KGF-2 ಮುಂಗಡ ಬುಕ್ಕಿಂಗ್‌ನಿಂದ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಸಿನಿ ಜಗತ್ತಿನಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಈ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರ ಥಿಯೇಟರ್‌ಗಳಿಗೆ ಎಂಟ್ರಿ ನೀಡಲಿದೆ. ಆದರೆ, ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಖತ್ ಸೌಂಡ್ ಮಾಡುತ್ತಿದೆ. ಮುಂಗಡ ಬುಕ್ಕಿಂಗ್ ಮೂಲಕ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಇದರಿಂದ 'ಕೆಜಿಎಫ್ ಚಾಪ್ಟರ್ 2' ಬಾಕ್ಸ್ ಆಫೀಸ್ ನಲ್ಲಿ ತಲ್ಲಣ ಮೂಡಿಸಲಿದೆ ಎಂದು ಊಹಿಸಬಹುದು.

Written by - Channabasava A Kashinakunti | Last Updated : Apr 8, 2022, 02:29 PM IST
  • 'ಕೆಜಿಎಫ್ 2' ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಗಳಿಸಿದೆ
  • ಚಿತ್ರದ ಮುಂಗಡ ಬುಕ್ಕಿಂಗ್ ಶುರುವಾಗಿದೆ
  • ಈ ದಿನ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ
KGF-2 ಮುಂಗಡ ಬುಕ್ಕಿಂಗ್‌ನಿಂದ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಗೊತ್ತಾ? title=

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಸಿನಿ ಜಗತ್ತಿನಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಈ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರ ಥಿಯೇಟರ್‌ಗಳಿಗೆ ಎಂಟ್ರಿ ನೀಡಲಿದೆ. ಆದರೆ, ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಖತ್ ಸೌಂಡ್ ಮಾಡುತ್ತಿದೆ. ಮುಂಗಡ ಬುಕ್ಕಿಂಗ್ ಮೂಲಕ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಇದರಿಂದ 'ಕೆಜಿಎಫ್ ಚಾಪ್ಟರ್ 2' ಬಾಕ್ಸ್ ಆಫೀಸ್ ನಲ್ಲಿ ತಲ್ಲಣ ಮೂಡಿಸಲಿದೆ ಎಂದು ಊಹಿಸಬಹುದು.

ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಕಲೆಕ್ಷನ್

ಪಿಂಕ್ ವಿಲ್ಲಾ ವರದಿ ಪ್ರಕಾರ, ಗುರುವಾರ ಕೆಲವು ಸೀಮಿತ ಕೇಂದ್ರಗಳಲ್ಲಿ 'ಕೆಜಿಎಫ್: ಚಾಪ್ಟರ್ 2' ಗಾಗಿ ಮುಂಗಡ ಬುಕಿಂಗ್ ಅನ್ನು ಪ್ರಾರಂಭಿಸಲಾಗಿದೆ, ಇದಕ್ಕೆ ಜನರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಹಿಂದಿ ಬೆಲ್ಟ್ ನಲ್ಲಿಯೇ 12 ಗಂಟೆಗಳಲ್ಲಿ 1 ಲಕ್ಷ 7 ಸಾವಿರ ಟಿಕೆಟ್ ಮಾರಾಟವಾಗಿದ್ದು, ಒಟ್ಟು 3.35 ಕೋಟಿ ರೂ. ಕಲೆಕ್ಷನ್ ಬಂದಿದೆ. ಪುಣೆ, ಸೂರತ್, ಅಹಮದಾಬಾದ್, ಕೋಲ್ಕತ್ತಾ, ಜೈಪುರ ಮತ್ತು ಲಕ್ನೋದಂತಹ ನಗರಗಳಲ್ಲಿ ತಲಾ 10 ಲಕ್ಷ ರೂಪಾಯಿ ಗಳಿಸಿದೆ. ಆದರೆ, ಸೀಮಿತ ಶೋಗಳಲ್ಲಿ ಮಾತ್ರ ಬುಕ್ಕಿಂಗ್ ಆರಂಭವಾಗಿದ್ದು, ಭಾನುವಾರದ ವೇಳೆಗೆ ಸಿನಿಮಾದ ಮುಂಗಡ ಬುಕ್ಕಿಂಗ್ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ.

ಇದನ್ನೂ ಓದಿ : 'ಕೆಜಿಎಫ್‌-2' ಹಾಡಿಗೆ ಫ್ಯಾನ್ಸ್‌ ಫಿದಾ..! ಎಷ್ಟಾಯ್ತು ಗೊತ್ತಾ ವೀವ್ಸ್..?

RRR ಹಿಂದಿಕ್ಕಲಿದೆಯೇ KGF 2?

ಸ್ಟಾರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಚಿತ್ರ ಮುಂಗಡ ಬುಕ್ಕಿಂಗ್ ಮೂಲಕ 5.08 ಕೋಟಿ ಗಳಿಸಿತ್ತು. ಆದ್ರೆ, 'ಕೆಜಿಎಫ್: ಚಾಪ್ಟರ್ 2' 12 ಗಂಟೆಗಳಲ್ಲಿ 3.35 ಕೋಟಿ ಗಳಿಸಿದೆ, ಇದು ದೊಡ್ಡ ವ್ಯವಹಾರವಾಗಿದೆ. ಚಿತ್ರ ಬಿಡುಗಡೆಗೆ ಇನ್ನೂ ಒಂದು ವಾರ ಬಾಕಿ ಇದೆ. 3788 ಶೋಗಳಿಗೆ ಮುಂಗಡ ಬುಕಿಂಗ್ ಮೂಲಕ 'RRR' ಎಷ್ಟು ಆದಾಯ ಗಳಿಸಿತ್ತು. ಆದ್ರೆ, ಕೆಜಿಎಫ್‌ನ ಮುಂಗಡ ಬುಕ್ಕಿಂಗ್ ಕೇವಲ 1839 ಶೋಗಳ ಮೂಲಕ ಮಾತ್ರ ಮಾಡಲಾಗಿದೆ., ಹಿಂದಿ ಬೆಲ್ಟ್‌ನಲ್ಲಿ ಏಪ್ರಿಲ್ 13 ರ ಬುಧವಾರದವರೆಗೆ ಮುಂಗಡ ಬುಕಿಂಗ್‌ನಿಂದ ಸಿನಿಮಾವು 15 ರಿಂದ 17 ಕೋಟಿ ರೂಪಾಯಿಗಳವರೆಗೆ ಗಳಿಸಬಹುದು ಎಂದು ಹೇಳಲಾಗುತ್ತಿದೆ.

ಓಪನಿಂಗ್ 50 ಕೋಟಿ ಕಲೆಕ್ಷನ್

'ಕೆಜಿಎಫ್ ಚಾಪ್ಟರ್ 1' 2018 ರಲ್ಲಿ ಬಿಡುಗಡೆಯಾಯಿತು, ಇದು ದೇಶಾದ್ಯಂತ ಅದ್ಬುತ ಪ್ರತಿಕ್ರಿಯೆ ಗಳಿಸಿದೆ. ದಕ್ಷಿಣ ಮತ್ತು ಉತ್ತರದಲ್ಲಿ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಗಳಿಕೆ ಮಾಡಿತು. 250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಇದು ಕನ್ನಡದ ಮೊದಲ ಅತಿ ಹೆಚ್ಚು ಆದಾಯ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 'ಕೆಜಿಎಫ್: ಚಾಪ್ಟರ್ 2' ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿದೆ. ಹೀಗಿರುವಾಗ ಚಿತ್ರಕ್ಕೆ 50 ಕೋಟಿ ರೂ. ಕಲೆಕ್ಷನ್ ಓಪನಿಂಗ್ ಸಿಗಬಹುದು ಎಂದು ಟ್ರೇಡ್ ಪಂಡಿತರ ಹೇಳುತ್ತಿದ್ದಾರೆ.

ಇದನ್ನೂ ಓದಿ : RRR ಬಾಕ್ಸ್ ಆಫೀಸ್ ಕಲೆಕ್ಷನ್ : ಬಾಲಿವುಡ್​ನಲ್ಲಿ ₹200 ಕೋಟಿ ಬಾಚಿದ RRR ಸಿನಿಮಾ!

ಅಧೀರನ ಜೊತೆ ರಾಕಿ ಭಾಯ್ ಫೈಟ್

'ಕೆಜಿಎಫ್ ಚಾಪ್ಟರ್ 1' ಯಶಸ್ಸಿನ ದೃಷ್ಟಿಯಿಂದ ನಿರ್ಮಾಪಕರು ಸೀಕ್ವೆಲ್ ಚಾಪ್ಟರ್ 2 ಅನ್ನು ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದೆ. ಸಿನಿಮಾದಲ್ಲಿ ಯಶ್ ಮತ್ತೊಮ್ಮೆ ರಾಕಿ ಭಾಯ್ ಪಾತ್ರದಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ, ಆದರೆ ಈ ಬಾರಿ ರಾಕಿ ಭಾಯ್ ಅಧೀರ (ಸಂಜಯ್ ದತ್) ಜೊತೆ ಫೈಟ್ ಗೆ ಇಳಿಯಲಿದ್ದಾರೆ. ಚಿತ್ರದ ಟ್ರೇಲರ್‌ನಲ್ಲಿ ಸಂಜಯ್ ದತ್ ಅವರ ಭಯಂಕರ ಲುಕ್ ಮೂಲಕವೇ ಸಖತ್ ಸೌಂಡ್ ಮಾಡುತ್ತಿದ್ದಾರೆ. ಇದಲ್ಲದೆ ರವೀನಾ ಟಂಡನ್ ಕೂಡ ಈ ಚಿತ್ರದ ಪ್ರಮುಖ ಭಾಗವಾಗಿದ್ದಾರೆ. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News