ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನಗಳು ಭಾರತಕ್ಕೆ ಹಾಗೂ ಭಾರತದಿಂದ ವಿದೇಶಗಳಿಗೆ ಮತ್ತೆ ಪ್ರಯಾಣ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿ ದಿನ 25 ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ನಡೆಸಲಾಗುತ್ತಿದೆ.ಈ ಹಿಂದೆ ದಿನಕ್ಕೆ 10 ಮಾತ್ರವಿದ್ದು ನಿರ್ಗಮನ ಪ್ರಯಾಣಗಳು, ಇದೀಗ 25ಕ್ಕೆ ಹೆಚ್ಚಿಸಲಾಗಿದೆ.
ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಕ್ರಮೇಣ ಹೆಚ್ಚಾಗುತ್ತಿರುವುದರಿಂದ ಬೇಡಿಕೆ ಪೂರೈಸಲು ಸಂಚಾರ ಮಾರ್ಗಗಳು ಮತ್ತು ಹೆಚ್ಚುವರಿ ವಿಮಾನಗಳು ಸಂಚರಿಸುತ್ತಿರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದ ಮಾರ್ಗದ ಜಾಲವು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿದೆ.
ಪ್ರಸ್ತುತ ಬೆಂಗಳೂರು ವಿಮಾನ ನಿಲ್ದಾಣವು (Bangalore International Airport) 21 ಅಂತಾರಾಷ್ಟ್ರೀಯ ತಾಣಗಳೊಂದಿಗೆ ಸಂಪರ್ಕ ಹೊಂದಿದ್ದು 24 ವಿಮಾನ ನಿಲ್ದಾಣಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ.ವಿಮಾನ ನಿಲ್ದಾಣವು ಈ ವರ್ಷದಲ್ಲಿ ಹೊಸ ಮಾರ್ಗಗಳ ಸೇರ್ಪಡೆ ಮಾಡಲಿದ್ದು ಸಿಯಾಟಲ್(ಅಮೆರಿಕನ್ ಏರ್‍ಲೈನ್ಸ್) ಮತ್ತು ಪ್ರಸ್ತುತ ಈಗಿನ ಮಾರ್ಗಗಳನ್ನು ಸ್ಯಾನ್ ಫ್ರಾನ್ಸಿಸ್ಕೊ(ಏರ್ ಇಂಡಿಯಾ) ಯುನೈಟೆಡ್ ಏರ್‍ಲೈನ್ಸ್‍ನೊಂದಿಗೆ ಅಕ್ಟೋಬರ್ ತಿಂಗಳಲ್ಲಿ ವಾರಕ್ಕೊಮ್ಮೆ ವಿಮಾನಗಳ ಹಾರಾಟ ಪ್ರಾರಂಭಿಸಲಿದ್ದು ವಿಶ್ವದ ಎರಡು ಅತ್ಯಂತ ದೊಡ್ಡ ತಂತ್ರಜ್ಞಾನ ಕೇಂದ್ರ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊಗಳನ್ನು ಸಂಪರ್ಕಿಸುತ್ತದೆ.
ಇದನ್ನೂ ಓದಿ: Vikrant Rona: ಜುಲೈ 28ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ ‘ವಿಕ್ರಾಂತ್ ರೋಣ’..!
ಪ್ರಯಾಣಿಕರ ಸಂಚಾರದಲ್ಲಿ ನಿರೀಕ್ಷಿತ ಹೆಚ್ಚಳವನ್ನು ನಿಭಾಯಿಸಲು ಮತ್ತು ವಿಮಾನ ನಿಲ್ದಾಣದ ಅನುಭವವನ್ನು ಹೆಚ್ಚು ತಡೆರಹಿತವಾಗಿಸಲು ಬೆಂಗಳೂರು ವಿಮಾನ ನಿಲ್ದಾಣ ನಿರ್ವಹಿಸುವ ಬೆಂಗಳೂರು ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಲಿಮಿಟೆಡ್(ಬಿಐಎಎಲ್) ವಿವಿಧ ಚೆಕ್ ಪಾಯಿಂಟ್‍ಗಳಲ್ಲಿ ಆಟೊಮೇಷನ್-ಸನ್ನದ್ಧ ಅಳವಡಿಕೆಯನ್ನು ಟರ್ಮಿನಲ್ ಪ್ರವೇಶ, ಚೆಕ್-ಇನ್, ಸೆಕ್ಯುರಿಟಿ ಚೆಕ್, ಇಮಿಗ್ರೇಷನ್ ಮತ್ತು ಕಸ್ಟಮ್ಸ್‍ನಲ್ಲಿ ಅಳವಡಿಸಿದೆ.
ಸೆಲ್ಫ್-ಬ್ಯಾಗೇಜ್ ಡ್ರಾಪ್ಸ್, ಸ್ಮಾರ್ಟ್ ಸೆಕ್ಯುರಿಟಿ ಲೇನ್ ಆಟೊಮೇಟೆಡ್ ಟ್ರೇ ರಿಟ್ರೀವಲ್ ಸಿಸ್ಟಂ ಒಳಗೊಂಡ ಪ್ರಸ್ತುತ ತಂತ್ರಜ್ಞಾನವು ಇತರೆ ಸಂಪರ್ಕರಹಿತ ತಂತ್ರಜ್ಞಾನದೊಂದಿಗೆ ಒಟ್ಟಾರೆ ವಿಮಾನ ನಿಲ್ದಾಣದ ಅನುಭವವನ್ನು ಮತ್ತಷ್ಟು ಸುಧಾರಿಸುತ್ತದೆ. ಮುಂದಿನ ಕೆಲ ತಿಂಗಳಲ್ಲಿ ಪ್ರಯಾಣಿಕರ ಪ್ರಮಾಣವು ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಉನ್ನತ ಗ್ರಾಹಕ ಅನುಭವ ಪೂರೈಕೆ ಮತ್ತು ಸತತವಾಗಿ ಕಾರ್ಯ ನಿರ್ವಹಣೆಯ ದಕ್ಷತೆ ಸುಧಾರಣೆಯು ಕಾರ್ಯತಂತ್ರೀಯ ಆದ್ಯತೆಯಾಗಿದೆ.
ಒತ್ತಡದ ಬೇಸಿಗೆ ಪ್ರಯಾಣದ ಋತುವಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳನ್ನು ಮತ್ತೆ ಪ್ರಾರಂಭಿಸುವ ಸಕಾಲಿಕ ಪ್ರಕಟಣೆಯು ಉದ್ಯಮಕ್ಕೆ ಸಕಾರಾತ್ಮಕ ಭಾವನೆ ಮೂಡಿಸಿದೆ. ಸತತ ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ ಅಳವಡಿಕೆಗಳಿಂದ ಬೆಂಗಳೂರು ವಿಮಾನ ನಿಲ್ದಾಣವು ದೊಡ್ಡ ಪ್ರಮಾಣದ ಪ್ರಯಾಣಿಕರನ್ನು ನಿರ್ವಹಿಸಲು ಚೆನ್ನಾಗಿ ಸಜ್ಜಾಗಿದೆ ಎಂದು ಬೆಂಗಳೂರು ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಲಿಮಿಟೆಡ್‍ನ ಎಂ.ಡಿ. ಮತ್ತು ಸಿಇಒ ಶ್ರೀ ಹರಿ ಮರಾರ್ ಹೇಳಿದರು.
ಇದನ್ನೂ ಓದಿ: Girki: ‘ಗಿರ್ಕಿ’ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಸೆಂಚುರಿ ಸ್ಟಾರ್ ಶಿವಣ್ಣ
ಅಂತಾರಾಷ್ಟ್ರೀಯ ಪ್ರಯಾಣಿಕರು:
ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಮತ್ತೆ ಪ್ರಾರಂಭಿಸಿರುವುದರಿಂದ ವೈಮಾನಿಕ ಪ್ರಯಾಣದ ಪುನಶ್ಚೇತನ ವೇಗವಾಗಿ ಆಗುವ ನಿರೀಕ್ಷೆ ಇದ್ದು, ಪ್ರಯಾಣಿಕರ ಹಾಗೂ ಗಡಿ ದಾಟಿ ಪ್ರಯಾಣದ ನಿರ್ಬಂಧದ ನಡುವೆಯೂ ಪ್ರಯಾಣಿಕರ ಸಂಚಾರ 2021ರ ವರ್ಷದಲ್ಲಿ ಶೇ.19ರಷ್ಟು ಹೆಚ್ಚಾಗಿದೆ..ಮುಂದಿನ ತಿಂಗಳುಗಳಲ್ಲಿ ಸ್ಥಿರವಾಗಿ ಪ್ರಗತಿ ಸಾಧಿಸುವ ನಿರೀಕ್ಷೆಯಿದೆ..ಕೋವಿಡ್ ಆರಂಭಕ್ಕೂ ಮುನ್ನ ಬೆಂಗಳೂರು ವಿಮಾನ ನಿಲ್ದಾಣವು 25 ಅಂತಾರಾಷ್ಟ್ರೀಯ ತಾಣಗಳಿಗೆ ಸಂಪರ್ಕ ಹೊಂದಿದ್ದು ಪ್ರತಿದಿನ ಸರಾಸರಿ 40 ಅಂತಾರಾಷ್ಟ್ರೀಯ ನಿರ್ಗಮನಗಳು ನಡೆಯುತ್ತಿದ್ದವು. 2020 ಮತ್ತು 2021ರಲ್ಲಿ ಸಾಂಕ್ರಾಮಿಕ ಕಡಿಮೆಯಾಗಿದ್ದರಿಂದ ಬೆಂಗಳೂರು ವಿಮಾನ ನಿಲ್ದಾಣವು 2021ರ ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಏರ್ ಇಂಡಿಯಾದ ಎರಡು ವಾರಕ್ಕೊಮ್ಮೆ ನಾನ್-ಸ್ಟಾಪ್ ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೊ ವಿಮಾನವು ದಕ್ಷಿಣದಲ್ಲಿ ಮತ್ತು ಮಧ್ಯ ಭಾರತದಲ್ಲಿ ಉತ್ತರ ಅಮೆರಿಕಾಗೆ ತಡೆರಹಿತ ಸಂಪರ್ಕದ ಮೊದಲ ವಿಮಾನವಾಗಿದೆ.ಜಪಾನ್ ಏರ್‍ಲೈನ್ಸ್‍ನಿಂದ ಟೋಕಿಯೊ ನರಿಟಾಗೆ ವಾರದ ವಿಮಾನಗಳು, ಬೆಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ, ಫ್ಲೈದುಬೈ ಕಾರ್ಯಾಚರಣೆಗಳು ಯುನೈಟೆಡ್ ಏರ್‍ಲೈನ್ಸ್ ಮತ್ತು ಅಮೆರಿಕನ್ ಏರ್‍ಲೈನ್ಸ್ ಸಾಂಕ್ರಾಮಿಕದ ನಡುವೆ ಕಾರ್ಯಚರಣೆ ನಡೆಸಲಿದೆ.
ಇದನ್ನೂ ಓದಿ: Vikrant Rona: ಜುಲೈ 28ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ ‘ವಿಕ್ರಾಂತ್ ರೋಣ’..!
ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳ ನಡುವೆಯೂ ಮತ್ತು ನಿಯಂತ್ರಿತ ಸಂಚಾರವಿದ್ದರೂ ಕಳೆದ ಎರಡು ವರ್ಷಗಳಿಂದ ಬೆಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತಕ್ಕೆ ವರ್ಗಾವಣೆ ಕೇಂದ್ರವಾಗಿ ರೂಪುಗೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದಲ್ಲಿ ಅತ್ಯಂತ ಬಲವಾದ ಕನೆಕ್ಟಿವಿಟಿ ಹೊಂದಿದ್ದು 74 ಸ್ಥಳೀಯ ತಾಣಗಳನ್ನು ಸಂಪರ್ಕಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.