ಅತ್ಯಂತ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ ಈ ನಾಲ್ಕು ರಾಶಿಯವರು

ಹುಟ್ಟಿನಿಂದಲೇ ಬಲವಾದ ವ್ಯಕ್ತಿತ್ವವನ್ನು ಹೊಂದಿರುವಂಥಹ ರಾಶಿ ಚಕ್ರವನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.   ಈ ಕಾರಣದಿಂದಾಗಿ, ಅವರು ಉತ್ತಮ ನಾಯಕರಾಗಿಯೂ ಹೊರ ಹೊಮ್ಮುತ್ತಾರೆ.

Written by - Zee Kannada News Desk | Last Updated : Feb 17, 2022, 03:17 PM IST
  • ಈ ಜನರು ಬಲವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.
  • ಹುಟ್ಟಿನಿಂದಲೇ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ.
  • ಎಲ್ಲಾ ಕೆಲಸಗಳನ್ನು ಆತ್ಮವಿಶ್ವಾಸದಿಂದ ಮಾಡಿ ಮುಗಿಸುತ್ತಾರೆ.
ಅತ್ಯಂತ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ ಈ ನಾಲ್ಕು ರಾಶಿಯವರು  title=
ಈ ಜನರು ಬಲವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. (file photo)

ಬೆಂಗಳೂರು  : ಪ್ರತಿಯೊಬ್ಬ ವ್ಯಕ್ತಿಯೂ ನ್ಯೂನತೆಗಳು ಮತ್ತು ಸಾಮರ್ಥ್ಯಗಳನ್ನು ಹೊಂದಿರುತ್ತಾನೆ. ಇವುಗಳಲ್ಲಿ ಕೆಲವು ಅವನಲ್ಲಿ ಜನ್ಮಜಾತವಾಗಿದ್ದರೆ, ಕೆಲವನ್ನು ನನತರ ಅಳವಡಿಸಿಕೊಳ್ಳುತ್ತಾನೆ.  ಇವುಗಳ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಹುಟ್ಟಿನಿಂದಲೇ ಬಲವಾದ ವ್ಯಕ್ತಿತ್ವವನ್ನು ಹೊಂದಿರುವಂಥಹ ರಾಶಿ ಚಕ್ರವನ್ನು ಜ್ಯೋತಿಷ್ಯದಲ್ಲಿ (Astrology) ಹೇಳಲಾಗಿದೆ.   ಈ ಕಾರಣದಿಂದಾಗಿ, ಅವರು ಉತ್ತಮ ನಾಯಕರಾಗಿಯೂ ಹೊರ ಹೊಮ್ಮುತ್ತಾರೆ. ಜೊತೆಗೆ ಅವರು ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. 

ಮೇಷ ರಾಶಿ (Aries)
ಮೇಷ ರಾಶಿಯ ಅಧಿಪತಿ ಮಂಗಳ(Mars). ಈ ಕಾರಣದಿಂದಾಗಿ, ಈ ರಾಶಿಚಕ್ರದ ಜನರು ಧೈರ್ಯ, ನಿರ್ಭಯತೆಯಿಂದ ಬದುಕುತ್ತಾರೆ. ಅವರ ವ್ಯಕ್ತಿತ್ವವು ತುಂಬಾ ಪ್ರಬಲವಾಗಿರುತ್ತದೆ.  ಹೀಗಾಗಿ ಈ ರಾಶಿಯವರ (Zodiac Sign) ಬಗ್ಗೆ ಜನರಲ್ಲಿ ಭಯ ಇರುತ್ತದೆ. ಇವರ ಆತ್ಮವಿಶ್ವಾಸದ ಕಾರಣದಿಂದ ಇವರು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಗಳಿಸುತ್ತಾರೆ.

ಇದನ್ನೂ ಓದಿ: Dhaniya Jeera Totke: ಕೊತ್ತಂಬರಿ ಬೀಜ, ಜೀರಿಗೆಯ ಈ ಉಪಾಯ ಕೆಲವೇ ದಿನಗಳಲ್ಲಿ ನಿಮ್ಮ ಅದೃಷ್ಟವನ್ನೇ ಬದಲಿಸುತ್ತೆ

ಸಿಂಹ (Leo)
ಸಿಂಹ ರಾಶಿಯವರ ಮೇಲೆ ಸೂರ್ಯನ (Sun) ಪ್ರಭಾವವಿದರುತ್ತದೆ. ಈ ರಾಶಿಚಕ್ರದ ಜನರು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ತಮ್ಮ ಜೀವನದಲ್ಲಿ ಸಾಕಷ್ಟು ಗೌರವವನ್ನು ಪಡೆಯುತ್ತಾರೆ. ಅವರ ಆತ್ಮವಿಶ್ವಾಸ ಮತ್ತು ಅವರ ಶೈಲಿಯು ಅವರ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಈ ರಾಶಿಯವರನ್ನು ಜನರು ಕೂಡಾ ಸುಲಭವಾಗಿ ನಾಯಕ ಎಂದು ಒಪ್ಪಿಕೊಳ್ಳುತ್ತಾರೆ. 

ವೃಶ್ಚಿಕ ರಾಶಿ  (Scorpio)
ವೃಶ್ಚಿಕ ರಾಶಿಯ (Scorpio)ಜನರು ತುಂಬಾ ಸಂತೋಷದಿಂದ ಬದುಕುವವರು. ಹಾಗೆಯೇ ಬಹಳ  ಬುದ್ಧಿವಂತರಾಗಿರುತ್ತಾರೆ. ಅವರು ಯಾವುದೇ ಕೆಲಸವನ್ನು ಮಾಡಬೇಕಾದರೂ ಬಹಳ ಎಚ್ಚರಿಕೆಯಿಂದ ಮಾಡುತ್ತಾರೆ. ಅವರ ವ್ಯಕ್ತಿತ್ವವೇ ಎಲ್ಲರನ್ನೂ ಅವರತ್ತ ಆಕರ್ಷಿಸುತ್ತದೆ (Personality by zodiac). ಇವರು ಹುಟ್ಟಿನಿಂದಲೇ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. 

ಇದನ್ನೂ ಓದಿ: ಈ ಎರಡು ಗುಣಗಳಿದ್ದರೆ ಜೀವನದಲ್ಲಿ ಸಿರಿತನ ಮತ್ತು ಯಶಸ್ಸು ಕಟ್ಟಿಟ್ಟ ಬುತ್ತಿ

ಮಕರ (Capricorn)

ಶನಿಯು (Shani dev) ಮಕರ ರಾಶಿಯ ಅಧಿಪತಿ. ಆದ್ದರಿಂದ, ಈ ರಾಶಿಚಕ್ರದ ಜನರು ಕಠಿಣ ಪರಿಶ್ರಮಪಡುವವರಾಗಿರುತ್ತಾರೆ. ತಮ್ಮ ಕೆಲಸಗಳಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಯಾವಾಗಲೂ ಸತ್ಯವನ್ನು ಬೆಂಬಲಿಸುತ್ತಾರೆ. ಹಿಡಿದ ಕೆಲಸವನ್ನು ಸಾಧಿಸಿ ಅದರಲ್ಲಿ ಯಶಸ್ಸು ಸಾಧಿಸುವವರೆಗೂ ಇವರು ನೆಮ್ಮದಿಯಿಂದ ಕೂರುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News