ಫೆಬ್ರವರಿ 21 ರಂದು ಗೆಳತಿ ಶಿಬಾನಿ ದಾಂಡೇಕರ್ ಮದುವೆಯಾಗಲಿರುವ ಫರ್ಹಾನ್ ಅಖ್ತರ್

ಜಾವೇದ್ ಅಖ್ತರ್ ಅವರು ತಮ್ಮ ಮಗ ಫರ್ಹಾನ್ ಅಖ್ತರ್ ತನ್ನ ಸುಮಾರು ನಾಲ್ಕು ವರ್ಷಗಳ ಗೆಳತಿ ಶಿಬಾನಿ ದಾಂಡೇಕರ್ ಅವರನ್ನು ಫೆಬ್ರವರಿ 21 ರಂದು ಮದುವೆಯಾಗಲು ಸಿದ್ಧರಾಗಿದ್ದಾರೆ ಎನ್ನುವುದನ್ನು ಖಚಿತಪಡಿಸಿದ್ದಾರೆ.

Last Updated : Feb 3, 2022, 11:12 PM IST
  • ಫರ್ಹಾನ್ ಈ ಹಿಂದೆ ಕೇಶ ವಿನ್ಯಾಸಕಿ ಅಧುನಾ ಭಬಾನಿ ಅವರನ್ನು ಮದುವೆಯಾಗಿದ್ದರು. 2017 ರಲ್ಲಿ ವಿಚ್ಛೇದನ ಪಡೆದ ಮಾಜಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
  • ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ನಟಿಸಿರುವ ಜೀ ಲೆ ಜರಾ ಚಿತ್ರದ ಮೂಲಕ ಫರ್ಹಾನ್ ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ ನಿರ್ದೇಶನದ ಪುನರಾಗಮನವನ್ನು ಮಾಡಲಿದ್ದಾರೆ. ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ.
 ಫೆಬ್ರವರಿ 21 ರಂದು ಗೆಳತಿ ಶಿಬಾನಿ ದಾಂಡೇಕರ್ ಮದುವೆಯಾಗಲಿರುವ ಫರ್ಹಾನ್ ಅಖ್ತರ್ title=

ನವದೆಹಲಿ: ಜಾವೇದ್ ಅಖ್ತರ್ ಅವರು ತಮ್ಮ ಮಗ ಫರ್ಹಾನ್ ಅಖ್ತರ್ ತನ್ನ ಸುಮಾರು ನಾಲ್ಕು ವರ್ಷಗಳ ಗೆಳತಿ ಶಿಬಾನಿ ದಾಂಡೇಕರ್ ಅವರನ್ನು ಫೆಬ್ರವರಿ 21 ರಂದು ಮದುವೆಯಾಗಲು ಸಿದ್ಧರಾಗಿದ್ದಾರೆ ಎನ್ನುವುದನ್ನು ಖಚಿತಪಡಿಸಿದ್ದಾರೆ.

ಫರ್ಹಾನ್ ಮತ್ತು ಶಿಬಾನಿ ಅವರ ವಿವಾಹವು 'ತುಂಬಾ ಸರಳವಾಗಿರಲಿದೆ' ಮತ್ತು ಖಂಡಾಲಾದಲ್ಲಿರುವ ಜಾವೇದ್ ಅವರ ಕುಟುಂಬದ ಮನೆಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.

ಕೋವಿಡ್ -19 ಸಾಂಕ್ರಾಮಿಕದ ನಿರ್ಬಂಧಗಳ ಕಾರಣದಿಂದಾಗಿ, ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದೆ, ಆಮಂತ್ರಣಗಳನ್ನು ಇನ್ನೂ ಕಳುಹಿಸಲಾಗಿಲ್ಲ ಎಂದು ಜಾವೇದ್ ಬಹಿರಂಗಪಡಿಸಿದರು.ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಜಾವೇದ್,“ಹೌದು, ಮದುವೆ ನಡೆಯುತ್ತಿದೆ.ಮದುವೆಗೆ ಉಳಿದ ಸಿದ್ಧತೆಗಳನ್ನು ಮದುವೆಯ ಯೋಜಕರು ನೋಡಿಕೊಳ್ಳುತ್ತಿದ್ದಾರೆ.ಇದೊಂದು ಆತ್ಮೀಯ ಸಮಾರಂಭವಾಗಲಿದೆ ಎಂದು ಜಾವೇದ್ ಹೇಳಿದ್ದಾರೆ.

ಇದನ್ನೂ ಓದಿ: Siddaramaiah : 'ಸಿಎಂ ಇಬ್ರಾಹಿಂ ಇಲ್ಲೇ ಇದ್ರೂ ನನ್ನ ಸ್ನೇಹಿತ, ಪಕ್ಷ ಬಿಟ್ಟರೂ ನನ್ನ ಸ್ನೇಹಿತ'

'ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡರೆ ನಾವು ದೊಡ್ಡ ಪ್ರಮಾಣದಲ್ಲಿ ಯಾವುದನ್ನೂ ಹೋಸ್ಟ್ ಮಾಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.ಹಾಗಾಗಿ ಕೆಲವರನ್ನು ಮಾತ್ರ ಕರೆಯುತ್ತಿದ್ದೇವೆ.ಇದು ತುಂಬಾ ಸರಳವಾಗಿರುತ್ತದೆ ಎಂದು ಅವರು ಹೇಳಿದರು, ಅಷ್ಟೇ ಅಲ್ಲದೆ ಅವರು ಶಿಬಾನಿಯನ್ನು ತುಂಬಾ ಒಳ್ಳೆಯ ಹುಡುಗಿ ಎಂದು ಕರೆದರು ಮತ್ತು ಮನೆಯವರು ಅವಳನ್ನು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Guest Lecturers : ಅತಿಥಿ ಉಪನ್ಯಾಸಕರ ನೇಮಕ ; ಹಿರಿತನ, ಅರ್ಹತೆಗೆ ಆದ್ಯತೆ 

ಫರ್ಹಾನ್ ಈ ಹಿಂದೆ ಕೇಶ ವಿನ್ಯಾಸಕಿ ಅಧುನಾ ಭಬಾನಿ ಅವರನ್ನು ಮದುವೆಯಾಗಿದ್ದರು.2017 ರಲ್ಲಿ ವಿಚ್ಛೇದನ ಪಡೆದ ಮಾಜಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ನಟಿಸಿರುವ ಜೀ ಲೆ ಜರಾ ಚಿತ್ರದ ಮೂಲಕ ಫರ್ಹಾನ್ ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ ನಿರ್ದೇಶನದ ಪುನರಾಗಮನವನ್ನು ಮಾಡಲಿದ್ದಾರೆ.ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News