ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ರಾಮಾಯಣ ಕಾಲದಲ್ಲಿಯೇ ಜಾರಿಯಲ್ಲಿತ್ತು- ಉತ್ತರ ಪ್ರದೇಶ ಉಪಮುಖ್ಯಮಂತ್ರಿ

    

Last Updated : Jun 1, 2018, 02:03 PM IST
ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ರಾಮಾಯಣ ಕಾಲದಲ್ಲಿಯೇ ಜಾರಿಯಲ್ಲಿತ್ತು- ಉತ್ತರ ಪ್ರದೇಶ ಉಪಮುಖ್ಯಮಂತ್ರಿ  title=

ನವದೆಹಲಿ: ಗುರುವಾರದಂದು ಪತ್ರಿಕೋದ್ಯಮವು ಮಹಾಭಾರತ ಕಾಲದಲ್ಲಿ ಅಸ್ತಿತ್ವದಲ್ಲಿತ್ತು, ನಾರದ ಮುನಿ ಈಗಿನ ಗೂಗಲ್ ಇದ್ದ ಹಾಗೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಮಾಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ದಿನೇಶ್ ಶರ್ಮಾ ಈಗ ಮತ್ತೊಂದು ಹೊಸ ವಿವಾದ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಅದೇನಪ್ಪಾ ಅಂದ್ರೆ, ಈಗಿನ ಟೆಸ್ಟ್ ಟ್ಯೂಬ್  ಬೇಬಿ ಪರಿಕಲ್ಪನೆ ರಾಮಾಯಣ ಕಾಲದಲ್ಲಿಯೇ ಅಸ್ತಿತ್ವದಲ್ಲಿತ್ತು ಅದಕ್ಕೆ ಉದಾಹರಣೆ ಸೀತೆ ಎಂದು ಅವರು ತಿಳಿಸಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಅವರು "  ಜನರು ಸೀತಾ ದೇವಿ ಮಣ್ಣಿನ ಮಡಿಕೆಯಲ್ಲಿ ಜನಿಸಿದವಳು ಎನ್ನುತ್ತಾರೆ ಹಾಗಾದರೆ ಅದರರ್ಥ ರಾಮಾಯಣ ಕಾಲದಲ್ಲಿಯೇ ಟೆಸ್ಟ್ ಟ್ಯೂಬ್ ಪರಿಕಲ್ಪನೆ ಅಸ್ತಿತ್ವದಲ್ಲಿತ್ತು ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಹಲವು ಬಿಜೆಪಿ ನಾಯಕರು ಆಧುನಿಕ ಮಾದರಿಯ ಎಲ್ಲ ಸಂಶೋಧನೆಗಳು ರಾಮಾಯಣ ಮಹಾಭಾರತದಲ್ಲಿಯೇ ಅಸ್ತಿತ್ವದಲ್ಲಿ ಇದ್ದವು ಎನ್ನುವ ಹೇಳಿಕೆಗಳ ಮೂಲಕ ಹೊಸ ವಿವಾದವನ್ನು ಸೃಷ್ಟಿಸುತ್ತಿರುವುದು ಈಗ ನಿರಂತರವಾಗಿ ಮುಂದುವರೆದಿರುವುದಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ.

 

Trending News