NPS ನಿಯಮದಲ್ಲಿ ಭಾರಿ ಬದಲಾವಣೆ! ಇನ್ಮುಂದ ನಿಮಗೆ 75 ವರ್ಷದವರೆಗೆ ಸಿಗಲಿದೆ ಈ ಲಾಭ

National Pension System: ಎನ್‌ಪಿಎಸ್ ಹಿರಿಯ ನಾಗರಿಕರಿಗಾಗಿ ಸರ್ಕಾರ ನಡೆಸುತ್ತಿರುವ ಉತ್ತಮ ಯೋಜನೆಯಾಗಿದೆ. ಅದನ್ನು ಹೆಚ್ಚು ಹೆಚ್ಚು ಆಕರ್ಷಕವಾಗಿಸಲು ಕಾಲಕಾಲಕ್ಕೆ ಸರ್ಕಾರ ಅದರಲ್ಲಿ ಬದಲಾವಣೆ ಮಾಡುತ್ತಿದೆ. 

Written by - Nitin Tabib | Last Updated : Feb 7, 2022, 04:39 PM IST
  • NPS ನಲ್ಲಿ ಹೂಡಿಕೆಯ ವ್ಯಾಪ್ತಿ ಹೆಚ್ಚಾಗಲಿದೆ
  • ಯಾವುದೇ ಅನ್ಯೂಟಿ ಇಲ್ಲದೆ 5 ಲಕ್ಷರೂ. ಹಿಂಪಡೆಯಬಹುದು!
  • NPS ನಲ್ಲಿ ಬರಲಿವೆ ಗ್ಯಾರಂಟಿ ರಿಟರ್ನ್ ಉತ್ಪನ್ನಗಳು
NPS ನಿಯಮದಲ್ಲಿ ಭಾರಿ ಬದಲಾವಣೆ! ಇನ್ಮುಂದ ನಿಮಗೆ 75 ವರ್ಷದವರೆಗೆ  ಸಿಗಲಿದೆ ಈ ಲಾಭ title=
National Pension System (File Photo)

ನವದೆಹಲಿ: National Pension System - ಹಿರಿಯ ನಾಗರಿಕರಿಗಾಗಿ (Senior Citizen) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಸರ್ಕಾರವು ನಡೆಸುತ್ತಿರುವ ಉತ್ತಮ ಯೋಜನೆಯಾಗಿದೆ. ಅದನ್ನು ಹೆಚ್ಚು ಹೆಚ್ಚು ಆಕರ್ಷಕವಾಗಿಸಲು ಕಾಲಕಾಲಕ್ಕೆ ಬದಲಾವಣೆಗಳನ್ನು ಮಾಡಲಾಗುತ್ತದೆ. ಇದರ ಅಡಿಯಲ್ಲಿ ಇದೀಗ ವೃದ್ಧರು ಹೆಚ್ಚಿನ ಪಿಂಚಣಿ (National Pension Fund) ಪಡೆಯಬಹುದು, ಏಕೆಂದರೆ ಇದಕ್ಕಾಗಿ PFRDA ಹಲವು ಹೊಸ ಬದಲಾವಣೆಗಳಿಗೆ ಮುಂದಾಗಿದೆ. NPS ನ ಎಲ್ಲಾ ಬದಲಾವಣೆಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ ಬನ್ನಿ.

1. NPS ಅಡಿ ಹೂಡಿಕೆಯ ವ್ಯಾಪ್ತಿ ಹೆಚ್ಚಾಗಲಿದೆ
ಸರ್ಕಾರ NPS ಹೂಡಿಕೆಗಾಗಿ ಗರಿಷ್ಟ ವಯೋಮಿತಿಯನ್ನು 70 ವರ್ಷ ನಿಗದಿಪಡಿಸಿದೆ. ಅಂದರೆ ಇನ್ಮುಂದೆ ಯಾವುದೇ ವ್ಯಕ್ತಿ ತನ್ನ ವಯಸಿನ 70ನೇ ವರ್ಷದವರೆಗೆ ಇದರಲ್ಲಿ ಹೂಡಿಕೆ (Retirement Fund) ಮಾಡಬಹುದಾಗಿದೆ.

2. 75 ವರ್ಷಗಳವರೆಗೆ ಖಾತೆ ಚಾಲ್ತಿಯಲ್ಲಿರಲಿದೆ
ತಮ್ಮ ವಯಸ್ಸಿನ 60 ವರ್ಷದ ನಂತರ NPSಗೆ ಸೇರುವ ಚಂದಾದಾರರಿಗೆ ಪಿಎಫ್‌ಆರ್‌ಡಿಎ ದೊಡ್ಡ ಪರಿಹಾರವನ್ನು ನೀಡಿದೆ. ಅವರು ಈಗ 75 ವರ್ಷ ವಯಸ್ಸಿನವರೆಗೆ NPS ಖಾತೆಯನ್ನು ಮುಂದುವರಿಸಬಹುದು. ಎಲ್ಲಾ ಇತರ ಚಂದಾದಾರರಿಗೆ ಮುಕ್ತಾಯ ಮಿತಿ 70 ವರ್ಷಗಳಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

3. NPS ದಾಟಿದವರ ಆಸಕ್ತಿ ಹೆಚ್ಚಾಗಿದೆ
PFRDA ನೀಡಿರುವ ಮಾಹಿತಿ ಪ್ರಕಾರ, NPS ಪ್ರವೇಶ ವಯಸ್ಸಿನ ಮಿತಿಯನ್ನು 60 ರಿಂದ 65 ವರ್ಷಕ್ಕೆ ಹೆಚ್ಚಿಸಿದಾಗ 15 ಸಾವಿರ ಜನರು NPSನಲ್ಲಿ ತಮ್ಮ ಖಾತೆಗಳನ್ನು ತೆರೆದಿದ್ದಾರೆ ಎಂದಿದೆ. ಆದ್ದರಿಂದ ಗರಿಷ್ಠ ವೋಯೋಮಿತಿಯನ್ನು ಮತ್ತಷ್ಟು ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು PFRDA ಅಧ್ಯಕ್ಷ ಸುಪ್ರತೀಮ್ ಬಂಡೋಪಾಧ್ಯಾಯ್ ಹೇಳಿದ್ದಾರೆ. 

ಇದನ್ನೂ ಓದಿ-ಬಿಜೆಪಿ ಸರ್ಕಾರದಿಂದಲೇ ಹಿಜಾಬ್ ವಿವಾದ ಪ್ರಾರಂಭವಾಗಿದೆ: ಎಂ.ಬಿ.ಪಾಟೀಲ್

4. ಅನ್ಯೂಟಿ (Annuity) ಇಲ್ಲದೆ 5 ಲಕ್ಷ ರೂ. ಹಿಂಪಡೆಯಬಹುದು
ಇದಲ್ಲದೆ, 5 ಲಕ್ಷಕ್ಕಿಂತ ಕಡಿಮೆ ಪೆನ್ಷನ್ ಫಂಡ್ ಇರುವವರು ತಮ್ಮ ನಿಧಿಯಲ್ಲಿನ ಪೂರ್ಣ ಹಣವನ್ನು ಹಿಂಪಡೆಯಬಹುದು ಎಂದು PFRDA ಹೇಳಿದೆ, ಇದುವರೆಗೆ 2 ಲಕ್ಷಕ್ಕಿಂತ ಕಡಿಮೆ ಪಿಂಚಣಿ ನಿಧಿ ಹೊಂದಿರುವವರು ಮಾತ್ರ ಸಂಪೂರ್ಣ ಹಣವನ್ನು ಹಿಂಪಡೆಯಬಹುದಾಗಿತ್ತು. ಈ ಹಿಂಪಡೆತ ತೆರಿಗೆ ಮುಕ್ತವಾಗಿರಲಿದೆ ಎಂದೂ ಕೂಡ ಅದು ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎನ್‌ಪಿಎಸ್‌ಗೆ 10 ಲಕ್ಷ ಹೊಸ ಚಂದಾದಾರರನ್ನು ಸೇರಿಸುವ ಗುರಿಯನ್ನು ಪಿಎಫ್‌ಆರ್‌ಡಿಎ ಹೊಂದಿದೆ. ಕಳೆದ ವರ್ಷ 6 ಲಕ್ಷ ಹೊಸ ಚಂದಾದಾರರನ್ನು ಎನ್‌ಪಿಎಸ್‌ಗೆ ಸೇರಿಸಲಾಗಿದೆ. NPS ಮತ್ತು ಅಟಲ್ ಪಿಂಚಣಿ ಯೋಜನೆ (APY) ಸೇರಿ 1 ಕೋಟಿ ಹೊಸ ಚಂದಾದಾರರನ್ನು ಸೇರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ-ಕಾಶ್ಮೀರದ ಕುರಿತು ಪಾಕ್ ಡೀಲರ್‌ನ ವಿವಾದಾತ್ಮಕ ಪೋಸ್ಟ್‌: 'ಭಾರತ ನಮ್ಮ ಎರಡನೇ ಮನೆ' ಎಂದ Hyundai

5. NPS ಅಡಿಯಲ್ಲಿ ಬರಲಿವೆ ನಿಶ್ಚಿತ ಆದಾಯದ ಉತ್ಪನ್ನಗಳು
NPS ಅಡಿ ನಿಶ್ಚಿತ ಆದಾಯ ನೀಡುವ ಉತ್ಪನ್ನಗಳನ್ನು ಕೂಡ ಇದೀಗ ತರಲಾಗುವುದು ಎಂದು PFRDA ಹೇಳಿದೆ. ಪ್ರಸ್ತುತ ಸಮಯದಲ್ಲಿ NPS ಕೊಡುಗೆಯ ಸಿಸ್ಟಮ್ ವ್ಯಾಖ್ಯಾನಿಸಲಾಗಿದೆ. ಅಂದರೆ, ಪೆನ್ಷನ್ NPS ಪೆನ್ಷನ್ ಫಂಡ್ ಪ್ರದರ್ಶನದ ಮೇಲೆ ಆಧಾರಿತವಾಗಿದೆ.

ಇದನ್ನೂ ಓದಿ-Crystal Ganesha Idol - ಸುಖ-ಸಮೃದ್ಧಿ ಮತ್ತು ಭಾಗ್ಯ ಬೆಳಗಲು ಮನೆಯಲ್ಲಿರಲಿ ಗಣೇಶನ ಈ ವಿಗ್ರಹ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News