ಸುಳ್ಳೇ ಸಿದ್ದರಾಮಯ್ಯನವರ ಮನೆ ದೇವರು; ಇದಕ್ಕೆ ನೂರಾರು ಸಾಕ್ಷ್ಯಗಳಿವೆ ಎಂದ ಬಿಜೆಪಿ

ಸಿದ್ದರಾಮಯ್ಯನವರೇ ನೀವು ಸಿಎಂ ಆಗಿದ್ದಾಗ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಾದಾಗ ನೈತಿಕತೆಯ ಪ್ರಶ್ನೆ ನಿಮ್ಮನ್ನು ಬಾಧಿಸಲಿಲ್ಲವೇ? ಅಂತಾ ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Mar 25, 2022, 02:23 PM IST
  • ಸುಳ್ಳೇ ಸಿದ್ದರಾಮಯ್ಯನವರ ಮನೆ ದೇವರು, ಇದಕ್ಕೆ ನೂರಾರು ಸಾಕ್ಷ್ಯಗಳಿವೆ
  • ‘ಬದನೆಕಾಯಿ ತಿನ್ನುವುದಕ್ಕೆ, ಭಾಷಣ ವೇದಿಕೆಗೆ’ ಎಂಬಂತಾಯ್ತು ನಿಮ್ಮ ಧೋರಣೆ
  • ಹಿಜಾಬ್‌ಗೆ ಎಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನುವುದರ ಬಗ್ಗೆಯೇ ಸಿದ್ದರಾಮಯ್ಯರಿಗೆ ಗೊಂದಲವಿದೆ
ಸುಳ್ಳೇ ಸಿದ್ದರಾಮಯ್ಯನವರ ಮನೆ ದೇವರು; ಇದಕ್ಕೆ ನೂರಾರು ಸಾಕ್ಷ್ಯಗಳಿವೆ ಎಂದ ಬಿಜೆಪಿ title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ಸುಳ್ಳೇ ಸಿದ್ದರಾಮಯ್ಯ(Siddaramaiah)ನವರ ಮನೆ ದೇವರು, ಇದಕ್ಕೆ ನೂರಾರು ಸಾಕ್ಷ್ಯಗಳಿವೆ ಎಂದು ಬಿಜೆಪಿ ಟೀಕಿಸಿದೆ. #ಸುಳ್ಳುರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ವಿಪಕ್ಷ ನಾಯಕನ ವಿರುದ್ಧ ಕಿಡಿಕಾರಿದೆ.

‘ಸುಳ್ಳೇ ಸಿದ್ದರಾಮಯ್ಯನವರ ಮನೆ ದೇವರು. ಇದಕ್ಕೆ ನೂರಾರು ಸಾಕ್ಷ್ಯಗಳಿವೆ. ಕೃಷ್ಣಾ ಮೇಲ್ದಂಡೆ ಯೋಜನೆ(Upper Krishna Project)ಗೆ ವಾರ್ಷಿಕ 10 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ 5 ವರ್ಷದಲ್ಲಿ ನೀಡಿದ್ದು ಬರೇ 7.5 ಸಾವಿರ ಕೋಟಿ ರೂ. ಮಾತ್ರ. ಮಾತಿನಂತೆ ನಡೆದುಕೊಂಡಿದ್ದರೆ 50 ಸಾವಿರ ಕೋಟಿ ರೂ. ಬಿಡುಗಡೆಯಾಗಬೇಕಿತ್ತಲ್ಲವೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಸಿದ್ದರಾಮಯ್ಯನವರ ರಾಜಕೀಯ ನಿಂತಿರುವುದೇ ಸುಳ್ಳುಗಳ ಮೇಲೆ: ಬಿಜೆಪಿ ಟೀಕೆ

‘ಪರಿಹಾರ ನೀಡುವಾಗ ಕೊಲೆಯಾದವರಿಗಿಂತ ಕೊಂದವರು ಯಾರು ಎಂಬುದನ್ನು‌‌ ಬಿಜೆಪಿ ನೋಡುತ್ತದೆ‌ ಎಂದು ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. ಸಿದ್ದರಾಮಯ್ಯನವರೇ ನೀವು‌ ಸಿಎಂ ಆಗಿದ್ದಾಗ ದನಗಳ್ಳನ ಮೇಲೆ ಗುಂಡು ಹಾರಿಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ, ದನಗಳ್ಳನಿಗೆ 10 ಲಕ್ಷ ರೂ. ಪರಿಹಾರ ಕೊಟ್ಟಿರಲಿಲ್ಲವೇ? ಆಗ ಕೊಂದವರು, ಕೊಲೆಯಾದವರು ಎಂಬ ಪ್ರಶ್ನೆ ಕಾಡಲಿಲ್ಲವೇ?’ ಅಂತಾ ಪ್ರಶ್ನಿಸಿದೆ.

‘ಸಿದ್ದರಾಮಯ್ಯನವರೇ ನೀವು ಸಿಎಂ ಆಗಿದ್ದಾಗ ನಿಮ್ಮ ವಿರುದ್ಧ ಲೋಕಾಯುಕ್ತ(Lokayukta)ದಲ್ಲಿ ಖಾಸಗಿ ದೂರು ದಾಖಲಾದಾಗ ನೈತಿಕತೆಯ ಪ್ರಶ್ನೆ ನಿಮ್ಮನ್ನು ಬಾಧಿಸಲಿಲ್ಲವೇ? ಈಗ ಅನ್ಯರ ಬಗ್ಗೆ ಮಾತನಾಡುವಾಗ ನಿಮಗೆ ಈ ಎಲ್ಲ‌ ಪ್ರಶ್ನೆಗಳು ಎದುರಾಗುತ್ತವೆಯಲ್ಲವೇ? "ಬದನೆಕಾಯಿ ತಿನ್ನುವುದಕ್ಕೆ, ಭಾಷಣ ವೇದಿಕೆಗೆ" ಎಂಬಂತಾಯ್ತು ನಿಮ್ಮ ಧೋರಣೆ’ ಅಂತಾ ಬಿಜೆಪಿ(BJP) ಕುಟುಕಿದೆ.

ಇದನ್ನೂ ಓದಿ: Siddaramaiah : 'ಮುಂದಿನ ಚುನಾವಣೆಯೇ ಕೊನೆ, ಮತ್ತೆ ಚುನಾವಣಾ ರಾಜಕಾರಣ ಮಾಡಲ್ಲ'

ಸಿದ್ದರಾಮಯ್ಯನವರಿಗೆ ಗೊಂದಲವಿದೆ!

‘ಹಿಜಾಬ್‌ಗೆ ಎಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನುವುದರ ಬಗ್ಗೆಯೇ ಸಿದ್ದರಾಮಯ್ಯ(Siddaramaiah)ನವರಿಗೆ ಗೊಂದಲವಿದೆ. ಹಾದಿಬೀದಿಯಲ್ಲಿ, ಕಾಲೇಜಿನ ಆವರಣದಲ್ಲಿ ಹಿಜಾಬ್‌ ನಿಷೇಧಿಸಿಲ್ಲ. ವಸ್ತ್ರಸಂಹಿತೆಯ ಪ್ರಕಾರ ತರಗತಿಯಲ್ಲಿ ಅವಕಾಶ ನೀಡಿಲ್ಲ. ಹಿಜಾಬ್‌ ಒಳಗೆ ಅಡಗಿರುವ ‘ಅಲ್ಪʼ ಮತಕ್ಕಾಗಿ ಸಿದ್ದರಾಮಯ್ಯ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ’ ಅಂತಾ ಬಿಜೆಪಿ ಟೀಕಾಪ್ರಹಾರ ನಡೆಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News