ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತಿದ್ದರೆ ನಿಮ್ಮ ಆಹಾರದಲ್ಲಿರಲಿ ಈ ವಸ್ತುಗಳು

ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಸಮಸ್ಯೆಗೆ ಬುಡದಿಂದಲೇ ಚಿಕಿತ್ಸೆ ನೀಡಬೇಕಾಗುತ್ತದೆ. ಆಗ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 

Written by - Ranjitha R K | Last Updated : Apr 5, 2022, 02:25 PM IST
  • ಬಿಳಿ ಕೂದಲಿನ ಬಗ್ಗೆ ಚಿಂತಿಸಬೇಡಿ
  • ಆಹಾರ ಸೇವನೆಯಿಂದ ಪರಿಹಾರ ಕಂಡುಕೊಳ್ಳಬಹುದು
  • ಇದರ ರಹಸ್ಯವು ಜೀವಸತ್ವಗಳಲ್ಲಿ ಅಡಗಿದೆ
 ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತಿದ್ದರೆ ನಿಮ್ಮ ಆಹಾರದಲ್ಲಿರಲಿ ಈ ವಸ್ತುಗಳು  title=
white hair problem sollution (file photo)

ಬೆಂಗಳೂರು : ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದಕ್ಕೆ ಒತ್ತಡವೂ ಒಂದು ಕಾರಣವಾಗಿದೆ. ಬಿಳಿ ಕೂದಲಿನ ಸಮಸ್ಯೆ ಪರಿಹಾರಕ್ಕಾಗಿ ನೀವು ಕೂದಲಿಗೆ ಕಲರ್ ಮಾಡಬಹುದು. ಹೇರ್ ಡೈ ಮಾಡಬಹುದು. ಆದರೆ ಇವೆಲ್ಲವೂ ತಾತ್ಕಾಲಿಕ ಪರಿಹಾರಗಳು (white hair sollution). ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಸಮಸ್ಯೆಗೆ ಬುಡದಿಂದಲೇ ಚಿಕಿತ್ಸೆ ನೀಡಬೇಕಾಗುತ್ತದೆ. ಆಗ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 

ಚಿಕ್ಕ ವಯಸ್ಸಿನಲ್ಲಿ ಕೂದಲು ಏಕೆ ಬಿಳಿಯಾಗುತ್ತದೆ?
1. ನಿಮ್ಮ ಕಪ್ಪು ಕೂದಲು 25 ರಿಂದ 30 ವರ್ಷಗಳಲ್ಲಿ ಬಿಳಿಯಾಗುತ್ತಿದ್ದರೆ, ಅದರ ಹಿಂದೆ ಆನುವಂಶಿಕ ಕಾರಣಗಳೂ ಇರಬಹುದು.
2. ಆಟೋ ಇಮ್ಯುನ್ ಸಿಸ್ಟಮ್ ಣ ಸಮಸ್ಯೆಯಿಂದಾಗಿ ಅನೇಕ ಬಾರಿ ಕೂದಲು ಬೇಗನೆ ಬಿಳಿಯಾಗುತ್ತದೆ.
3. ಥೈರಾಯ್ಡ್ ಕಾಯಿಲೆ ಅಥವಾ ವಿಟಮಿನ್ ಬಿ-12 ಕೊರತೆಯಿಂದಲೂ ಕೆಲವರ ಕೂದಲು ಬೇಗನೇ ಬೆಳ್ಳಗಾಗುತ್ತದೆ.
4. ಮಹಿಳೆಯರಲ್ಲಿ ಆರಂಭಿಕ ಋತುಬಂಧ ಅಥವಾ ಅತಿಯಾದ ಧೂಮಪಾನದ ಕಾರಣ, ಇಂತಹ ಸಮಸ್ಯೆಗಳು ಸಹ ಬರುತ್ತವೆ (reason for white hair).
5. ಇನ್ನು ಬಿಳಿ ಕೂದಲು ಕಾಣಿಸಿಕೊಳ್ಳಲು ಅತಿ ಮುಖ್ಯ ಕಾರಣವೆಂದರೆ ಈಗಿನ ಕಾಲದ ಅನಾರೋಗ್ಯಕರ ಜೀವನಶೈಲಿ, ಮತ್ತು ಆಹಾರ ಪದ್ಧತಿ. 

ಇದನ್ನೂ ಓದಿ : Belly Fat: ನೈಸರ್ಗಿಕವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ 5 ಆಹಾರಗಳನ್ನು ಸೇವಿಸಿ
 
ಬಿಳಿ ಕೂದಲಿನ ಸಮಸ್ಯೆಯ ಪರಿಹಾರಕ್ಕೆ ಈ ಆಹಾರಗಳನ್ನು ಸೇವಿಸಿ :
ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಎದುರಾದರೆ, ಇದಕ್ಕಾಗಿ, ಸ್ಟ್ರಾಬೆರಿ, ಕಿವಿ, ಅನಾನಸ್, ಕಲ್ಲಂಗಡಿ (water melon), ಆಲೂಗಡ್ಡೆ, ಕ್ಯಾಪ್ಸಿಕಂ, ಸೋಯಾಬೀನ್, ಧಾನ್ಯಗಳು, ಮೊಟ್ಟೆ, ಅಕ್ಕಿ, ಹಾಲು (milk), ಮೀನು, ಕೋಳಿ ಮಾಂಸ , ರೇಡ್ ಮೀಟ್ ಅನ್ನು ತೆಗೆದುಕೊಳ್ಳಿ. ಇವುಗಳ ಸೇವನೆಯಿಂದ ಕೂದಲು ಕಪ್ಪಾಗುತ್ತದೆ. ಮಾತ್ರವಲ್ಲ ಕೂದಲು ಬಲಿಷ್ಟವಾಗಿ ಕೂಡಾ ಬೆಳೆಯುತ್ತದೆ. 

ಕೂದಲಿಗೆ ಜೀವಸತ್ವಗಳು ಅತ್ಯಗತ್ಯ :
ಕೂದಲಿನ ಆರೋಗ್ಯವನ್ನು ಸುಧಾರಿಸುವಲ್ಲಿ ವಿಟಮಿನ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ವಿಟಮಿನ್‌ಗಳಿಂದ ಮೇದೋಗ್ರಂಥಿಗಳನ್ನು ತಯಾರಿಸುವುದು ಸುಲಭ. ಇದು ಚರ್ಮದ ಅಡಿಯಲ್ಲಿ ಕಂಡುಬರುವ ಎಣ್ಣೆಯುಕ್ತ ವಸ್ತುವಾಗಿದೆ. ವಿಟಮಿನ್ ಬಿ 6 ಮತ್ತು ಬಿ 12 ಕೂದಲನ್ನು ಆರೋಗ್ಯಕರವಾಗಿಡುತ್ತದೆ  ಮತ್ತು ರೇಷ್ಮೆಯಂತೆ ಹೊಳೆಯುವಂತೆ ಮಾಡುತ್ತದೆ. ಜೊತೆಗೆ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಆಂಟಿ ಆಕ್ಸಿಡೆಂಟ್ ಆಗಿದ್ದು ಕೂದಲಿಣ ಆರೋಗ್ಯಕ್ಕೆ ಒಳ್ಳೆಯದು (Food for strong hair) . 

ಇದನ್ನೂ ಓದಿ : Egg: ಟೈಪ್-2 ಡಯಾಬಿಟಿಸ್ ಅಪಾಯ ಕಡಿಮೆ ಮಾಡುತ್ತಂತೆ ಈ ಆಹಾರ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News