ಕೋಲ್ಕತಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಮುಖ್ಯಸ್ಥ ಶೇಖ್ ಹಸೀನಾ ಶುಕ್ರವಾರದಂದು ರವಿಂದ್ರನಾಥ್ ಟ್ಯಾಗೋರ್ ರ ಶಾಂತಿನಿಕೇತನದಲ್ಲಿ ಬಾಂಗ್ಲಾದೇಶ ಭವನವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ "ಭಾರತ ಮತ್ತು ಬಾಂಗ್ಲಾದೇಶ ಎರಡು ವಿಭಿನ್ನ ರಾಷ್ಟ್ರಗಳಾಗಿವೆ, ಆದರೆ ನಮ್ಮ ಆಸಕ್ತಿಗಳು ಸಂಪರ್ಕವನ್ನು ಕಲ್ಪಿಸುತ್ತವೆ. ಅದು ಸಂಸ್ಕೃತಿಯಾಗಿರಬಹುದು ಅಥವಾ ಸಾರ್ವಜನಿಕ ನೀತಿಯಾಗಿರಬಹುದು ನಾವು ಪರಸ್ಪರರಿಂದ ಕಲಿಯುತ್ತಿದ್ದೇವೆ ಅದಕ್ಕೆ ಪ್ರಮುಖ ಉದಾಹರಣೆ ಎಂದರೆ ಬಾಂಗ್ಲಾದೇಶ ಭವನ " ಎಂದು ಮೋದಿ ತಿಳಿಸಿದರು. "ನಾವು ಇಲ್ಲಿ ಮತ್ತು ಬೇರೆಡೆಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತ್ತು ನೀವು ಎಲ್ಲರೂ ಗುರುದೇವರ ಆಶೀರ್ವಾದವನ್ನು ಹೊಂದಿದ್ದೀರಿ." ಎಂದು ಮೋದಿ ತಿಳಿಸಿದರು.
25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಬಾಂಗ್ಲಾದೇಶ ಭವನವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಉಭಯ ದೇಶಗಳ ಸಂಬಂಧದ ಸಂಕೇತವಾಗಿದೆ. ಇಲ್ಲಿರುವ ವಸ್ತು ಸಂಗ್ರಾಲಯವು 1971 ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು ಬಾಂಗ್ಲಾದೇಶದೊಂದಿಗೆ ರವೀಂದ್ರನಾಥ ಟಾಗೋರ್ ಅವರ ನಿಕಟ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ.