ನವದೆಹಲಿ: RBI Penalty on Banks - ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೊಮ್ಮೆ ಹಲವು ಬ್ಯಾಂಕ್ಗಳಿಗೆ ಭಾರಿ ದಂಡ ವಿಧಿಸಿದೆ. ಕೇಂದ್ರ ಬ್ಯಾಂಕ್ ಪರವಾಗಿ ನಿಯಮಗಳ ಅನುಸರಣೆಯನ್ನು ತಪ್ಪಿದ ಬ್ಯಾಂಕುಗಳಿಗೆ ಈ ದಂಡವನ್ನು ವಿಧಿಸಲಾಗಿದೆ. ಕೆಲ ದಿನಗಳ ಹಿಂದೆಯೂ ಆರ್ಬಿಐ (Reserve Bank Of India) ಮೂರು ಬ್ಯಾಂಕ್ಗಳಿಗೆ ದಂಡ ವಿಧಿಸಿತ್ತು. ಈಗ ದಂಡ ವಿಧಿಸಿರುವ ಬ್ಯಾಂಕುಗಳೆಲ್ಲವೂ ಸಹಕಾರಿ ಬ್ಯಾಂಕ್ ಗಳಾಗಿವೆ.
ಇದನ್ನೂ ಓದಿ-Aadhaar Card: ಆಧಾರ್ ಕಾರ್ಡ್ ಅನ್ನು ಲಾಕ್-ಅನ್ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ನಿಯಮಗಳನ್ನು ಅನುಸರಿಸದಿದ್ದಕ್ಕಾಗಿ ದಂಡ ವಿಧಿಸಲಾಗಿದೆ
ಈ ಕುರಿತು ಮಾಹಿತಿ ನೀಡಿರುವ RBI, 'ಬಹಿರಂಗಪಡಿಸುವ ಮಾನದಂಡಗಳು ಮತ್ತು ಶಾಸನಬದ್ಧ/ಇತರ ನಿರ್ಭಂಧಿತ ಯುಸಿಬಿ' ಅಡಿಯಲ್ಲಿ ಸೂಚನೆಗಳನ್ನು ಅನುಸರಿಸದಿದ್ದಕ್ಕಾಗಿ ನಬಪಲ್ಲಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ (West Bengal) ರೂ 4 ಲಕ್ಷ ದಂಡವನ್ನು ವಿಧಿಸಲಾಗಿದೆ ಎಂದಿದೆ. ಇದಲ್ಲದೆ, ಬಘಾತ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಹಿಮಾಚಲ ಪ್ರದೇಶ) ಗೆ 3 ಲಕ್ಷ ರೂ.ದಂಡ ವಿಧಿಸಲಾಗಿದೆ.
ಇದನ್ನೂ ಓದಿ-Ujjwala Yojana: ಹೋಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್! 1.65 ಕೋಟಿ ಜನರಿಗೆ ಉಚಿತ LPG ಸಿಲಿಂಡರ್
ದಂಡ ವಿಧಿಸಲಾಗಿರುವ ಬ್ಯಾಂಕುಗಳಲ್ಲಿ ಯುಪಿಯ ಒಂದು ಬ್ಯಾಂಕ್ ಕೂಡ ಶಾಮೀಲಾಗಿದೆ
ಇದಲ್ಲದೆ, ಮಣಿಪುರ ಮಹಿಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಮಣಿಪುರ), ಯುನೈಟೆಡ್ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಉತ್ತರ ಪ್ರದೇಶ), ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ನರಸಿಂಗ್ಪುರ), ಅಮರಾವತಿ ಮರ್ಚೆಂಟ್ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಅಮರಾವತಿ), ಫೈಜ್ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ನಾಸಿಕ್) , ನವನಿರ್ಮಾಣ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಅಹಮದಾಬಾದ್) ಬ್ಯಾಂಕುಗಳಿಗೂ ಕೊಡ RBI ದಂಡವನ್ನು ವಿಧಿಸಿದೆ.
ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಡಬಲ್ ಬೋನಸ್..! 23.29% ವೇತನ ಹೆಚ್ಚಳ, ನಿವೃತ್ತಿ ವಯಸ್ಸು 62 ಕ್ಕೆ ಏರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.