"ಇನ್ನು ಎಷ್ಟು ದಿನ ಮುಚ್ಚಿಟ್ಟುಕೊಳ್ಳೊದು,ನಾನು ಬಿಜೆಪಿ ಶೀಘ್ರದಲ್ಲೇ ಸೇರೋದು ಖಚಿತ"

 ನಾನು ಬಿಜೆಪಿ ಸೇರೋದು ಖಚಿತ ಈಗಾಗಲೇ ಈ ವಿಚಾರವಾಗಿ ಈಗಾಗಲೇ ಬಿಜೆಪಿ ವರಿಷ್ಠರ ಜೊತೆ ಮಾತುಕತೆಯಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (basavaraj horatti)  ಇಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

Last Updated : Apr 3, 2022, 03:29 PM IST
  • ತಾವು ಬಿಜೆಪಿ ಸೇರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ 'ಇನ್ನೂ ಎಷ್ಟು ದಿನ ಮುಚ್ಚಿಟ್ಟುಕೊಳ್ಳೋದು, ನಾನು ಶೀಘ್ರದಲ್ಲೇ ಬಿಜೆಪಿ ಸೇರುವುದು ಖಚಿತ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಇನ್ನು ಎಷ್ಟು ದಿನ ಮುಚ್ಚಿಟ್ಟುಕೊಳ್ಳೊದು,ನಾನು ಬಿಜೆಪಿ ಶೀಘ್ರದಲ್ಲೇ ಸೇರೋದು ಖಚಿತ" title=

ಹುಬ್ಬಳ್ಳಿ:  ನಾನು ಬಿಜೆಪಿ ಸೇರೋದು ಖಚಿತ ಈಗಾಗಲೇ ಈ ವಿಚಾರವಾಗಿ ಈಗಾಗಲೇ ಬಿಜೆಪಿ ವರಿಷ್ಠರ ಜೊತೆ ಮಾತುಕತೆಯಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (basavaraj horatti)  ಇಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

ಜೂನ್-ಜುಲೈನಲ್ಲಿ ನಡೆಯಲಿರೋ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೂ ಮುನ್ನವೇ ಅವರು ಬಿಜೆಪಿ ಸೇರುವುದಾಗಿ ಖಚಿತಪಡಿಸಿದ್ದಾರೆ. ಆ ಮೂಲಕ ಅವರು ಬಿಜೆಪಿ ಪಕ್ಷದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವ ಸುಳಿವನ್ನು ನೀಡಿದ್ದಾರೆ.ಇನ್ನೊಂದೆಡೆಗೆ ಯಡಿಯೂರಪ್ಪನವರು ಕೂಡ ಸಹಮತ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: HD Kumaraswamy : ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಸಾಧ್ಯವೇ : ಕುಮಾರಸ್ವಾಮಿ 

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಹೊರಟ್ಟಿ ಅವರು ಬೇರೆಯವರು ಈಗಾಗಲೇ ಪ್ರಚಾರ ಮಾಡ್ತಿದ್ರೆ ನಾನೇನು ಮಾಡೋಕ್ಕಾಗಲ್ಲ,ಬಿಜೆಪಿ ಸೇರ್ಪಡೆಗೆ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ತಾವು ಬಿಜೆಪಿ ಸೇರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ 'ಇನ್ನೂ ಎಷ್ಟು ದಿನ ಮುಚ್ಚಿಟ್ಟುಕೊಳ್ಳೋದು, ನಾನು ಶೀಘ್ರದಲ್ಲೇ ಬಿಜೆಪಿ ಸೇರುವುದು ಖಚಿತ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News