Accelero Electric Scooter: ಕಳೆದ ಎರಡು ವರ್ಷಗಳಲ್ಲಿ, ಎಲೆಕ್ಟ್ರಿಕ್ ವಾಹನಗಳ ಕಡೆಗೆ ಭಾರತೀಯ ಗ್ರಾಹಕರ ಒಲವು ಹೆಚ್ಚಾಗುತ್ತಿದೆ. ವಿಶೇಷವಾಗಿ ದ್ವಿಚಕ್ರದ ಎಲೆಕ್ಟ್ರಿಕ್ ವಾಹನಗಳು ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಕಂಪನಿಗಳು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬಯಸುತ್ತವೆ ಮತ್ತು ದೊಡ್ಡ ವಾಹನ ತಯಾರಕರೊಂದಿಗೆ, ಅನೇಕ ಸ್ಟಾರ್ಟ್ಅಪ್ಗಳು ಸಹ ತಮ್ಮ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ.
ಇತ್ತೀಚಿಗೆ NIJ ಆಟೋಮೋಟಿವ್ ಅಸೆಲೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ (Accelero Plus Electric Scooter) ಅನ್ನು ಬಿಡುಗಡೆ ಮಾಡಿದೆ. ಇದು ಡ್ಯುಯಲ್ ಎಲ್ಇಡಿ ಹೆಡ್ಲ್ಯಾಂಪ್ಗಳು, ಎಲ್ಇಡಿ ಡಿಆರ್ಎಲ್ಗಳು ಮತ್ತು ಬೂಮರಾಂಗ್ ಶೈಲಿಯ ಎಲ್ಇಡಿ ಸೂಚಕಗಳೊಂದಿಗೆ ಸಾಕಷ್ಟು ಆಕರ್ಷಕವಾಗಿದೆ.
ಇದನ್ನೂ ಓದಿ- Affordable Bikes: ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವ 4 ಬೈಕ್ಗಳಿವು
3 LFP ಬ್ಯಾಟರಿ ಪ್ಯಾಕ್ಗಳನ್ನು ಒಳಗೊಂಡಿದೆ:
ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಇಂಪೀರಿಯಲ್ ರೆಡ್, ಬ್ಲ್ಯಾಕ್ ಬ್ಯೂಟಿ, ಪರ್ಲ್ ವೈಟ್ ಮತ್ತು ಗ್ರೇ ಟಚ್ನಲ್ಲಿ ಬಿಡುಗಡೆ ಮಾಡಿದೆ. ಕ್ರೂಸ್ ಕಂಟ್ರೋಲ್ನಂತಹ ವೈಶಿಷ್ಟ್ಯವನ್ನು ಅಕ್ಸೆಲೆರೊ ಪ್ಲಸ್ನೊಂದಿಗೆ ನೀಡಲಾಗಿದೆ, ಇದು ದೂರದ ಪ್ರಯಾಣ ಮಾಡುವಾಗ ತುಂಬಾ ಉಪಯುಕ್ತವಾಗಿದೆ. ಸ್ಕೂಟರ್ ಲೆಡ್-ಆಸಿಡ್ ಬ್ಯಾಟರಿ ಮತ್ತು 3 LFP ಬ್ಯಾಟರಿ ಪ್ಯಾಕ್ಗಳನ್ನು ಒಳಗೊಂಡಿರುವ ನಾಲ್ಕು ಬ್ಯಾಟರಿ ಕಾನ್ಫಿಗರೇಶನ್ಗಳಲ್ಲಿ ಬರುತ್ತದೆ. LFP ಬ್ಯಾಟರಿ ಆಯ್ಕೆಗಳು 1.5 kW (48 V), 1.5 kW (60 V) ಮತ್ತು 3 kW ಜೊತೆಗೆ 48 V ಡ್ಯುಯಲ್ ಬ್ಯಾಟರಿ ಸೆಟಪ್ನೊಂದಿಗೆ ಬರುತ್ತವೆ ಎಂದು ಕಂಪನಿ ಮಾಹಿತಿ ನೀಡಿದೆ.
ಇದನ್ನೂ ಓದಿ- TVS iQube: ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ 3,255 ರೂ.ಗಳ ಮಾಸಿಕ EMI ನಲ್ಲಿ ಖರೀದಿಸಬಹುದು
ಇಕೋ ಮೋಡ್ನಲ್ಲಿ ಗರಿಷ್ಠ 190 ಕಿ.ಮೀ ಮೈಲೇಜ್:
ಅಕ್ಸೆಲೆರೊ ಪ್ಲಸ್ಗೆ ಮೂರು ರೈಡಿಂಗ್ ಮೋಡ್ಗಳನ್ನು ನೀಡಲಾಗಿದೆ, ಇದರಲ್ಲಿ ಸ್ಕೂಟರ್ ಇಕೋ ಮೋಡ್ನಲ್ಲಿ ಅತ್ಯಧಿಕ 190 ಕಿಮೀ ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸಿಟಿ ಮೋಡ್ನಲ್ಲಿ, ಇದು ಒಂದೇ ಚಾರ್ಜ್ನಲ್ಲಿ 140 ಕಿಮೀ ವರೆಗೆ ಚಲಿಸುತ್ತದೆ. ಆಕ್ಸೆಲೆರೊ ಮತ್ತು ಆಕ್ಸೆಲೆರೊ ಪ್ಲಸ್ನ ಎಕ್ಸ್-ಶೋರೂಂ ಬೆಲೆಯು 53,000 ರಿಂದ 98,000 ರೂ.ಗಳವರೆಗೆ ನಿಗದಿಗೊಳಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.