ಇಂದು ಪುನೀತ್ ರಾಜ್ಕುಮಾರ್ (Puneeth Rajkumar) ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬ ಆಚರಣೆ ಮಾಡುವ ಪರಿಸ್ಥಿತಿ ಬಂದಿದೆ.
ಕಳೆದ ವರ್ಷ ಅ.29ರಂದು ಹೃದಯಾಘಾತದಿಂದ ನಿಧನರಾದ ಅಪ್ಪು ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮಾ.17 ಎಂದರೆ ಜಗ್ಗೇಶ್ ಅಭಿಮಾನಿಗಳಿಗೂ ವಿಶೇಷ. ಯಾಕೆಂದರೆ, ಇಂದು ಜಗ್ಗೇಶ್ ಜನ್ಮದಿನ (Jaggesh Birthday) ಕೂಡ ಹೌದು.
ಇದನ್ನೂ ಓದಿ: ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ
ಅಪ್ಪು ಬದುಕಿದ್ದಾಗ ಜಗ್ಗೇಶ್ ಅವರ ಜನ್ಮದಿನಕ್ಕೂ ವಿಶ್ ಮಾಡುತ್ತಿದ್ದರು. 'ನಾನು ಜಗ್ಗೇಶ್ (Jaggesh) ಅವರ ಅಭಿಮಾನಿ' ಎಂದು ಹಲವು ಬಾರಿ ಪುನೀತ್ ಹೇಳಿಕೊಂಡಿದ್ದೂ ಇದೆ.
😭😭😭😭😭😭😭 https://t.co/3i8SWRplGO
— ನವರಸನಾಯಕ ಜಗ್ಗೇಶ್ (@Jaggesh2) March 16, 2022
ಇಂದು ಪುನೀತ್ ರಾಜ್ಕುಮಾರ್ ಅವರ ಕೆಲವು ಹಳೇ ವಿಡಿಯೋಗಳು ವೈರಲ್ (Viral Video) ಆಗುತ್ತಿವೆ. ಅದರಲ್ಲಿ ಈ ವಿಡಿಯೋ ಕೂಡ ಒಂದು. ಜಗ್ಗೇಶ್ ಜನ್ಮದಿನದ ಪ್ರಯುಕ್ತ ಶುಭ ಕೋರಿರುವ ಅಭಿಮಾನಿಗಳು ಕೆಲವು ಹಳೇ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಜಗ್ಗೇಶ್ ಭಾವುಕರಾಗಿದ್ದಾರೆ.
ಇದನ್ನೂ ಓದಿ: James: ದೊಡ್ಮನೆ ಕುಟುಂಬದಿಂದ ಹಲವು ಕಾರ್ಯ: "ಜೇಮ್ಸ್" ಸಿನಿಮಾ ಅಲ್ಲ, ಎಮೋಷನ್ ಎಂದ ರಾಘಣ್ಣ
ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ಪುನೀತ್ (Appu) ಕಡೆಯಿಂದ ಜಗ್ಗೇಶ್ ಅವರಿಗೆ ಶುಭಾಶಯ ಬರುತ್ತಿತ್ತು. "ಜಗ್ಗೇಶ್ ಅವರಿಗೆ ಒಬ್ಬ ಅಭಿಮಾನಿಯಾಗಿ ನನ್ನ ಕಡೆಯಿಂದ ಶುಭಾಶಯಗಳು. ಹ್ಯಾಪಿ ಬರ್ತ್ಡೇ ಜಗ್ಗೇಶ್ ಸರ್. ಯಾಕೆಂದರೆ ನಾನು ಅವರ ದೊಡ್ಡ ಫ್ಯಾನ್" ಎಂದು ಪುನೀತ್ ಹೇಳಿದ್ದ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ಅಳುವ ಎಮೋಜಿಗಳ ಮೂಲಕ ಅನೇಕ ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.