ಬೆಳ್ಳಿತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಸೋನು ಗೌಡ...!

ಕನ್ನಡದ ಬಹುನಿರೀಕ್ಷಿತ ಧಾರವಾಹಿ ಜೊತೆಜೊತೆಯಲಿ..ಈ ಸೀರಿಯಲ್‌ ತನ್ನ ವಿಭಿನ್ನ ಕಥೆಯಿಂದ ಪ್ರೇಕ್ಷಕರನ್ನು ಅದ್ಬುತವಾಗಿ ರಂಜಿಸ್ತಾನೆಯಿದೆ..ಇದುವರೆಗೂ ಸಾಕಷ್ಟು ಎಪಿಸೋಡ್ಗಳು ಟೆಲಿಕಾಸ್ಟ್‌ ಆಗಿದ್ದು, ದಿನಕೊಂದು ಟ್ವಿಸ್ಟ್‌ ಕೊಟ್ಟು ಕಥೆ ಎಲ್ಲಿಯು ಬೋರ್‌ ಹೊಡೆಸದಂತೆ ವಿಶೇಷವಾಗಿ ಸಾಗ್ತಾಯಿದೆ.

Written by - CHARITHA PATEL | Edited by - Manjunath N | Last Updated : Apr 8, 2022, 05:11 PM IST
  • .ಇದೀಗ ರಾಜನಂದಿನಿ ಪಾತ್ರ ಕೂಡಾ ಎಂಟ್ರಿಯಾಗಿದ್ದರಿಂದ ಫ್ಯಾನ್ಸ್ ಗಳು ಫುಲ್‌ ಖುಷ್‌ ಆಗಿದ್ದಾರೆ.
  • ಸದ್ಯ ರಾಜ ನಂದಿನಿ ಪಾತ್ರವನ್ನು ನಿಭಾಯಿಸ್ತಾಯಿರುವ ನಟಿ ಸೋನು ಗೌಡ ಸದ್ಯ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಬೆಳ್ಳಿತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಸೋನು ಗೌಡ...!  title=

ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಧಾರವಾಹಿ ಜೊತೆಜೊತೆಯಲಿ..ಈ ಸೀರಿಯಲ್‌ ತನ್ನ ವಿಭಿನ್ನ ಕಥೆಯಿಂದ ಪ್ರೇಕ್ಷಕರನ್ನು ಅದ್ಬುತವಾಗಿ ರಂಜಿಸ್ತಾನೆಯಿದೆ..ಇದುವರೆಗೂ ಸಾಕಷ್ಟು ಎಪಿಸೋಡ್ಗಳು ಟೆಲಿಕಾಸ್ಟ್‌ ಆಗಿದ್ದು, ದಿನಕೊಂದು ಟ್ವಿಸ್ಟ್‌ ಕೊಟ್ಟು ಕಥೆ ಎಲ್ಲಿಯು ಬೋರ್‌ ಹೊಡೆಸದಂತೆ ವಿಶೇಷವಾಗಿ ಸಾಗ್ತಾಯಿದೆ.

No description available.

ಜೊತೆ ಜೊತೆಯಲಿ ಧಾರವಾಹಿಯ ಅಭಿಮಾನಿಗಳು ರಾಜನಂದಿನಿ ಪಾತ್ರಕ್ಕಾಗಿ ಮೊದಲಿನಿಂದಲೂ ಕಾತುರದಿಂದ ಕಾಯ್ತಾ ಇದ್ರೂ...ಇದೀಗ ರಾಜನಂದಿನಿ ಪಾತ್ರ ಕೂಡಾ ಎಂಟ್ರಿಯಾಗಿದ್ದರಿಂದ ಫ್ಯಾನ್ಸ್ ಗಳು ಫುಲ್‌ ಖುಷ್‌ ಆಗಿದ್ದಾರೆ.. ಸದ್ಯ ರಾಜ ನಂದಿನಿ ಪಾತ್ರವನ್ನು ನಿಭಾಯಿಸ್ತಾಯಿರುವ ನಟಿ ಸೋನು ಗೌಡ ಸದ್ಯ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಧರೆಗಿಳಿದ ಸಿನಿಮಾ ಸ್ವರ್ಗಲೋಕ..! ಎಲ್ಲೆಲ್ಲೂ ಕಾಣುತ್ತಿದ್ದಾರೆ ಡಾ. ಪುನೀತ್‌ ರಾಜ್‌ಕುಮಾರ್..!‌

ಹೌದು, ಬಿಗ್‌ಸ್ಕ್ರೀನ್‌ನಲ್ಲಿ ಸಖತ್‌ ಸದ್ದು ಮಾಡಿದ ಈ ನಟಿ ಕಿರುತೆರೆಗೆ ಬಂದಾಗ ಪ್ರೇಕ್ಷಕರು ಕೊಂಚ ಆಶ್ಚರ್ಯ ಪಟ್ರು..ಅದೇ ರೀತಿ ಸೋನು ಗೌಡ ಕೂಡಾ ಬಿಗ್‌ ಸ್ಕ್ರೀನ್‌ನಿಂದ ಸ್ಮಾಲ್‌ ಸ್ಕ್ರೀನ್‌ ಅತ್ತ ಮುಖ ಮಾಡುವಾಗ ಸ್ವಲ್ಪ ಭಯಪಟ್ಟಿದ್ರಂತೆ..ಜೊತೆಜೊತೆಯಲ್ಲಿ ಧಾರವಾಹಯ ರಾಜನಂದಿನಿ ಪಾತ್ರಕ್ಕೆ ಸಾಕಷ್ಟು ನಟಿಯರ ಹೆಸರು ಕೇಳಿಬರ್ತಾಯಿತ್ತು..ಆದ್ರೆ ನನಗೆ ಆಫರ್‌ ಬಂದಾಗ ಮೊದಲು ಏನು ಮಾಡ್ಬೇಕು ಎಂಬುವುದು ತೋಚಲಿಲ್ಲಾ ಆದ್ರೆ ನನ್ನ ತಂದೆ ತಾಯಿ ಖುಷಿ ಪಟ್ರು..ನನ್ನ ಮಗಳನ್ನು ಈ ದಾರವಾಹಿಯ ಮೂಲಕ ಪ್ರತಿನಿತ್ಯ ಪರದೆಮೇಲೆ ನೋಡ್ಬಹುದು ಎಂದು ಸಂತಸ ವ್ಯಕ್ತಪಡಿಸಿದ್ರೂ..

No description available.

ಇದನ್ನೂ ಓದಿ: ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಬಗ್ಗೆ ಜಗ್ಗೇಶ್‌ ಭಾವನಾತ್ಮಕ ಬರಹ

ಇನ್ನೂ ಸೀರಿಯಲ್‌ ಏನೊ ಒಪ್ಪಿಕೊಂಡೆ ಆದ್ರೆ ಮೊದಲು ಸ್ವಲ್ಪ ಆತಂಕವಿತ್ತು..ಆದ್ರೆ ನಂತ್ರದ ದಿನಗಳಲ್ಲಿ ನನ್ನ ಟೀಮ್‌ ಅವ್ರು ನನಗೆ ಕಮ್‌ಫರ್ಟ್‌ ಜೋನ್‌ ಕ್ರಿಯೇಟ್‌ ಮಾಡಿಕೊಡುವುದರ ಮೂಲಕ ನನಗೆ ಬೆನ್ನೆಲುಬಾಗಿ ನಿಂತ್ರು. ನನ್ನ ಪಾತ್ರವನ್ನು ನೀವು ಇಷ್ಟಪಟ್ಟಿದ್ದೀರಾ? ನನ್ನ ರಾಜನಂದಿನಿ ಪಾತ್ರ ಇಷ್ಟು ಅದ್ಬುತವಾಗಿ ಮೂಡಿರಲು ನನ್ನ ಜೊತೆಜೊತೆಯಲಿ ತಂಡವೇ ಕಾರಣ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News