ನವದೆಹಲಿ :Indian Railways: ಭಾರತೀಯ ರೈಲ್ವೇ ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ರೈಲು ಜಾಲವಾಗಿದೆ. ಪ್ರತಿದಿನ ಕೋಟಿಗಟ್ಟಲೆ ಜನ ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲು ಪ್ರಯಾಣದ ವೇಳೆ ಪ್ರಯಾಣಿಕರು, ಚಿಪ್ಸ್, ಪ್ಯಾಕೆಟ್ ಆಹಾರ, ತಂಪು ಪಾನೀಯಗಳನ್ನು ಬಳಸುತ್ತಾರೆ. ಹೀಗೆ ಆಹಾರ ಸೇವಿಸಿದ ಮೇಲೆ ಅದರ ಪ್ಯಾಕೆಟ್ ಗಳನ್ನು ರೈಲ್ವೆ ನಿಲ್ದಾಣಗಳಲ್ಲಿ (Railway station) ಎಲ್ಲೆಂದರಲ್ಲಿ ಎಸೆಯುತ್ತಾರೆ. ಆದರೆ ಇನ್ನು ಮುಂದೆ ಈ ರೀತಿ ಮಾಡಿದರೆ ರೈಲ್ವೆ ಕ್ರಮ ಕೈಗೊಳ್ಳಲಿದೆ. ಅಷ್ಟೇ ಅಲ್ಲ, ತಪ್ಪಿತಸ್ಥರ ವಿರುದ್ದ ಪೊಲೀಸ್ ಕೇಸ್ ದಾಖಲಾಗಿ ಜೈಲು ವಾಸ ಅನುಭವಿಸಬೇಕಾದೀತು.
ಎನ್ಜಿಟಿ ಹೊರಡಿಸಿದೆ ಆದೇಶ :
ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಗಳನ್ನು (NGT) ಹೊರಡಿಸಿದ್ದು, IRCTC ಈ ಆದೇಶವನ್ನು ಎಲ್ಲಾ ನಿಲ್ದಾಣದ ಉಸ್ತುವಾರಿಗಳಿಗೆ ಕಳುಹಿಸಿದೆ. ಪ್ರಯಾಣಿಕರು ಆಹಾರ ಸೇವಿಸಿ ಹಿಂದೆ ಮುಂದೆ ಯೋಚನೆ ಮಾಡದೆ, ಪ್ಯಾಕೆಟ್ ಗಳನ್ನು ರೈಲು ನಿಲ್ದಾಣದಲ್ಲಿ (railway station) ಎಸೆಯುತ್ತಾರೆ. ಇದರಿಂದ ರೈಲು ನಿಲ್ದಾಣದ ಶುಚಿತ್ವ ಕೆಡುವುದು ಒಂದೆಡೆಯಾದರೆ, ಈ ರಾಪರ್ಗಳು ಹಾದುಹೋಗುವ ರೈಲುಗಳ ಚಕ್ರಗಳಲ್ಲಿ ಸಿಲುಕಿಕೊಳ್ಳುತ್ತದೆ. ಹೀಗಾದಾಗ, ಚಕ್ರಗಳು ಜ್ಯಾಮ್ ಆಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನೂ ಓದಿ : ಈ ರೀತಿಯ 2 ರೂಪಾಯಿ ನೋಟು ಇದ್ದರೆ ಕ್ಷಣ ಮಾತ್ರದಲ್ಲಿ ಕೈ ಸೇರಲಿದೆ ಕಂತೆ ಕಂತೆ ಹಣ
ಸ್ವಚ್ಚತೆ ಕಾಪಾಡದಿದ್ದರೆ ಜೈಲು ಶಿಕ್ಷೆ :
ತಮ್ಮ ನಿಲ್ದಾಣಗಳನ್ನು ಸ್ವಚ್ಛವಾಗಿಡುವಂತೆ ಎನ್ಜಿಟಿ ಇತ್ತೀಚೆಗೆ ರೈಲ್ವೇಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ, ರೈಲ್ವೆ ಇಲಾಖೆ ನಿಯಮವನ್ನು ಬದಲಿಸಿದೆ. ಶುಚಿತ್ವ ಕಾಪಾಡದ ಪ್ರಯಾಣಿಕರನ್ನು (train passengers) ಜೈಲಿಗೆ ಕಳುಹಿಸುವ ಸಿದ್ದತೆ ನಡೆಸಿದೆ. ಇಲ್ಲಿಯವರೆಗೆ ಈ ತಪ್ಪಿಗೆ ಕೇವಲ ದಂಡ ವಿಧಿಸಲಾಗುತ್ತಿತ್ತು. ಇದಕ್ಕಾಗಿ ಪ್ರತ್ಯೇಕ ಫ್ಲೈಯಿಂಗ್ ಸ್ಕ್ವಾಡ್ ಮಾಡಲಾಗಿದೆ ಈ ತಂಡ ಕಾಲಕಾಲಕ್ಕೆ ಅನಿರೀಕ್ಷಿತ ತಪಾಸಣೆ ನಡೆಸುತ್ತದೆ. ಇದರೊಂದಿಗೆ ವಲಯದ ಉನ್ನತಾಧಿಕಾರಿಗಳಿಗೂ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಈ ಕಾರ್ಖಾನೆಗಳ ಮೇಲೂ ಕ್ರಮ ಕೈಗೊಳ್ಳಬಹುದು
ಇದಲ್ಲದೇ ರೈಲ್ವೆ (Indian Railway) ಹಳಿ ಬದಿಯಲ್ಲಿ ನಿರ್ಮಿಸಿರುವ ಕಾರ್ಖಾನೆ ಹಾಗೂ ರೈಲ್ವೆ ಆಸ್ತಿಯಲ್ಲಿ ಗಲೀಜು ಹರಡುವವರ ವಿರುದ್ದವೂ ರೈಲ್ವೇ ಪ್ರಕರಣ ದಾಖಲಿಸಲಿದೆ. ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ ಮೂಲಕ ಇಂಥಹ ಪ್ರದೇಶಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ನಂತರ ಈ ಫೋಟೋ ವಿಡಿಯೋ ಗಳನ್ನು ಸಾಕ್ಷಿಯ ರೂಪದಲ್ಲಿ ಸಲ್ಲಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.
ಇದನ್ನೂ ಓದಿ : ಆಯುರ್ವೇದ ಉತ್ಪನ್ನಗಳ ನಂತರ ಇದೀಗ Credit Card ಬಿಡುಗಡೆ ಮಾಡಿದ ಬಾಬಾ ರಾಮ್ ದೇವ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.