Bank Special Offer: ಗೃಹಸಾಲ ತೆಗೆದುಕೊಳ್ಳುವಾಗ EMI ಪಾವತಿಸಬೇಕಾಗಿಲ್ಲ, ಕೊಡುಗೆ ಏನೆಂದು ತಿಳಿಯಿರಿ

 ಮನೆ ಸಾಲ ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಈ ಯೋಜನೆಯನ್ನು ನೀವು ಖಂಡಿತವಾಗಿ ಇಷ್ಟಪಡುತ್ತೀರಿ.

Written by - Puttaraj K Alur | Last Updated : Feb 15, 2022, 11:54 PM IST
  • ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಗ್ರಾಹಕರಿಗಾಗಿ ಈ ಯೋಜನೆ ಪ್ರಾರಂಭಿಸಿದೆ
  • ಬಡ್ಡಿಗೆ ಮಾತ್ರ ಗೃಹ ಸಾಲ ಸೌಲಭ್ಯವನ್ನು ಬ್ಯಾಂಕ್ ಒದಗಿಸುತ್ತಿದೆ
  • ಪೂರ್ಣಗೊಂಡ ವಸತಿ ಆಸ್ತಿಯಲ್ಲಿ ಮಾತ್ರ ಈ ಸೌಲಭ್ಯ ಪಡೆದುಕೊಳ್ಳಬಹುದು
Bank Special Offer: ಗೃಹಸಾಲ ತೆಗೆದುಕೊಳ್ಳುವಾಗ EMI ಪಾವತಿಸಬೇಕಾಗಿಲ್ಲ, ಕೊಡುಗೆ ಏನೆಂದು ತಿಳಿಯಿರಿ   title=
ಬಡ್ಡಿಗೆ ಮಾತ್ರ ಗೃಹ ಸಾಲ ಸೌಲಭ್ಯ

ನವದೆಹಲಿ: ಮನೆ ಸಾಲ ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌(Standard Chartered Bank)ನ ಈ ಯೋಜನೆಯನ್ನು ನೀವು ಖಂಡಿತವಾಗಿ ಇಷ್ಟಪಡುತ್ತೀರಿ. ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಗೃಹ ಸಾಲವನ್ನು ಒದಗಿಸುವ ಉದ್ದೇಶಕ್ಕಾಗಿ ಬ್ಯಾಂಕ್ ಬಡ್ಡಿಗೆ ಮಾತ್ರ ಗೃಹಸಾಲ ಸೌಲಭ್ಯವನ್ನು ಪರಿಚಯಿಸುವುದಾಗಿ ಘೋಷಿಸಿದೆ.

ಅಸಲು ಮೊತ್ತವನ್ನು ಪಾವತಿಸಬೇಕಾಗಿಲ್ಲ

ಪೂರ್ಣಗೊಂಡ ವಸತಿ ಆಸ್ತಿಯಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಿರುತ್ತದೆ ಎಂದು ಬ್ಯಾಂಕ್‌ ಗ್ರಾಹಕರಿಗೆ ತಿಳಿಸಿದೆ. ಈ ಯೋಜನೆಯಡಿ ಗ್ರಾಹಕರು ಸಾಲದ ಅವಧಿಯಲ್ಲಿ ಅಸಲು ಬಾಕಿಯ ಮೇಲೆ ಬಡ್ಡಿ(Interest Only Home Loan)ಯನ್ನು ಪಾವತಿಸುತ್ತಾರೆ. ಈ ಯೋಜನೆಗೆ ‘Interest Only Period’ ಎಂದು ಹೆಸರಿಸಲಾಗಿದೆ. ನಿಗದಿತ ಸಮಯದ ಚೌಕಟ್ಟಿನವರೆಗೆ ಗ್ರಾಹಕರು ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಅಸಲು ಮೊತ್ತವನ್ನು ಸಾಲದ ಮೊತ್ತದಿಂದ ಕಡಿತಗೊಳಿಸಲಾಗುವುದಿಲ್ಲ.

ಇದನ್ನೂ ಓದಿ: 9 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿದೆ 7 ಸೀಟರ್ ಕಾರು, ಎರ್ಟಿಗಾ, ಇನ್ನೋವಾಗೆ ನೀಡಲಿದೆ ಟಕ್ಕರ್

ಈ ರೀತಿ ನೀವು ಲಾಭವನ್ನು ಪಡೆಯುತ್ತೀರಿ

ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಪ್ರಾರಂಭಿಸಿದ ಯೋಜನೆ(Standard Chartered Bank)ಯಲ್ಲಿ ಗ್ರಾಹಕರು ಮೊದಲ 1ರಿಂದ 33 ತಿಂಗಳವರೆಗೆ ಪ್ರತಿ ತಿಂಗಳು ಗೃಹ ಸಾಲದ ಮೇಲಿನ ಬಡ್ಡಿಯನ್ನು ಪಾವತಿಸಬಹುದು. ಈ ಮೊತ್ತದ ಬಡ್ಡಿಯನ್ನು ಪ್ರತಿ ತಿಂಗಳ ಆಧಾರದ ಮೇಲೆ ಪಾವತಿಸಬೇಕಾಗುತ್ತದೆ. ಗ್ರಾಹಕರು ಮತ್ತು ಬ್ಯಾಂಕ್ ನಿಗದಿಪಡಿಸಿದ ಸಮಯ ಮುಗಿದ ನಂತರ ಈ ಸಾಲವನ್ನು ಸಾಮಾನ್ಯ ಗೃಹ ಸಾಲವಾಗಿ ಪರಿವರ್ತಿಸಲಾಗುತ್ತದೆ. ಇದರ ನಂತರ ಗ್ರಾಹಕನು ತನ್ನ EMIಅನ್ನು ಪಾವತಿಸಬೇಕಾಗುತ್ತದೆ. ನಿಗದಿತ ಸಮಯಕ್ಕಿಂತ ಮುಂಚೆಯೇ ಗ್ರಾಹಕರು EMI ಕಟ್ಟುವುದನ್ನು ಪ್ರಾರಂಭಿಸಬಹುದು.

ಯಾರು ಲಾಭ ಪಡೆಯಬಹುದು?

35 ಲಕ್ಷದಿಂದ 3.5 ಕೋಟಿ ರೂ.ವರೆಗೆ ಸಾಲ(Home Loan)ಪಡೆಯುವ ಗ್ರಾಹಕರು ಈ ಸೌಲಭ್ಯದ ಲಾಭ ಪಡೆಯಬಹುದು. ಸಾಲ ಮರುಪಾವತಿ ಅವಧಿಯು ಸಂಬಳದ ವರ್ಗಕ್ಕೆ ಗರಿಷ್ಠ 30 ವರ್ಷಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ 25 ವರ್ಷಗಳನ್ನು ನಿಗದಿಪಡಿಸಲಾಗಿದೆ.   

ಇದನ್ನೂ ಓದಿ: SBI Offer: SBIತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ 2 ಲಕ್ಷ ರೂ., ಲಾಭ ಪಡೆಯುವುದು ಹೇಗೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News