ಉಪಚುನಾವಣೆಯಲ್ಲಿ ಸೋತ ನಂತರ ಈ ಸಚಿವರು ಹೇಳಿದ್ದೇನು ಗೊತ್ತಾ?

ಬಿಜೆಪಿಯ ವಿರುದ್ಧ ವಿರೋಧ ಪಕ್ಷಗಳು ಒಂದಾಗಿರುವುದು ಪಕ್ಷದ ಸೋಲಿಗೆ ಪ್ರಮುಖ ಕಾರಣವೆಂದು ಸಚಿವ ಚೌಧರಿ ಲಕ್ಷ್ಮೀ ನಾರಾಯಣ್ ಒಪ್ಪಿಕೊಂಡಿದ್ದಾರೆ.

Last Updated : Jun 1, 2018, 09:16 AM IST
ಉಪಚುನಾವಣೆಯಲ್ಲಿ ಸೋತ ನಂತರ ಈ ಸಚಿವರು ಹೇಳಿದ್ದೇನು ಗೊತ್ತಾ? title=

ನವದೆಹಲಿ/ಷಹಜಹಾನ್ಪುರ್: ಕೈರಾನಾ ಮತ್ತು ನೂರ್ಪುರದಲ್ಲಿ ಬಿಜೆಪಿಯ ಸೋಲಿನ ನಂತರ ಬಿಜೆಪಿ ನಾಯಕರ ಅಸಂಬದ್ಧ ಹೇಳಿಕೆಗಳು ಹೊರಬರುತ್ತಿವೆ. ಯುಪಿ ಕ್ಯಾಬಿನೆಟ್ ಮಂತ್ರಿ ಚೌಧರಿ ಲಕ್ಷ್ಮಿ ನಾರಾಯಣ್ ಅವರ ಮತದಾರರು ಈ ಬಾರಿ ಬೇಸಿಗೆ ರಜಾದಿನಕ್ಕೆ ಹೋಗಿದ್ದಾರೆ. ಆ ಕಾರಣದಿಂದಾಗಿ ಅವರ ಪಕ್ಷವನ್ನು ಸೋಲಿಸಲಾಗಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಬಿಜೆಪಿಯ ವಿರುದ್ಧ ವಿರೋಧ ಪಕ್ಷಗಳು ಒಂದಾಗಿರುವುದು ಪಕ್ಷದ ಸೋಲಿಗೆ ಪ್ರಮುಖ ಕಾರಣವೆಂದು ಕ್ಯಾಬಿನೆಟ್ ಸಚಿವ ಚೌಧರಿ ಲಕ್ಷ್ಮೀ ನಾರಾಯಣ್ ಒಪ್ಪಿಕೊಂಡಿದ್ದಾರೆ.

ಜಿಲ್ಲಾ ಯೋಜನಾ ಸಮಿತಿಯ ಸಭೆಯಲ್ಲಿ ನೀಡಿದ ಹೇಳಿಕೆ
ಷಾಜಾಹಾನ್ಪುರ ಜಿಲ್ಲೆಯ ಯೋಜನಾ ಸಮಿತಿಯ ಸಭೆಯಲ್ಲಿ ಯುಪಿ ಕ್ಯಾಬಿನೆಟ್ ಮಂತ್ರಿ ಚೌಧರಿ ಲಕ್ಷ್ಮೀ ನಾರಾಯಣ್ ಈ ಅಸಂಬದ್ಧ ಹೇಳಿಕೆಯನ್ನು ನೀಡಿದರು. ಈ ಸಭೆಯಲ್ಲಿ ಮಾಧ್ಯಮಕ್ಕೆ ಮಾತನಾಡುವಾಗ, ಕೈರಾನಾ ಮತ್ತು ನೂರ್ಪುರ್ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜಯದಲ್ಲಿ ಸೋಲನ್ನು ಒಪ್ಪಿಕೊಂಡ ಅವರು, "ಅವರ ಮತದಾರರು ಬೇಸಿಗೆ ರಜೆಗಾಗಿ ಹೋಗಿರುವ ಕಾರಣ ಅವರು ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪಕ್ಷ ಸೋಲು ಅನುಭವಿಸಬೇಕಾಯಿತು ಎಂದು ಹೇಳಿದರು.

ವಿರೋಧ ಪಕ್ಷಗಳ ಒಕ್ಕೂಟ ಪಕ್ಷದ ಸೋಲಿಗೆ ಪ್ರಮುಖ ಕಾರಣ
ಗೋರಖ್ಪುರ್ ಮತ್ತು ಫುಲ್ಪುರದ ನಂತರ ಕೈರಾನಾ ಮತ್ತು ನೂರ್ಪುರ್ ಕ್ಷೇತ್ರದ ಸೋಲಿನ ನಂತರ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟವು ಪಕ್ಷದ ಸೋಲಿಗೆ ಪ್ರಮುಖ ಕಾರಣವೆಂದು ಅವರು ಒಪ್ಪಿಕೊಂಡರು. ಮುಂದಿನ 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಅವರು ಹೇಳಿದರು.

Trending News