ನವದೆಹಲಿ : ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಪ್ರತಿಯೊಂದು ರಾಶಿಯ ಜನರ ಒಳಿತು ಕೆಡುಕುಗಳನ್ನು ಹೇಳಲಾಗಿದೆ. ಈ ಗುಣಲಕ್ಷಣಗಳು ಅವರ ವ್ಯಕ್ತಿತ್ವದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಗುಣಗಳ ಆಧಾರದ ಮೇಲೆಯೇ ಜನರು ಅವರನ್ನು ಇಷ್ಟಪಡಲೂಬಹುದು. ಇಷ್ಟಪಡದೆಯೂ ಇರಬಹುದು. ಕೆಲವರಲ್ಲಿ ರುಚಿಕರವಾದ ಅಡುಗೆ ಮಾಡುವ ಗುಣವಿರುತ್ತದೆ (Cooking Habits). ಜ್ಯೋತಿಷ್ಯದ ಪ್ರಕಾರ, 3 ರಾಶಿಯ ಪುರುಷರು ಮತ್ತು ಮಹಿಳೆಯರು ಅಡುಗೆ ಮಾಡಲು ಇಷ್ಟಪಡುತ್ತಾರೆ. ರುಚಿಕರವಾದ ಆಹಾರವನ್ನು ತಿನ್ನಿಸುವ ಮೂಲಕ, ಎದುರಿಗಿರುವವರ ಹೃದಯವನ್ನು ಸುಲಭವಾಗಿ ಗೆಲ್ಲುತ್ತಾರೆ.
ಈ ರಾಶಿಯವರು ಅಡುಗೆಯಲ್ಲಿ ನಿಪುಣರು :
ಮಿಥುನ ರಾಶಿ : ಮಿಥುನ ರಾಶಿಯವರಿಗೆ (Gemini) ಅಡುಗೆ ಮಾಡುವುದು ಮತ್ತು ತಿನ್ನಿಸುವುದು ಎಂದರೆ ಬಹಳ ಇಷ್ಟ. ಈ ರಾಶಿಯವರು ಅಡುಗೆ ಮಾಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಹೊಸ ಭಕ್ಷ್ಯಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಈ ಜನರು ಧೈರ್ಯಶಾಲಿ ಮತ್ತು ನಿರ್ಭೀತರು (Nature of Gemini). ಯಾವುದೇ ಅಪಾಯಕಾರಿ ಕೆಲಸವಾದರೂ ಹಿಂದೆ ಸರಿಯುವುದಿಲ್ಲ.
ಇದನ್ನೂ ಓದಿ : ಇಂದಿನಿಂದ 15 ದಿನಗಳವರೆಗೆ ಈ ರಾಶಿಯವರಿಗೆ ವರದಾನ..! ರೂಪುಗೊಳ್ಳಲಿದೆ ಧನ ಲಾಭದ ಪ್ರಬಲ ಯೋಗ
ಕನ್ಯಾ ರಾಶಿ : ಕನ್ಯಾ ರಾಶಿಯ (Virgo) ಜನರು ತುಂಬಾ ಭಾವುಕರಾಗಿರುತ್ತಾರೆ. ಆದರೆ ಈ ರಾಶಿಯವರು ಬಹಳ ಬುದ್ದಿವಂತರು. ಈ ರಾಶಿಯವರು ಎಲ್ಲರನ್ನೂ ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ. ಕನ್ಯಾ ರಾಶಿಯವರು ಅಡುಗೆ ಮಾಡುವುದರಲ್ಲಿ ಪರಿಣಿತರಾಗಿರುತ್ತಾರೆ. ಮನೆಗೆ ಯಾರೇ ಬಂದರೂ ಬಹಳ ಪ್ರೀತಿಯಿಂದ ಅಡುಗೆ ಮಾಡಿ ಬಡಿಸುತ್ತಾರೆ.
ತುಲಾ : ತುಲಾ ರಾಶಿಯ (Libra) ಜನರು ಅಡುಗೆಯಲ್ಲೂ ನಿಪುಣರು. ಈ ಜನರು ಶಾಂತ ಮತ್ತು ಸಮತೋಲಿತ ಜೀವನವನ್ನು ಬಯಸುತ್ತಾರೆ. ಅವರು ಸ್ವಲ್ಪ ಒತ್ತಡಕ್ಕೊಳಗಾದರೂ ಅಡುಗೆ ಮಾಡುವ ಮೂಲಕ ತಮ್ಮ ಒತ್ತಡವನ್ನು ಹೊರಹಾಕುತ್ತಾರೆ. ಈ ರಾಶಿಯವರು (Zodiac Sign) ತಮ್ಮ ದುಃಖವನ್ನೆಲ್ಲಾ ಮರೆತು ಬಹಳ ಖುಷಿಯಿಂದಲೇ ಅಡುಗೆ ಮಾಡುತ್ತಾರೆ.
ಇದನ್ನೂ ಓದಿ : Budh Gochar: ಬುಧನ ರಾಶಿ ಪರಿವರ್ತನೆ; ಈ 6 ರಾಶಿಯವರಿಗೆ ಸಂಕಷ್ಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.