ಗ್ರಾಹಕರಿಗೆ ಮುನ್ನೆಚ್ಚರಿಕೆ ನೀಡಿದ SBI; 4 ದಿನಗಳವರೆಗೆ ಬ್ಯಾಂಕ್ ವ್ಯವಹಾರ ಇರುವುದಿಲ್ಲ

SBI Latest News: ಮುಷ್ಕರದ ದಿನಗಳಲ್ಲಿ ಬ್ಯಾಂಕ್ ತನ್ನ ಶಾಖೆಗಳು ಮತ್ತು ಕಚೇರಿಗಳ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ. ಆದರೆ ಮುಷ್ಕರದಿಂದಾಗಿ ಬ್ಯಾಂಕ್‌  ಕೆಲಸಗಳು ಸ್ಥಗಿತಗೊಳ್ಳುವ ಆತಂಕವೂ ಇದೆ. 

Written by - Ranjitha R K | Last Updated : Mar 23, 2022, 09:16 AM IST
  • ದೇಶದ ಅತಿ ದೊಡ್ಡ ಬ್ಯಾಂಕ್ ಗೂ ಆತಂಕ
  • ಎಸ್‌ಬಿಐ ಗ್ರಾಹಕರಿಗೆ ನೀಡಿದೆ ಎಚ್ಚರಿಕೆ
  • 4 ದಿನಗಳವರೆಗೆ ಬ್ಯಾಂಕ್ ವ್ಯವಹಾರ ಇಲ್ಲ
ಗ್ರಾಹಕರಿಗೆ ಮುನ್ನೆಚ್ಚರಿಕೆ ನೀಡಿದ SBI; 4 ದಿನಗಳವರೆಗೆ  ಬ್ಯಾಂಕ್ ವ್ಯವಹಾರ  ಇರುವುದಿಲ್ಲ  title=
4 ದಿನಗಳವರೆಗೆ ಬ್ಯಾಂಕ್ ವ್ಯವಹಾರ ಇಲ್ಲ (file photo)

ನವದೆಹಲಿ : SBI Latest News : ಎಸ್‌ಬಿಐ (SBI) ಗ್ರಾಹಕರಿಗೆ ಮಹತ್ವದ ಸುದ್ದಿಯಿದೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ (SBI) ಎರಡು ದಿನಗಳ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ವಿವಿಧ ನೌಕರರ ಸಂಘಟನೆಗಳು ಮಾರ್ಚ್ 28 ಮತ್ತು 29 ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ (Bank Bundh).  ಈ ಹಿನ್ನೆಲೆಯಲ್ಲಿ ಇದು ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಸ್‌ಬಿಐ ಆತಂಕ ವ್ಯಕ್ತಪಡಿಸಿದೆ.

ಎಸ್‌ಬಿಐ ನೀಡಿದೆ ಮಾಹಿತಿ :
ಇದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (State Bank Of India) ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಮುಷ್ಕರದ ದಿನಗಳಲ್ಲಿ ಬ್ಯಾಂಕ್ (Bank)ತನ್ನ ಶಾಖೆಗಳು ಮತ್ತು ಕಚೇರಿಗಳ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ ಎಂದು ಎಸ್‌ಬಿಐ (SBI) ತನ್ನ ಮಾಹಿತಿಯಲ್ಲಿ ತಿಳಿಸಿದೆ. ಆದರೆ ಮುಷ್ಕರದಿಂದಾಗಿ ಬ್ಯಾಂಕ್‌ನಲ್ಲಿನ ಕೆಲಸದ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುವ ಆತಂಕವಿದೆ. ಹಾಗಾಗಿ ಗ್ರಾಹಕರಿಗೂ ಈ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿದೆ (SBI Alert). ಈ ಎರಡು ದಿನಗಳಲ್ಲಿ ಬ್ಯಾಂಕ್ ಕೆಲಸದ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ತೆರಳುವ ಮುನ್ನ ಶಾಖೆಯಿಂದ ಸೂಕ್ತ ಮಾಹಿತಿ ಪಡೆದುಕೊಳ್ಳುವಂತೆ ಹೇಳಲಾಗಿದೆ. 

ಇದನ್ನೂ  ಓದಿ :  Petrol, Diesel Latest Price: ಬೆಲೆಯೇರಿಕೆ ಶಾಕ್- ಪೆಟ್ರೋಲ್- ಡೀಸೇಲ್ ಬೆಲೆ ಎರಡನೇ ದಿನವೂ ಏರಿಕೆ!

ಮುಷ್ಕರಕ್ಕೆ ಕಾರಣವೇನು ?
ಸರ್ಕಾರದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ (Bank Privatization) ಮತ್ತು ಬ್ಯಾಂಕ್ ಕಾನೂನು ತಿದ್ದುಪಡಿ ಮಸೂದೆ 2021 ವಿರೋಧಿಸಿ ವಿವಿಧ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಪ್ರಕಾರ, ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (AIBEA), ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್‌ಐ) ಮತ್ತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (BEFI)ನೋಟಿಸ್ ಜಾರಿ ಮಾಡಿದೆ ಎಂದು ಭಾರತೀಯ ಬ್ಯಾಂಕ್‌ಗಳ ಸಂಘ (IBA) ತಿಳಿಸಿದೆ. 

ಸತತ 4 ದಿನಗಳ ಕಾಲ ಬ್ಯಾಂಕ್‌ ರಜೆ :
ಮುಷ್ಕರದ ಕಾರಣ, ಮಾರ್ಚ್ 26 ರಿಂದ 29 ರವರೆಗೆ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಮಾರ್ಚ್ 26 ತಿಂಗಳ ನಾಲ್ಕನೇ ಶನಿವಾರ ಮತ್ತು ಮಾರ್ಚ್ 27 ಭಾನುವಾರ, ಬ್ಯಾಂಕ್‌ಗಳಿಗೆ ವಾರದ ರಜೆಗಳಿವೆ (Bank Holiday). ಹೀಗಾಗಿ ಮಾರ್ಚ್ 28-29ರಂದು ಮುಷ್ಕರ ನಡೆಯುವುದರಿಂದ ಕಾಮಗಾರಿಗೆ ತೊಂದರೆಯಾಗಲಿದೆ. 

ಇದನ್ನೂ  ಓದಿ : Mutual Fund: ಮ್ಯೂಚವಲ್ ಫಂಡ್ ಹೂಡಿಕೆಯಿಂದಾಗುವ ಲಾಭಗಳೇನು? ಯಾವ ರೀತಿ ಹೂಡಿಕೆ ಮಾಡಿದರೆ ಉತ್ತಮ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News