ಬೆಂಗಳೂರು: ಮುಖ್ಯಮಂತ್ರಿ ಅಭ್ಯರ್ಥಿಯನ್ನು ಒಟ್ಟಿಗೆ ಘೋಷಿಸಿ ನೋಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ಸವಾಲು ಹಾಕಿದೆ. #CONgressMuktBharat ಹ್ಯಾಶ್ ಟ್ಯಾಗ್ ಬಳಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ‘ಪಂಚ’ ರಾಜ್ಯಗಳ ಚುನಾವಣೆಯಲ್ಲಿ ‘ಕೈ’ ಪಕ್ಷ ಹೀನಾಯ ಸೋಲು ಕಂಡಿರುವುದಕ್ಕೆ ವ್ಯಂಗ್ಯವಾಡಿದೆ.
‘ನಾವು ಈಗಲೇ ಚುನಾವಣೆಗೆ ಸಿದ್ಧವೆಂದು ಸಿದ್ದರಾಮಯ್ಯ(Siddaramaiah) ಹೇಳುತ್ತಾರೆ, ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್ ಒಟ್ಟಾಗಿರಲು ಸಾಧ್ಯವಿಲ್ಲ ಎಂದು ಡಿಕೆಶಿ ಹೇಳುತ್ತಾರೆ. ಹೌದೇ, ಹಾಗಿದ್ದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ನೋಡೋಣ? ಒಟ್ಟಾಗಿ ಹೇಗೆ ಎದುರಿಸುತ್ತಿರಿ ಎಂದು ನೋಡಬೇಕಿದೆ!’ ಅಂತಾ ಬಿಜೆಪಿ ಟೀಕಿಸಿದೆ.
ನಾವು ಚುನಾವಣೆಗೆ ಸಿದ್ಧ ಎಂದ ಸಿದ್ದರಾಮಯ್ಯ.
ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್ ಒಟ್ಟಾಗಿ ಇರಲು ಸಾಧ್ಯವಿಲ್ಲ ಎಂದ ಶಿವಕುಮಾರ್.
ಹೌದೇ, ಹಾಗಿದ್ದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ನೋಡೋಣ? ಒಟ್ಟಾಗಿ ಹೇಗೆ ಎದುರಿಸುತ್ತಿರಿ ಎಂದು ನೋಡಬೇಕಿದೆ!#CONgressMuktBharat
— BJP Karnataka (@BJP4Karnataka) March 12, 2022
ಇದನ್ನೂ ಓದಿ: ಎಚ್.ಡಿ ದೇವೇಗೌಡ-ಕುಮಾರಸ್ವಾಮಿ ಅವರ ಜೊತೆಗಿನ ಚರ್ಚೆ ಫಲಪ್ರದ ಎಂದ ಸಿ ಎಂ ಇಬ್ರಾಹಿಂ
‘ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೂ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೆ ವಾಸ್ತವದ ಅರಿವಾಗುತ್ತಿಲ್ಲ. ರಾಜ್ಯ ಬಿಜೆಪಿಗೆ ಕ್ಯಾನ್ಸರ್ ಎಂದು ಟೀಕಿಸುತ್ತಿರುವ ಅವರಿಗೆ ತಮ್ಮ ಬೆನ್ನ ಹಿಂದೆ ಏನಾಗುತ್ತಿದೆ ಎಂಬುದರ ಅರಿವಿಲ್ಲ. ಕಾಂಗ್ರೆಸ್ ಪಕ್ಷ ಈಗ ಅಂತಿಮ ಕ್ಷಣಗಳನ್ನು ಎದುರಿಸುತ್ತಿದೆ’ ಅಂತಾ ಕುಟುಕಿದೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವಾಸ್ತವದ ಅರಿವಾಗುತ್ತಿಲ್ಲ.
ರಾಜ್ಯ ಬಿಜೆಪಿಗೆ ಕ್ಯಾನ್ಸರ್ ಎಂದು ಟೀಕಿಸುತ್ತಿರುವ ಅವರಿಗೆ ತಮ್ಮ ಬೆನ್ನ ಹಿಂದೆ ಏನಾಗುತ್ತಿದೆ ಎಂಬುದರ ಅರಿವಿಲ್ಲ.
ಕಾಂಗ್ರೆಸ್ ಪಕ್ಷ ಈಗ ಅಂತಿಮ ಕ್ಷಣಗಳನ್ನು ಎದುರಿಸುತ್ತಿದೆ.#CongressMuktBharat
— BJP Karnataka (@BJP4Karnataka) March 12, 2022
‘ಭಿನ್ನಾಭಿಪ್ರಾಯ ಇದ್ದರೆ ಅವುಗಳನ್ನು ಕೆಪಿಸಿಸಿ(KPCC) ಕಚೇರಿಯಲ್ಲೇ ಸಮಾಧಿ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ(DK Shivakumar)ಕರೆ ನೀಡಿದ್ದಾರೆ. ಡಿಕೆಶಿ ಅವರೇ, ನಿಮ್ಮ ಹಾಗೂ ಸಿದ್ದರಾಮಯ್ಯ ಅವರ ಭಿನ್ನಾಭಿಪ್ರಾಯಗಳ ಸಮಾಧಿ ಕೆಪಿಸಿಸಿ ಕಚೇರಿಯಲ್ಲಿ ಕೆದಕಿದರೆ ಬೆಟ್ಟದಷ್ಟು ದೊಡ್ದದಾದ ಸಮಾಧಿ ಸಿಗಬಹುದಲ್ಲವೇ?’ ಅಂತಾ ಪ್ರಶ್ನಿಸಿದೆ.
ಇದನ್ನೂ ಓದಿ: 'ಆತ್ಮಾರಾಧನೆ ಮಾಡಿಕೊಳ್ಳುವ ಕಾಂಗ್ರೆಸ್ ಭವಿಷ್ಯ ಇನ್ನಷ್ಟು ಘೋರವಾಗಿರಲಿದೆ'
‘ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್(Congress) ಸದಸ್ಯತನಕ್ಕೆ ಟಿವಿ, ಫ್ರಿಡ್ಜ್ ಆಮಿಷ ಒಡ್ಡಲಾಗುತ್ತಿದೆ. 50 ಸಾವಿರಕ್ಕೂ ಹೆಚ್ಚು ಸದಸ್ಯತ್ವವನ್ನು ಮಾಡಿದರೆ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ ಕೊಡುತ್ತೇನೆ ಎಂದು ಡಿಕೆಶಿ ಹೇಳುತ್ತಾರೆ. ಆಮಿಷದಿಂದಲೇ ಪಕ್ಷ ಕಟ್ಟುವ ದುಃಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇಕೆ?’ ಅಂತಾ ಟ್ವೀಟ್ ಮಾಡಿದೆ.
ಯುವ ಕಾಂಗ್ರೆಸ್ಗೆ ಕೇವಲ 2 ಸಾವಿರ ಸದಸ್ಯರ ನೇಮಕ ಮಾಡಲಾಗಿದೆ ಎಂದು @DKShivakumar ಅವರು ಹರಿಹಾಯ್ದಿದ್ದಾರೆ.
ಎಷ್ಟೇ ಒತ್ತಾಯ ಮಾಡಿದರೂ ಮುಳುಗುತ್ತಿರುವ ಕಾಂಗ್ರೆಸ್ ಪಕ್ಷದ ಕಡೆ ಯುವ ಜನತೆ ಒಲವು ತೋರುತ್ತಿಲ್ಲ.
ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಅಪ್ರಸ್ತುತ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.#CongressMuktBharat
— BJP Karnataka (@BJP4Karnataka) March 12, 2022
‘ಯುವ ಕಾಂಗ್ರೆಸ್ಗೆ ಕೇವಲ 2 ಸಾವಿರ ಸದಸ್ಯರ ನೇಮಕ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್(DK Shivakumar) ಅವರು ಹರಿಹಾಯ್ದಿದ್ದಾರೆ. ಎಷ್ಟೇ ಒತ್ತಾಯ ಮಾಡಿದರೂ ಮುಳುಗುತ್ತಿರುವ ಕಾಂಗ್ರೆಸ್ ಪಕ್ಷದ ಕಡೆ ಯುವ ಜನತೆ ಒಲವು ತೋರುತ್ತಿಲ್ಲ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಅಪ್ರಸ್ತುತ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ’ ಅಂತಾ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.