ನವದೆಹಲಿ : ಚೆಕ್ ಅನ್ನು ಅನೇಕ ರೀತಿಯ ವಹಿವಾಟುಗಳಿಗೆ ಬಳಸಲಾಗುತ್ತದೆ. ಸಾಲ ಮರುಪಾವತಿ (loan repayment), ಸಂಬಳ ಪಾವತಿ (salary), ಫೀಸ್ ಹೀಗೆ ವಿವಿಧ ವಹಿವಾಟುಗಳಿಗಾಗಿ, ಚೆಕ್ಗಳನ್ನು ಬಳಸಲಾಗುತ್ತದೆ. ಚೆಕ್ಗಳ ಪ್ರಕ್ರಿಯೆ ಬ್ಯಾಂಕ್ (bank) ಮೂಲಕ ನಡೆಯುತ್ತದೆ. ಪ್ರತಿದಿನ ಸಾವಿರಾರು ಚೆಕ್ ಗಳನ್ನು ಬ್ಯಾಂಕ್ ಇತ್ಯರ್ಥಪಡಿಸುತ್ತವೆ. ಪಾವತಿಯ ಪುರಾವೆ (payment proof) ಪಡೆಯುವ ಸಲುವಾಗಿಯೂ ಚೆಕ್ ಗಳನ್ನು ಬಳಸಲಾಗುತ್ತದೆ. ಚೆಕ್ ಪಾವತಿಯು ವಿಶ್ವಾಸಾರ್ಹ ವಿಧಾನವಾಗಿದೆ. ಚೆಕ್ನ ದುರುಪಯೋಗವನ್ನು ತಡೆಯಲು ಯಾವಾಗಲೂ ಚೆಕ್ ಅನ್ನು ಕ್ರಾಸ್ ಚೆಕ್ ಮಾಡುವಂತೆ ಸಲಹೆ ನೀಡಲಾಗುತ್ತದೆ.
ಸಾಲಗಾರನು ಚೆಕ್ ಬೌನ್ಸ್ನ ಹೊರೆಯನ್ನು ಹೊರಬೇಕಾಗಬಹುದು :
ಚೆಕ್ ಅನ್ನು ನೀಡುವ ವ್ಯಕ್ತಿ ಮತ್ತು ಅದಕ್ಕೆ ಸಹಿ ಮಾಡುವ ವ್ಯಕ್ತಿಯನ್ನು ಸಾಲಗಾರ ಎಂದು ಕರೆಯಲಾಗುತ್ತದೆ. ಚೆಕ್ (Cheque) ಅನ್ನು ಯಾರ ಪರವಾಗಿ ನೀಡಲಾಗುತ್ತದೆಯೋ ಅವರನ್ನು ಸಾಲದಾತ ಎಂದು ಕರೆಯಲಾಗುತ್ತದೆ. ಚೆಕ್ ಬೌನ್ಸ್ (Cheque bounce) ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಮಾನ್ಯವಾಗಿದೆ. ಕೆಲವೊಮ್ಮೆ ಚೆಕ್ನ ಮೊತ್ತವನ್ನು ಪಾವತಿಸದಿರುವ ಕಾರಣ ಚೆಕ್ ಬೌನ್ಸ್ ಆಗುತ್ತದೆ. ಹೀಗಾದಾಗ, ಬ್ಯಾಂಕ್ (Bank) ಅದನ್ನು ಹಿಂದಿರುಗಿಸುತ್ತದೆ. ಚೆಕ್ ಬೌನ್ಸ್ ಆಗಿರುವ ಬಗ್ಗೆ ಸಾಲಗಾರನಿಗೆ ಕಡ್ಡಾಯವಾಗಿ ತಿಳಿಸಬೇಕಾಗಿರುತ್ತದೆ.
ಇದನ್ನೂ ಓದಿ : NPS ನಿಯಮದಲ್ಲಿ ಭಾರಿ ಬದಲಾವಣೆ! ಇನ್ಮುಂದ ನಿಮಗೆ 75 ವರ್ಷದವರೆಗೆ ಸಿಗಲಿದೆ ಈ ಲಾಭ
ಒಂದು ತಿಂಗಳೊಳಗೆ ಸಾಲಗಾರನು ಪಾವತಿಯನ್ನು ಮಾಡದೆ ಹೋದಲ್ಲಿ, ನಂತರ ಸಾಲಗಾರನಿಗೆ ಲೀಗಲ್ ನೋಟೀಸ್ (leagal notice) ಕಳುಹಿಸಬಹುದಾಗಿದೆ. ನೋಟಿಸ್ ಸ್ವೀಕರಿಸಿದ ನಂತರ, ನೋಟೀಸ್ ಸ್ವೀಕರಿಸಿದ ದಿನದಿಂದ 15 ದಿನಗಳಲ್ಲಿ ಪಾವತಿ ಮಾಡದಿದ್ದರೆ, ಅದು ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಆದರೆ , 15 ದಿನಗಳಲ್ಲಿ ಪಾವತಿಸಿದರೆ, ಚೆಕ್ ಪಾವತಿಯನ್ನು (cheque payment) ಮಾಡಿದರೆ, ಸಾಲಗಾರನ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.
ನೋಟಿಸ್ನಲ್ಲಿ ಹೇಳಿದ 15 ದಿನಗಳು ಕಳೆದ ನಂತರ ಒಂದು ತಿಂಗಳೊಳಗೆ ಸಾಲದಾತರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಬಹುದು. ಇದರ ನಂತರವೂ ಹಣವನ್ನು ಪಡೆಯುವುದು ಸಾಧ್ಯವಾಗದಿದ್ದರೆ, ಸಾಲಗಾರನ ವಿರುದ್ಧ ಪ್ರಕರಣವನ್ನು ದಾಖಲಿಸಬಹುದು. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881 ರ ಸೆಕ್ಷನ್ 138 ರ ಪ್ರಕಾರ, ಚೆಕ್ನ ಬೌನ್ಸ್ ಶಿಕ್ಷಾರ್ಹ ಅಪರಾಧವಾಗಿದೆ. ಇದರಲ್ಲಿ ಎರಡು ವರ್ಷಗಳ ಜೈಲು (jail) ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು. ಯಾವುದೇ ಚೆಕ್ನ ಮಿತಿಯು ಕೇವಲ 3 ತಿಂಗಳುಗಳವರೆಗೆ ಮಾತ್ರ ಇರುತ್ತದೆ.
ಇದನ್ನೂ ಓದಿ : ಈ ರೀತಿ ಸುಲಭವಾಗಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿ, ಅದ್ಭುತ ಪ್ರಯೋಜನಗಳನ್ನು ಪಡೆಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.