ಸಿದ್ದರಾಮಯ್ಯನವರ ರಾಜಕೀಯ ನಿಂತಿರುವುದೇ ಸುಳ್ಳುಗಳ ಮೇಲೆ: ಬಿಜೆಪಿ ಟೀಕೆ

ರಾಜಕೀಯದಲ್ಲಿ ಸುಳ್ಳು ಹೇಳುವುದಿಲ್ಲವೆಂದು ಹೇಳಿರುವ ಸಿದ್ದರಾಮಯ್ಯನವರ ರಾಜಕೀಯ ನಿಂತಿರುವುದೇ ಸುಳ್ಳುಗಳ ಮೇಲೆ ಎಂದು ಬಿಜೆಪಿ ಟೀಕಿಸಿದೆ.

Written by - Zee Kannada News Desk | Last Updated : Mar 25, 2022, 01:03 PM IST
  • ಸುಳ್ಳುಗಳ ಹೊರತಾಗಿ ನಿಮ್ಮ ರಾಜಕೀಯ ನಡೆಯುವುದಿಲ್ಲ ಅಲ್ವೇ ಸಿದ್ದರಾಮಯ್ಯ?
  • ಓಲೈಕೆಗೂ ಒಂದು ಮಿತಿ ಇದೆ ಆದರೆ, ಸಿದ್ದರಾಮಯ್ಯ ಅದೆಲ್ಲವನ್ನೂ ದಾಟಿ ಸಾಗುತ್ತಿದ್ದಾರೆ
  • ಮುಸ್ಲಿಂ ಹೆಣ್ಣುಮಕ್ಕಳು ತಲೆಗೆ ದುಪ್ಪಟ್ಟ ಹಾಕಿಕೊಂಡರೆ ತಪ್ಪೇನಿದೆ? ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು
ಸಿದ್ದರಾಮಯ್ಯನವರ ರಾಜಕೀಯ ನಿಂತಿರುವುದೇ ಸುಳ್ಳುಗಳ ಮೇಲೆ: ಬಿಜೆಪಿ ಟೀಕೆ title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ರಾಜಕೀಯದಲ್ಲಿ ಸುಳ್ಳು ಹೇಳುವುದಿಲ್ಲವೆಂದು ಹೇಳಿರುವ ಸಿದ್ದರಾಮಯ್ಯ(​Siddaramaiah)ನವರ ರಾಜಕೀಯ ನಿಂತಿರುವುದೇ ಸುಳ್ಳುಗಳ ಮೇಲೆ ಎಂದು ಬಿಜೆಪಿ ಟೀಕಿಸಿದೆ. #ಬುರುಡೆರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ವಿಪಕ್ಷ ನಾಯಕನ ವಿರುದ್ಧ ಕಿಡಿಕಾರಿದೆ.

‘ರಾಜಕೀಯದಲ್ಲಿ ಸುಳ್ಳು ಹೇಳುವುದಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ಅವರ ರಾಜಕೀಯ ನಿಂತಿರುವುದೇ ಸುಳ್ಳುಗಳ ಮೇಲೆ. #PuneethRajkumar ಅವರ #James ಸಿನಿಮಾ ತೆಗೆಯಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು. ಆದರೆ ಚಿತ್ರ ನಿರ್ಮಾಪಕರು, ನಟ ಶಿವರಾಜ್‌ ಕುಮಾರ್‌ ಇದು ಸುಳ್ಳು ಆರೋಪ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: Watch: ತಮ್ಮೂರಿನ ಜಾತ್ರೆಯಲ್ಲಿ ಸಿದ್ದರಾಮಯ್ಯ ಭರ್ಜರಿ ಸ್ಟೆಪ್ಸ್..!

‘ಸುಳ್ಳುಗಳ ಹೊರತಾಗಿ ನಿಮ್ಮ ರಾಜಕೀಯ ನಡೆಯುವುದಿಲ್ಲ ಅಲ್ವೇ ಸಿದ್ದರಾಮಯ್ಯ? ಹಿಜಾಬ್‌ ವಿಚಾರ(Hijab Row)ದಲ್ಲಿ ಹಿಜಾಬ್‌ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು, ನ್ಯಾಯಾಲಯ ಇವರ ಹೇಳಿಕೆಗೆ ವಿರುದ್ಧವಾದ ತೀರ್ಪು ನೀಡಿತು. ರಾಷ್ಟ್ರಧ್ವಜವೇ ಇರದ ಸ್ಥಂಭದಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕಿದ್ದಾರೆ ಎಂಬ ಸುಳ್ಳು ಹೇಳಿದರು’ ಎಂದು ಟೀಕಿಸಿದೆ.

‘ಮುಸ್ಲಿಂ ಹೆಣ್ಣುಮಕ್ಕಳು ತಲೆಗೆ ದುಪ್ಪಟ್ಟ ಹಾಕಿಕೊಂಡರೆ ತಪ್ಪೇನಿದೆ? ಸ್ವಾಮೀಜಿಗಳು ಕೂಡ ತಮ್ಮ ತಲೆಯ ಮೇಲೆ ಬಟ್ಟೆ ಹಾಕುತ್ತಾರೆಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದ್ದು, ಸಿದ್ದರಾಮಯ್ಯನವರೇ ಓಲೈಕೆಗೂ ಒಂದು ಮಿತಿ ಎನ್ನುವುದಿರುತ್ತದೆ. ನೀವು ಅದೆಲ್ಲವನ್ನೂ ದಾಟಿ ಸಾಗುತ್ತಿದ್ದೀರಿ. ಮೊದಲನೆಯದಾಗಿ ಹಿಜಾಬ್‌, ದುಪ್ಪಟ್ಟ, ಮುಂಡಾಸು, ಪೇಟ ಇವುಗಳ ನಡುವಿನ ವ್ಯತ್ಯಾಸವನ್ನು ಮೊದಲು ಅರಿತುಕೊಳ್ಳಿ. ಹಿಜಾಬ್‌ ನಿಷೇಧಿಸಿಲ್ಲ, ತರಗತಿಯೊಳಗೆ ಹಿಜಾಬ್‌ಗೆ ಅವಕಾಶ ನಿರಾಕರಿಸಲಾಗಿದೆ ಅಷ್ಟೇ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಯಲ್ಲಮ್ಮನ ಹುಂಡಿಯಲ್ಲಿ ದಾಖಲೆ ಮೊತ್ತ ಸಂಗ್ರಹ; ವಿಚಿತ್ರ ಹರಕೆ ಚೀಟಿಗಳು ಕೂಡಾ ಪತ್ತೆ

‘ಸಿದ್ದರಾಮಯ್ಯ(Siddaramaiah)ನವರು ಕರ್ನಾಟಕ ರಾಜ್ಯ‌ ಕಂಡ "ಸಾಲದ ಹರಿಕಾರ" ಎಂದರೆ ತಪ್ಪಾಗಲಾರದು. ಸಿದ್ದರಾಮಯ್ಯ ಅವಧಿಯಲ್ಲಿ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಯಿತು. ವಿತ್ತೀಯ ಶಿಸ್ತಿನಲ್ಲಿ ಬಜೆಟ್ ಮಂಡಿಸಿದ್ದೇನೆ ಎಂದು ಬಡಾಯಿ‌ ಕೊಚ್ಚಿದರೂ, ಬದ್ಧತಾ ವೆಚ್ಚ ಸರಿದೂಗಿಸುವುದಕ್ಕೂ ಕಷ್ಟವಾಗಿತ್ತು ಎಂಬುದು ನಿಜವಲ್ಲವೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.

‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬೆಳೆನಷ್ಟ ಹಾಗೂ ಸಾಲ ಬಾಧೆಯಿಂದ ರೈತರ ಸರಣಿ ಆತ್ಮಹತ್ಯೆ ನಡೆಯಿತು. ಆದರೆ ಸಿದ್ದರಾಮಯ್ಯ ಅವರಿಗೆ ಈ ಸತ್ಯವನ್ನು ರಾಜ್ಯದ ಜನತೆಗೆ ತಿಳಿಸಲು ಇಷ್ಟವಿರಲಿಲ್ಲ. ಹೀಗಾಗಿ " ಅದು ಆತ್ಮಹತ್ಯೆ ಅಲ್ಲಾರಿ, ಕುಡಿದು ಸತ್ತಿದ್ದು" ಎಂದು ಸಾವಿನ ವಿಚಾರದಲ್ಲೂ ಸುಳ್ಳು ಹೇಳಿರಲಿಲ್ಲವೇ? ಎಂದು ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News