ಬೆಂಗಳೂರು: ಸೋಮವಾರದಿಂದ ವಿಧಾನಮಂಡಲ ಜಂಟಿ ಅಧಿವೇಶನ (Karnataka Assembly Joint session) ಪ್ರಾರಂಭವಾಗಲಿದ್ದು, ಈ ಭಾರಿಯ ಕಲಾಪ ತೀರ್ವ ಸದ್ದುಗದ್ದಲಕ್ಕೆ ಕಾರಣವಾಗಲಿದೆ. ಸರ್ಕಾರದ ವಿರುದ್ಧ ಮುಗಿಬೀಳೋಕೆ ಪ್ರತಿಪಕ್ಷಗಳು ಸಿದ್ಧವಾಗಿವೆ. ಮುಖ್ಯವಾಗಿ ಕೇಸರಿ-ಹಿಜಾಬ್ ವಿವಾದ, ಬಿಟ್ ಕಾಯಿನ್, 40% ಕಮೀಷನ್ ಅಸ್ತ್ರಗಳು ಕಾಂಗ್ರೆಸ್ ಬತ್ತಳಿಕೆಯಲ್ಲಿವೆ.
ಇಂದಿನಿಂದ (ಫೆ.14) ಫೆ. 25ರವರೆಗೆ ಜಂಟಿ ಅಧಿವೇಶನ (Karnataka Assembly Joint session) ನಡೆಯಲಿದೆ. 10 ದಿನಗಳ ಕಾಲ ನಡೆಯುವ ಕಲಾಪವು ಹಲವು ಸದ್ದು-ಗದಲಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಸರ್ಕಾರದ ಇಮೇಜ್ ಡ್ಯಾಮೇಜ್ ಮಾಡೋಕೆ ಪ್ರತಿಪಕ್ಷಗಳು ರೆಡಿಯಾಗಿವೆ. ಅದರಲ್ಲೂ ಕಾಂಗ್ರೆಸ್ ಪ್ರಮುಖ ಅಸ್ತ್ರಗಳನ್ನೇ ತನ್ನ ಬತ್ತಳಿಕೆಯಲ್ಲಿಟ್ಟುಕೊಂಡಿದೆ. ಬಿಟ್ ಕಾಯಿನ್ ಹಗರಣ, ಟೆಂಡರ್ ಗಳಲ್ಲಿ 40% ಕಮೀಷನ್ ಆರೋಪ ಈಗಾಗಲೇ ಸರ್ಕಾರವನ್ನ ಭಾದಿಸಿವೆ. ಇದರ ಜೊತೆಗೆ ಇತ್ತೀಚಿನ ಹಿಜಾಬ್-ಕೇಸರಿ ಸಂಘರ್ಷವೂ ಸೇರಿಕೊಂಡಿದೆ. ಈ ವಿಚಾರಗಳನ್ನೇ ಮುಂದಿಟ್ಟುಕೊಂಡು ಸರ್ಕಾರದ ಇಮೇಜ್ ಕೆಡಿಸೋಕೆ ಪ್ರತಿಪಕ್ಷ ಕಾಂಗ್ರೆಸ್ ನಿರ್ಧರಿಸಿದೆ.
ಸದನದಲ್ಲಿ ಪ್ರತಿಧ್ವನಿಸಲಿದೆ ಹಿಜಾಬ್- ಕೇಸರಿ ಸಂಘರ್ಷ; ಈಶ್ವರಪ್ಪ ರಾಷ್ಟ್ರಧ್ವಜ ಹೇಳಿಕೆ ಬಗ್ಗೆಯೂ ಕಾಂಗ್ರೆಸ್ ಪ್ರಸ್ತಾಪ ಸಾಧ್ಯತೆ..!
ಮೊದಲ ದಿನ ಜಂಟಿಸದನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಇದಾದ ನಂತರ ಇತ್ತೀಚೆಗೆ ಅಗಲಿದ ಗಣ್ಯರ ನಿಧನಕ್ಕೆ ಸಂತಾಪ ಸಲ್ಲಿಸಲಿದ್ದಾರೆ. ಎರಡನೇ ದಿನ ಹಿಜಾಬ್ ಕೇಸರಿ ಸಂಘರ್ಷ (Hijab Saffron Conflict) ವಿಚಾರವನ್ನ ನಿಲುವಳಿ ಸೂಚನೆಯಡಿ ಪ್ರಸ್ತಾಪಿಸೋಕೆ ಕಾಂಗ್ರೆಸ್ ನಿರ್ಧರಿಸಿದೆ. ಹಿಜಾಬ್ ವಿಚಾರವನ್ನು ಎತ್ತಿಕಟ್ಟಿ ರಾಜ್ಯದ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಳೆದಿದ್ದೀರಿ. ನಿಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಕ್ಕಳ ಭವಿಷ್ಯವನ್ನು ಹಾಳುಮಾಡಿದ್ದೀರಿ ಎಂದು ಸರ್ಕಾರದ ಮೇಲೆ ಮುಗಿಬೀಳೋಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ. ಜೆಡಿಎಸ್ ನಾಯಕರು ಕೂಡ ಇದೇ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ್ದು, ಸದನದಲ್ಲೂ ಅಸಮಾಧಾನ ಹೊರಹಾಕುವ ಸಾಧ್ಯತೆಯಿದೆ.
ಇದನ್ನೂ ಓದಿ- Hijab Controversy: 'ದೇಶದಲ್ಲಿ ಹಿಜಾಬ್ ಪದ್ಧತಿ ಇಲ್ಲದಿರುವುದರಿಂದ ಅತ್ಯಾಚಾರ ದರ ಹೆಚ್ಚಾಗಿದೆ'
40% ಕಮೀಷನ್ ವಿಚಾರವನ್ನೂ ಪ್ರಸ್ತಾಪಿಸಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ:
ಇನ್ನು ಸದನದಲ್ಲಿ ಬಿಟ್ ಕಾಯಿನ್ (Bit Coin) ಹಾಗೂ ಕಾಮಗಾರಿಗಳಲ್ಲಿ 40% ಕಮೀಷನ್ (40% commission) ಪಡೆಯುವ ವಿಚಾರವಾಗಿ ಸರ್ಕಾರದ ಮೇಲೆ ದಾಳಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಕಳೆದ ಬೆಳಗಾವಿ ಅಧಿವೇಶನದಲ್ಲೂ ಚರ್ಚೆಗೆ ಕಾಂಗ್ರೆಸ್ ನೊಟೀಸ್ ಕೊಟ್ಟಿತ್ತು. ಆದರೆ ಚರ್ಚೆಗೆ ಸಮಯಾವಕಾಶವೇ ಸಿಕ್ಕಿರಲಿಲ್ಲ, ಹೀಗಾಗಿ ಹಿಜಾಬ್ ವಿವಾದದ ಚರ್ಚೆಯ ನಂತರ ಕಾಮಗಾರಿಗಳಲ್ಲಿ ಸರ್ಕಾರ 40% ಕಮೀಷನ್ ಪಡೆಯುತ್ತಿದೆ ಎಂಬ ಗುತ್ತಿಗೆದಾರರ ಸಂಘ ಪ್ರಧಾನಿಗೆ ಸಲ್ಲಿಸಿದ್ದ ದೂರನ್ನೇ ಮುಂದಿಟ್ಟುಕೊಂಡು ಸರ್ಕಾರದ ಇಮೇಜ್ ಕೆಡಿಸೋಕೆ ಸಿದ್ದರಾಮಯ್ಯ (Siddaramaiah) ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಆರೋಪದ ತನಿಖೆಗೆ ಸರ್ಕಾರವನ್ನ ಒತ್ತಾಯಿಸಲಿದ್ದಾರೆ. ಅಲ್ಲದೆ ಬಿಟ್ ಕಾಯಿನ್ ಹಗರಣದ ಬಗ್ಗೆಯೂ ಕಾಂಗ್ರೆಸ್ ಬೆಳಕುಚೆಲ್ಲಲಿದೆ.
ಮೇಕೆದಾಟು, ಮಹದಾಯಿ ಬಗ್ಗೆ ಪ್ರಸ್ತಾಪಿಸಲಿರುವ ಡಿಕೆಶಿ:
ಇನ್ನು ನೆಲ, ಜಲ, ಭಾಷೆಯ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಸದನದಲ್ಲಿ ಗಮನಸೆಳೆಯಲು ಜೆಡಿಎಸ್ ನಿರ್ಧರಿಸಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ನೀಡದ ಬಗ್ಗೆ ಸರ್ಕಾರದ ಮೇಲೆ ತಿರುಗಿಬೀಳೋಕೆ ರೆಡಿಯಾಗಿದೆ. ಇದರ ನಡುವೆ ಮೇಕೆದಾಟು ಹಾಗೂ ಮಹದಾಯಿ ಯೋಜನೆ ಬಗ್ಗೆ ಕೆದಕಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ- 'ಚೆನ್ನವೀರ ಕಣವಿ ಅವರು ಚೇತರಿಸಿಕೊಂಡು ಅವರ ಚಿಂತನೆಗಳು ನಾಡಿಗೆ ಮತ್ತೆ ದೊರೆಯಬೇಕು'
ಒಟ್ನಲ್ಲಿ ಈ ಭಾರಿಯ ಸದನದಲ್ಲಿ 40% ಕಮಿಷನ್, ಬಿಟ್ ಕಾಯಿನ್ ಹಾಗೂ ಹಿಜಾಬ್ ವಿಚಾರಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬೀಳಲಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಹೇಗೆ ಸಮರ್ಥಿಸಿಕೊಳ್ಳಲಿದೆ ಹಾಗೂ ಪ್ರತಿಪಕ್ಷಗಳ ಧ್ವನಿಯನ್ನ ಹೇಗೆ ಅಡಗಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.