video : ದಿನಕ್ಕೆ ೫೦೦ ರೂ ಸಂಬಳ ನೀಡಿ ಬೆಳೆ ಕಾಯಲು ಕರಡಿ ನೇಮಿಸಿದ ರೈತ

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ರೈತ  ಮಂಗಗಳು ಮತ್ತು ಕಾಡುಹಂದಿಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ. ದಿನವಿಡೀ ಹೊಲದಲ್ಲಿ ಕುಳಿತು ಬೆಳೆಗಳಿಗೆ ಕಾವಲು ನೀಡುವುದು ಸಾಧ್ಯವಾಗದ ಮಾತು. ಈ ಹಿನ್ನೆಲೆಯಲ್ಲಿ ಅವರು ವಿಶೇಷ ಮಾರ್ಗವನ್ನು ಕಂಡುಕೊಂಡಿದ್ದಾರೆ. 

Written by - Ranjitha R K | Last Updated : Apr 1, 2022, 11:59 AM IST
  • ಬೆಳೆಗಳ ರಕ್ಷಣೆಗೆ ಕರಡಿ ಕಾವಲು
  • ದಿನಕ್ಕೆ ೫೦೦ ರೂ. ವೇತನ ನಿಗದಿ
  • ತೆಲಂಗಾಣದ ಈ ವಿಡಿಯೋ ಫುಲ್ ವೈರಲ್
video : ದಿನಕ್ಕೆ ೫೦೦ ರೂ ಸಂಬಳ ನೀಡಿ ಬೆಳೆ  ಕಾಯಲು ಕರಡಿ ನೇಮಿಸಿದ ರೈತ title=
Bear Saving crops (photo ANI)

ಬೆಂಗಳೂರು : ಕಾಡು ಪ್ರಾಣಿಗಳು ಮತ್ತು ಮಂಗಗಳು ಹೆಚ್ಚಾಗಿ ಹೊಲದಲ್ಲಿ ಬೆಳೆದ ಬೆಳೆಗಳನ್ನು ಹಾಳುಮಾಡುತ್ತವೆ. ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ತಲೆನೋವು. ಈ ಸಮಸ್ಯೆಯನ್ನು ಹೋಗಲಾಡಿಸಲು ತೆಲಂಗಾಣದ ರೈತರೊಬ್ಬರು ಅತ್ಯಂತ ಅದ್ಭುತವಾದ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ರೈತನ ಹೊಲದಲ್ಲಿ ಬೆಳೆಯುವ ಬೆಳೆಗೆ  ಕರಡಿ  ಕಾವಲು ಕಾಯುತ್ತದೆ. 

ಬೆಳೆಗಳ ರಕ್ಷಣೆಗೆ ಕರಡಿ ಕಾವಲು : 
ಸುದ್ದಿ ಸಂಸ್ಥೆ ಎಎನ್‌ಐ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಇದರ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ (Viral video).  ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ರೈತ  ಮಂಗಗಳು ಮತ್ತು ಕಾಡುಹಂದಿಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ. ದಿನವಿಡೀ ಹೊಲದಲ್ಲಿ ಕುಳಿತು ಬೆಳೆಗಳಿಗೆ ಕಾವಲು ನೀಡುವುದು ಸಾಧ್ಯವಾಗದ ಮಾತು. ಈ ಹಿನ್ನೆಲೆಯಲ್ಲಿ ಅವರು ವಿಶೇಷ ಮಾರ್ಗವನ್ನು ಕಂಡುಕೊಂಡಿದ್ದಾರೆ (bear saving crops). 

ಇದನ್ನೂ ಓದಿ : King Cobra Video : ಮನೆಯ ಬಾತ್ ರೂಂನಲ್ಲಿತ್ತು ಭಯಾನಕ ಹಾವು! ಬಾಗಿಲು ತೆರೆದಾಗ ಬೆಚ್ಚಿ ಬಿದ್ದ ಮನೆ ಮಂದಿ

ಭಾಸ್ಕರ್ ರೆಡ್ಡಿ ಅವರು ತಮ್ಮ ಬೆಳೆಗಳನ್ನು ಕಾಯಲು ಕರಡಿಯನ್ನು ಬಾಡಿಗೆಗೆ ಪಡೆದಿದ್ದಾರೆ. ಅಷ್ಟೇ ಅಲ್ಲ ಈ ‘ಕರಡಿ’ಗೆ ದಿನಗೂಲಿ 500 ರೂ. ಎಂದು ನಿಗದಿ ಮಾಡಿದ್ದಾರೆ. ಈಗ ಮಂಗಗಳು (Monkey) ಮತ್ತು ಕಾಡುಹಂದಿಗಳು ಅವನ ಹೊಲದ ಸುತ್ತಲೂ ಸುಳಿಯುವುದಿಲ್ಲ. ಈ ಕರಡಿ ದಿನವಿಡೀ ರೈತನ ಹೊಲಗಳಲ್ಲಿ ಸುತ್ತಾಡುತ್ತಾ ಅವನ ಬೆಳೆಗಳನ್ನು ಕಾಪಾಡುತ್ತದೆ. ಕರಡಿಯನ್ನು ದೂರದಿಂದ ನೋಡಿದ ಮಂಗ ಮತ್ತು ಕಾಡುಹಂದಿ ಅಲ್ಲಿಂದ ಓಡಿಹೋಗುತ್ತವೆ. 

 

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ :
ಎಎನ್‌ಐ ವರದಿಯ ಪ್ರಕಾರ, ರೈತ ಭಾಸ್ಕರ್ ರೆಡ್ಡಿ, ತನ್ನ ಹೊಲವನ್ನು ಕಾವಲು  ಕಾಯಲು ವ್ಯಕ್ತಿಯೊಬ್ಬರನ್ನು ನೇಮಿಸಿದ್ದಾರೆ. ಆ ವ್ಯಕ್ತಿ ಕರಡಿ ವೇಷವನ್ನು ಧರಿಸಿ ಹೊಲದ ಬೆಳೆಗೆ ಕಾವಲಾಗುತ್ತಾರೆ. ಭಾಸ್ಕರ್ ಅವರ ಈ ಕಲ್ಪನೆಯು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ತಂತ್ರವನ್ನು ಅಳವಡಿಸಿಕೊಂಡ ನಂತರ ಮಂಗಗಳು ಮತ್ತು ಕಾಡುಹಂದಿಗಳಿಂದ ಬೆಳೆಗಳನ್ನು ರಕ್ಷಿಸುವುದು ಸುಲಭವಾಗಿದೆ ಎನ್ನಲಾಗಿದೆ. 

ಇದನ್ನೂ ಓದಿ : COVID Teeth: ಕರೋನಾದ ನಾಲ್ಕನೇ ಅಲೆಯಲ್ಲಿ ಹಲ್ಲುಗಳಿಗೆ ಅಪಾಯ! ಈ 6 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News