ಗ್ವಾಟಾಮಾಲಾ: ಗ್ವಾಟಾಮಾಲಾ ನಗರದಲ್ಲಿ ಉಂಟಾದ ಜ್ವಾಲಾಮುಖಿಗೆ ಕನಿಷ್ಠ 6 ಜನರು ಮೃತಪಟ್ಟು 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಜ್ವಾಲಾಮುಖಿಯು ಗ್ವಾಟಾಮಾಲಾ ಸಿಟಿಯಿಂದ 40 ಕಿಮೀ ದೂರದ ನೈಋತ್ಯ ಭಾಗದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ.ಜ್ವಾಲಾಮುಖಿ ಉಂಟಾದ ತಕ್ಷಣ ಕಪ್ಪು ಹೊಗೆ ಮತ್ತು ಬೂದಿ ಈ ಇಡಿ ನಗರದ ಸುತ್ತಮುತ್ತ ಆವೃತವಾಗಿದೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ.
ಜ್ವಾಲಾಮುಖಿಯ ಕಾರಣದಿಂದಾಗಿ ಗ್ವಾಟಾಮಾಲಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಗೀತಗೊಳಿಸಲಾಗಿದೆ.ಅಲ್ಲದೆ ನಗರದ ಸುತ್ತಮುತ್ತಲಿರುವ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.
ಈಗಾಗಲೇ ಗ್ವಾತಾಮಾಲಾ ಸರ್ಕಾರವು ಜ್ವಾಲಾಮುಖಿ ಪ್ರದೇಶದಲ್ಲಿ ವಾಸಿಸಕೂಡದು ಎಂದು ಸೂಚನೆ ನೀಡಿದೆ .ಜನರಿಗೆ ವಿಷಪೂರಿತಗಾಳಿಯಿಂದ ರಕ್ಷಿಸಿಕೊಳ್ಳಲು ಮುಸುಕುಗಳನ್ನು ಬಳಸಲು ತಿಳಿಸಿದೆ.
ಇನ್ನೊಂದೆಡೆ ಗ್ವಾಟಾಮಾಲಾದ ಅಧ್ಯಕ್ಷ ಜಿಮ್ಮಿ ಮಾರಲ್ಸ್ ಅವರು ರಾಷ್ಟ್ರೀಯ ತುರ್ತುಪರಿಸ್ಥಿತಿಯಯನ್ನು ಘೋಷಣೆ ಮಾಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.