CSK : ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದ ಎಂಎಸ್ ಧೋನಿ!

ಈ ಮಾಹಿತಿಯನ್ನು CSK ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ.  

Written by - Channabasava A Kashinakunti | Last Updated : Mar 24, 2022, 07:21 PM IST
  • ಐಪಿಎಲ್ 2022 ರ ಮೊದಲು
  • CSK ನಾಯಕತ್ವದಿಂದ ಕೆಳಗಿಳಿದ ಧೋನಿ
  • ಇವರ ಸ್ಥಾನವನ್ನುರವೀಂದ್ರ ಜಡೇಜಾಗೆ ವಹಿಸಿಕೊಳ್ಳಲಿದ್ದಾರೆ.
CSK : ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದ ಎಂಎಸ್ ಧೋನಿ! title=

ಮುಂಬೈ : ಐಪಿಎಲ್ 2022 ರ ಮೊದಲು, ಎಂಎಸ್ ಧೋನಿ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. 

ಈ ಮಾಹಿತಿಯನ್ನು CSK ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ.

ಈ ಆಟಗಾರ CSK ನ ಹೊಸ ಕ್ಯಾಪ್ಟನ್

ಇಂಡಿಯನ್ ಪ್ರೀಮಿಯರ್ ಲೀಗ್ 2022 ಪ್ರಾರಂಭವಾಗುವ ಮೊದಲು ಮಹೇಂದ್ರ ಸಿಂಗ್ ಧೋನಿ (MS Dhoni) ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತೊರೆದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಭಾರಿ ಆಘಾತವಾಗಿದೆ. ಧೋನಿ ಬದಲಿಗೆ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ.ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಈ ಮಾಹಿತಿಯನ್ನು ನೀಡಿದೆ. ಆಟಗಾರನಾಗಿ ಧೋನಿ ತಂಡದೊಂದಿಗೆ ಸಂಬಂಧ ಹೊಂದಿರುತ್ತಾರೆ. IPL 2022 ರ ಮೆಗಾ ಹರಾಜಿನ ಮೊದಲು, ಜಡೇಜಾ ಅವರು ಚೆನ್ನೈ ಉಳಿಸಿಕೊಂಡ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಅವರನ್ನು ಚೆನ್ನೈ 16 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಎಂಎಸ್ ಧೋನಿಗೆ ತಂಡ 12 ಕೋಟಿ ರೂ. ಉಳಿಸಿಕೊಂಡದೆ.

ಇದನ್ನೂ ಓದಿ : IPL 2022 ರ ಅತ್ಯಂತ ಅಪಾಯಕಾರಿ ಬೌಲರ್‌ಗಳು ಇವರೆ ನೋಡಿ!

ಜಡೇಜಾ ಒಬ್ಬ ಶ್ರೇಷ್ಠ ಆಲ್‌ರೌಂಡರ್

ರವೀಂದ್ರ ಜಡೇಜಾ ಉತ್ತಮ ಫಾರ್ಮ್‌ನಲ್ಲಿ ಆಟ ಆಡುತ್ತಿದ್ದಾರೆ. ಜಡೇಜಾ(Ravindra Jadej) ಚೆಂಡಿನ ಜೊತೆಗೆ ಬ್ಯಾಟ್‌ನೊಂದಿಗೆ ಕೊಡುಗೆ ನೀಡುವಲ್ಲಿ ಪರಿಣಿತ ಆಟಗಾರ. ಕಳೆದ ಹಲವು ಸೀಸನ್‌ಗಳಲ್ಲಿ ಅವರು ಚೆನ್ನೈ ಪರ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನಾಯಕ ಧೋನಿಗೆ ವಿಕೆಟ್ ಬೇಕಾದಾಗಲೆಲ್ಲಾ ಜಡೇಜಾ ತಂದುಕೊಟ್ಟಿದ್ದಾರೆ. ಐಪಿಎಲ್ 2021 ರಲ್ಲಿ RCB ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಒಂದು ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಜಡೇಜಾ CSK ತಂಡದ 3ನೇ ಕ್ಯಾಪ್ಟನ್

ರವೀಂದ್ರ ಜಡೇಜಾ 2012 ರಿಂದ ಚೆನ್ನೈ ತಂಡದಲ್ಲಿದ್ದಾರೆ. ಅವರು ಸಿಎಸ್‌ಕೆ ತಂಡದ ಮೂರನೇ ನಾಯಕರಾಗಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಐಪಿಎಲ್(IPL) ಮೊದಲ ಸೀಸನ್ ಅಂದರೆ 2008 ರಿಂದ ತಂಡದ ಮುಖ್ಯಸ್ಥರಾಗಿದ್ದರು. 213 ಪಂದ್ಯಗಳಲ್ಲಿ ನಾಯಕರಾಗಿದ್ದ ಧೋನಿ 130 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಈ ನಡುವೆ ಸುರೇಶ್ ರೈನಾ ಕೂಡ 6 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಈ ಪೈಕಿ 2 ಪಂದ್ಯಗಳಲ್ಲಿ ಮಾತ್ರ ತಂಡ ಗೆಲುವು ಸಾಧಿಸಿದೆ.

 

ಇದನ್ನೂ ಓದಿ : ಮತ್ತೆ ಆಲ್ ರೌಂಡರ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ ರವೀಂದ್ರ ಜಡೇಜಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News