ಶೀತದಿಂದ ಬಳಲುತ್ತಿದ್ದೀರಾ? ಜೇನು ತುಪ್ಪವನ್ನು ಈ ರೀತಿ ಸೇವಿಸಿ..ಸೆಕೆಂಡುಗಳಲ್ಲಿ ನೆಗಡಿ, ಕೆಮ್ಮನಿಂದ ಮುಕ್ತಿ ಸಿಗುತ್ತೆ!

home remedy for cough: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರಿಗೆ ಎಲ್ಲಾ ಸಮಯದಲ್ಲಿ ಒಣ ಕೆಮ್ಮು ಇರುತ್ತದೆ. ಸಾಮಾನ್ಯವಾಗಿ ಕೆಮ್ಮಿನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಕಫದ ಕೆಮ್ಮು, ಎರಡನೆಯದು ಲೋಳೆಯಿಲ್ಲದ ಒಣ ಕೆಮ್ಮು. 

1 /7

home remedy for cough: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರಿಗೆ ಎಲ್ಲಾ ಸಮಯದಲ್ಲಿ ಒಣ ಕೆಮ್ಮು ಇರುತ್ತದೆ. ಸಾಮಾನ್ಯವಾಗಿ ಕೆಮ್ಮಿನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಕಫದ ಕೆಮ್ಮು, ಎರಡನೆಯದು ಲೋಳೆಯಿಲ್ಲದ ಒಣ ಕೆಮ್ಮು. 

2 /7

ಒಣ ಕೆಮ್ಮು ಬೇಗನೆ ಹೋಗುವುದಿಲ್ಲ. ಇದು ಒಂದು ಭಾರಿ ಬಂದರೆ ಹಲವು ವಾರಗಳ ವರೆಗೆ ಇರುತ್ತದೆ. ಸಾಮಾನ್ಯವಾಗಿ, ಒಣ ಕೆಮ್ಮು ರಾತ್ರಿಯಲ್ಲಿ ತುಂಬಾ ತ್ರಾಸು ಉಂಟು ಮಾಡುತ್ತದೆ. 

3 /7

ಜೇನುತುಪ್ಪ ಮತ್ತು ಬಿಸಿನೀರು ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಗಂಟಲಿನ ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ಗಂಟಲನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಜೇನುತುಪ್ಪವನ್ನು ಸೇವಿಸುವುದರಿಂದ ಒಣ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.

4 /7

ಅರಿಶಿನ, ಮೆಣಸು ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಒಣ ಕೆಮ್ಮಿನಿಂದ ಬಳಲುತ್ತಿರುವವರಿಗೆ ಅರಿಶಿನವು ಬೆಸ್ಟ್‌ ಮೆಡಿಸನ್‌ ಆಗ ಕೆಲಸ ಮಾಡುತ್ತದೆ. ಅರಿಶಿನ ಮತ್ತು ಕಾಳುಮೆಣಸನ್ನು ಸೇರಿಸಿ ಹಾಲಿನೊಂದಿಗೆ ಕಶಾಯ ಮಾಡಿ ಸೇವಿಸುವುದರಿಂದ, ಒಣ ಕೆಮ್ಮು ಕಡಿಮೆಯಾಗುತ್ತದೆ.

5 /7

ಶುಂಠಿ, ಉಪ್ಪು ಶುಂಠಿಯು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಒಣ ಕೆಮ್ಮನ್ನು ನಿವಾರಿಸಲು ಶುಂಠಿ ಸಹಾಯ ಮಾಡುತ್ತದೆ. ಒಂದು ಚಿಕ್ಕ ಶುಂಠಿಯನ್ನು ತೆಗೆದುಕೊಂಡು ಅದರ ಮೇಲೆ ಚಿಟಿಕೆ ಉಪ್ಪನ್ನು ಸಿಂಪಡಿಸಿ ಅಥವಾ ಜೇನುತುಪ್ಪವನ್ನು ಹಚ್ಚಿ ಹಲ್ಲಿನ ಕೆಳಗೆ ಒತ್ತಿರಿ. ಇದರಿಂದ ಕೆಮ್ಮಿನಿಂದ ಮುಕ್ತಿ ಸಿಗುತ್ತದೆ. 

6 /7

ತುಪ್ಪ, ಮೆಣಸು ತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಗಂಟಲನ್ನು ಮೃದುಗೊಳಿಸುತ್ತದೆ. ಕಾಳುಮೆಣಸಿನ ಪುಡಿಯೊಂದಿಗೆ ತುಪ್ಪವನ್ನು ಬೆರೆಸಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ.

7 /7

ಉಪ್ಪು ನೀರು ಒಣ ಕೆಮ್ಮಿನಿಂದ ಉಂಟಾಗುವ ಅಸ್ವಸ್ಥತೆ ಮತ್ತು ಕಿರಿಕಿರಿಯನ್ನು ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಕಡಿಮೆ ಮಾಡುತ್ತದೆ. ಉಪ್ಪಿನಲ್ಲಿ ನೀರನ್ನು ಬೆರಸಿ ಕುಡಿಯುವುದರಿಂದ ಗಂಟಲಿನಲ್ಲಿರುವ ಬ್ಯಾಕ್ಟಿರಿಯಾಗಳು ನಾಶವಾಗುತ್ತದೆ. ಒಂದು ದೊಡ್ಡ ಗಾಜಿನ ಬೆಚ್ಚಗಿನ ನೀರಿಗೆ 1 ಟೀಚಮಚ ಉಪ್ಪು ಸೇರಿಸಿ. ಈ ನೀರಿನಿಂದ ನಿಮ್ಮ ಬಾಯಿಯನ್ನು ದಿನಕ್ಕೆ ಹಲವಾರು ಬಾರಿ ತೊಳೆಯಿರಿ.