Manjula Death: ಕೊನೆಗೂ ಬಯಲಾಯ್ತು ಕನ್ನಡದ ಖ್ಯಾತ ನಟಿ ಮಂಜುಳ ಸಾವಿನ ಸತ್ಯ..!

ಕನ್ನಡದ ನಾಯಕನಟ ಶ್ರೀನಾಥ್ ಮತ್ತು ಮಂಜುಳ ಜೋಡಿ ಪ್ರಣಯ ಜೋಡಿ ಎಂದೇ ಖ್ಯಾತಿ ಗಳಿಸಿತ್ತು ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿನ ಬಜಾರಿ ಸ್ವಭಾವದ ಹೆಣ್ಣಿನ ಪಾತ್ರವಾದ ದುರ್ಗಿ ಪಾತ್ರದಲ್ಲಿ ಅಭಿನಯಿಸಿ ಸಖತ್‌ ಕ್ಲಿಕ್ ಆಗಿದ್ದರು.

Written by - YASHODHA POOJARI | Edited by - Puttaraj K Alur | Last Updated : Mar 26, 2022, 07:29 PM IST
  • ಮಂಜುಳ ಸಾವು ಆಕಸ್ಮಿಕವಲ್ಲ, ಆತ್ಮಹತ್ಯೆ ಅನ್ನೋ ಮಾತು ಮತ್ತೇ ಮುನ್ನೆಲೆಗೆ ಬಂದಿದೆ
  • ಕನ್ನಡದ ಪ್ರತಿಭಾವಂತ ನಟಿ ಮಂಜುಳ ತಮ್ಮ 35ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು
  • ನಟಿ ಮಂಜುಳ ನಟಿಸಿದ ಬಹುತೇಕ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ
Manjula Death: ಕೊನೆಗೂ ಬಯಲಾಯ್ತು ಕನ್ನಡದ ಖ್ಯಾತ ನಟಿ ಮಂಜುಳ ಸಾವಿನ ಸತ್ಯ..! title=
ನಟಿ ಮಂಜುಳ ಸಾವಿನ ರಹಸ್ಯವೇನು?

ಬೆಂಗಳೂರು: 1970 ಮತ್ತು 80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಮಂಜುಳ(Manjula)ಬದುಕಿದ್ದು ಕೇವಲ 34 ವರ್ಷ ಮಾತ್ರ. ಪ್ರತಿಭಾವಂತ ನಟಿ ಮಂಜುಳ ಇಲ್ಲ ಅನ್ನೋದನ್ನಇಂದಿಗೂ ನಂಬೋದಕ್ಕೆ ಆಗುತ್ತಿಲ್ಲ. ಅವರ ಸಾವು ಆಕಸ್ಮಿಕ ಅಲ್ಲ, ಆತ್ಮಹತ್ಯೆ(Manjula Death Mystery) ಅನ್ನೋ ಮಾತು ಮತ್ತೇ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಇಂಟ್ರಸ್ಟಿಂಗ್‌ ವಿಚಾರ ನಿಮ್ಮ ಮುಂದೆ.

‘ಸಂಪತ್ತಿಗೆ ಸವಾಲ್’, ‘ಎರಡು ಕನಸು’, ‘ಬೆಸುಗೆ’,‌ ‘ಭಕ್ತ ಕುಂಬಾರ’, ‘ಮೂರೂವರೆ ವಜ್ರಗಳು’, ‘ಮಯೂರ’, ‘ದಾರಿ ತಪ್ಪಿದ ಮಗ’, ‘ನೀ ನನ್ನ ಗೆಲ್ಲಲಾರೆ’, ‘ತಾಯಿಗಿಂತ ದೇವರಿಲ್ಲ’, ‘ಎರಡು ಮುಖ’, ‘ಯಾರ ಸಾಕ್ಷಿ?’ ಈ ಸಿನಿಮಾಗಳನ್ನು ಯಾರು ನೋಡಿಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ಹಂಡ್ರೆಡ್‌ ಪರ್ಸೆಂಟ್‌ ನೋಡರ್ತೀರಿ. ಯಾಕಂದ್ರೆ ಇವೆಲ್ಲವೂ ನಟಿ ಮಂಜುಳ(Kannada Actress Manjula) ಅವರು ಮುಖ್ಯಭೂಮಿಕೆಯಲ್ಲಿ ಅಭಿನಯಿರೋ ಆಗಿನ ಸೂಪರ್ ಡೂಪರ್ ಹಿಟ್ ಸಿನಿಮಾಗಳು.

ಸುಮಾರು  54ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ಮಂಜುಳ(Actress Manjula) ಅವರ ಜೀವನವೇ ರೋಚಕ. ಏಕೆಂದರೆ ಸಣ್ಣ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡ ನಟಿ ಮಂಜುಳ ಅದ್ಭುತ ನಟಿಯಾಗಿದ್ದವರು. ಮಂಜುಳ ಅವರು ಸಿನಿಮಾದಲ್ಲಿ ಇದ್ದಾರೆ ಅಂದರೆ ಸಾಕು ಅಭಿಮಾನಿಗಳು ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದರು. ಆ ಮಟ್ಟಿಗೆ ಕ್ರೇಜ್‌ ಇತ್ತು. ಇವರು ನಟಿಸಿದ ಆಲ್ಮೋಸ್ಟ್‌ ಎಲ್ಲಾ ಮೂವಿಸ್‌ ಹಿಟ್ ಆಗಿವೆ.

ಇದನ್ನೂ ಓದಿ: ಕಿರುತೆರೆಗೆ ಬಂಡವಾಳ ಹಾಕಿರೋ ನಟ, ನಟಿಯರು ಯಾರ‍್ಯಾರು ಗೊತ್ತಾ..?

‘ಮನೆ ಗೆದ್ದ ಮಗ’ ಇವರ ಕೊನೆಯ ಸಿನಿಮಾ. ತಮ್ಮ‌ ಅಭಿನಯದ ಮೂಲಕ ಇಂದಿಗೂ ಕೂಡ ಪ್ರತಿಯೊಬ್ಬರ ಹೃದಯದಲ್ಲಿ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ. ಸಿನಿಮಾ ನಿರ್ದೇಶಕ ಅಮೃತಂ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರ.  ಅನಂತರ ಒಂದು ಗಂಡು ಮಗುವಿಗೆ ಜನ್ಮ ನೀಡಿದರು. ಅಷ್ಟೇ ಅಲ್ಲದೆ ಒಂದು ಹೆಣ್ಣು ಮಗುವನ್ನು ಕೂಡ ಆ ಸಮಯದಲ್ಲಿ ದತ್ತು ತೆಗೆದುಕೊಂಡಿದ್ದರು. ತಮ್ಮ‌ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿ ಗಂಡು ಮಗುವಿಗೆ ಅಭಿಷೇಕ್ ಎಂದು, ಹೆಣ್ಣು ಮಗುವಿಗೆ ಅಭಿನಯ ಎಂದು ಹೆಸರಿಟ್ಟಿದ್ದರು.

ಮಂಜುಳ ಹುಟ್ಟಿದ್ದು ರಾಜಧಾನಿ ಬೆಂಗಳೂರು. ತಂದೆ ಶಿವಣ್ಣ ಪೋಲೀಸ್ ಸಬ್‌ಇನ್‌ಸ್ಪೆಕ್ಟರ್ ಆಗಿದ್ದರು. ಭರತನಾಟ್ಯ ಪ್ರವೀಣೆಯಾಗಿದ್ದ ಮಂಜುಳರ ಪ್ರತಿಭೆ ‘ಪ್ರಭಾತ್’ ಕಲಾವಿದರು ತಂಡದ ಮೂಲಕ ಬೆಳಕಿಗೆ ಬಂದರು. ಸಿ.ವಿ.ಶಿವಶಂಕರ್ ಅವರ ‘ಮನೆ ಕಟ್ಟಿ ನೋಡು’ ಚಿತ್ರದಿಂದ ಬಾಲನಟಿಯಾಗಿ ಬೆಳ್ಳಿತೆರೆಗೆ ಬಂದರು. ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿರುವಾಗಲೇ ‘ಯಾರ ಸಾಕ್ಷಿ’ ಚಿತ್ರದಿಂದ ನಾಯಕಿಯಾದರು.

ಕನ್ನಡದ ನಾಯಕನಟ ಶ್ರೀನಾಥ್ ಮತ್ತು ಮಂಜುಳ (Srinath And Manjula) ಪ್ರಣಯ ಜೋಡಿ ಎಂದೇ ಖ್ಯಾತಿ ಗಳಿಸಿತ್ತು ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿನ ಬಜಾರಿ ಸ್ವಭಾವದ ಹೆಣ್ಣಿನ ಪಾತ್ರವಾದ ದುರ್ಗಿ ಪಾತ್ರದಲ್ಲಿ ಅಭಿನಯಿಸಿ ಸಖತ್‌ ಕ್ಲಿಕ್ ಆಗಿದ್ದರು. ಇವತ್ತಿಗೂ ಆ ಪಾತ್ರದ ಬಗ್ಗೆ ಚರ್ಚೆಗಳಾಗುತ್ತಲೇ ಇದೆ. ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಮಿಂಚಿದ್ದ ಮಂಜುಳರವರ ವೈಯಕ್ತಿಕ ಜೀವನ ಮಾತ್ರ  ಸುಖಮಯವಾಗಿರಲಿಲ್ಲ. ‘ಹುಡುಗಾಟದ ಹುಡುಗಿ’ ಚಿತ್ರವನ್ನು ನಿರ್ದೇಶಿಸಿದ ‘ಅಮೃತಂ’ ಅವರು ಮಂಜುಳರನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರು.  

ಇದನ್ನೂ ಓದಿ: ಉಪೇಂದ್ರ ನಟನೆಯ "ಹೋಮ್‌ ಮಿನಿಸ್ಟರ್‌" ಸಿನಿಮಾ ರಿಲೀಸ್‌ ಯಾವಾಗ?

ಬಣ್ಣದ ಜಗತ್ತಿನಿಂದ ದೂರ ಉಳಿದಿದ್ದ ಮಂಜುಳ ತಾನಾಯಿತು ತನ್ನ ಸಂಸಾರವಾಯಿತೆಂದು ಸಂತೋಷದಿಂದಿದ್ದರು. ಈ ಸಮಯದಲ್ಲಿಯೇ ಅವರು ಬೆಂಕಿ ಆಕಸ್ಮಿಕದಲ್ಲಿ ನಿಗೂಢ ರೀತಿಯಲ್ಲಿ ತಮ್ಮ 35ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು. ಸಣ್ಣ ವಯಸ್ಸಿನಲ್ಲೇ ಮಂಜುಳ ಸಾವನ್ನಪ್ಪಿದ್ದು ಇವತ್ತಿಗೂ ಪ್ರತಿಯೊಬ್ಬರಿಗೂ ಕಾಡುತ್ತಿದೆ. ಯಾಕಂದ್ರೆ ಅವರ ಸಿನಿಮಾಗಳನ್ನು ತೆರೆ ಮೇಲೆ ನೋಡಿದಾಗ ಛೇ..! ಹಿಂಗಾಗಬಾರದಿತ್ತು ಅನ್ನೋ ಮಾತುಗಳನ್ನು ಇವತ್ತಿಗೂ ಮಾತನ್ನಾಡಿಕೊಳ್ಳುತ್ತಾರೆ.

ಆದರೆ ಒಂದಂತು ಸತ್ಯ ಮಂಜುಳ ಸಾವು ಆತ್ಮಹತ್ಯೆ(Manjula Death)ಯಲ್ಲ ಅನ್ನೋ ವಾದ ಕೂಡ ನಡೆಯುತ್ತಲೇ ಇದೆ. ನಟಿ ಮಂಜುಳಾ ಅವರು ಹಾಲು ಕಾಯಿಸಲು ಹೋದಾಗ ಏಕಾಏಕಿ ಗ್ಯಾಸ್‌ ಬ್ಲಾಸ್ಟ್‌ ಆಗಿದ್ದು ಹೇಗೆ? ಅನ್ನೋ ಪ್ರಶ್ನೆ ಕಾಡುತ್ತಲೇ ಇವೆ. ಆತ್ಮಹತ್ಯೆ ಮಾಡಿಕೊಳ್ಳುವಂತದ್ದು ಏನಾಗಿತ್ತು..? ವೈವಾಹಿಕ ಜೀವನ ಸುಖಕರವಾಗಿರಲಿಲ್ಲ ಅನ್ನೋ ವಾದ ಕೂಡ ಇದೆ. ಏನೇ ಆಗಲಿ ಅದ್ಭುತ ನಟಿಯನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಇವತ್ತಿಗೂ ಆ ನೋವಿನಲ್ಲೇ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News