು ತೀವ್ರವಾಗಿ ಟ್ರೋಲ್‌ಗೆ ಒಳಗಾಗಿದ್ದರು.
ಇದನ್ನೂ ಓದಿ: Punith Raj Kumar : ಅಪ್ಪು ಅಗಲಿ ಇಂದಿಗೆ 3 ತಿಂಗಳು : ಸಮಾದಿಗೆ ಭೇಟಿ ನೀಡಿದ ಕುಟುಂಬಸ್ಥರು!
ಸಖತ್ ವೈರಲ್ ಆಗಿರುವ ‘ಕಚ್ಚಾ ಬಾದಾಮ್’ ಹಾಡು
This kacha badam vendor deserves
Thousands of likes ! pic.twitter.com/Q5owPRGTHf— MotaBhai (@Motabhai4U) January 26, 2022
ಪಶ್ಚಿಮ ಬಂಗಾಳದ ಲಕ್ಷೀನಾರಾಯಣಪುರದ ನಿವಾಸಿ ಭೂಬನ್ ಬಡ್ಯಾಕರ್(Bhuban Badyakar) ಪ್ರತಿದಿನ ಕಡಲೆಕಾಯಿ ಮಾರಾಟ ಮಾಡಲು ಸೈಕಲ್‍ನಲ್ಲಿ ಊರಿಂದೂರಿಗೆ ಪ್ರಯಾಣಿಸುತ್ತಾರೆ. ಗ್ರಾಹಕರನ್ನು ಸೇಳೆಯಲು ಅವರು ತಾವೇ ಸ್ವತಃ ವಿಶೇಷ ಸಾಹಿತ್ಯ ರಚಿಸಿ ‘ಕಚ್ಚಾ ಬಾದಾಮ್’ ಹಾಡು ಹಾಡಿದ್ದರು. ಯಾವಾಗ ಈ ವಿಡಿಯೋ ವೈರಲ್ ಆಯಿತೋ ಬಡ್ಯಾಕರ್ ಕೂಡ ಫೇಮಸ್ ಆಗಿದ್ದಾರೆ. ಈ ಹಾಡಿಗೆ ಸೋಷಿಯಲ್ ಮೀಡಿಯಾ(Social Media) ಬಳಕೆದಾರರು ಹಲವು ಮ್ಯೂಸಿಕ್‍ನೊಂದಿಗೆ ರಿಮಿಕ್ಸ್ ಮಾಡಿ ರೀಲ್ಸ್ ಮಾಡುತ್ತಾ ಖುಷಿಪಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.