PBKS v GT: 6,6 ತೇವಾಟಿಯಾ ಕೊನೆಯ ಓವರ್ ಥ್ರಿಲ್ಲರ್ ಸಿಕ್ಸರ್ ಗೆ ಬೆಚ್ಚಿದ ಪಂಜಾಬ್ ಕಿಂಗ್ಸ್

ಇಲ್ಲಿನ ಬ್ರಾಬೋರ್ನ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ 16 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು ಕೊನೆಯ ಓವರ್ ನಲ್ಲಿನ ಕೊನೆಯ ಎರಡು ಎಸೆತಗಳಲ್ಲಿ ರಾಹುಲ್ ತೇವಾಟಿಯಾ ಸಿಡಿಸಿದ ಎರಡು ಸಿಕ್ಸರ್ ಗಳ ನೆರವಿನಿಂದ ರೋಚಕ ಗೆಲುವು ಸಾಧಿಸಿದೆ.

Last Updated : Apr 9, 2022, 12:10 AM IST
  • ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಗುಜರಾತ್ ಟೈಟಾನ್ಸ್ ತಂಡವು ಆರಂಭದಲ್ಲಿ ತನ್ನ ನಿರ್ಧಾರ ಸರಿ ಎನ್ನುವಂತೆ ಬೌಲ್ ಮಾಡಿತು.
PBKS v GT: 6,6 ತೇವಾಟಿಯಾ ಕೊನೆಯ ಓವರ್ ಥ್ರಿಲ್ಲರ್ ಸಿಕ್ಸರ್ ಗೆ ಬೆಚ್ಚಿದ ಪಂಜಾಬ್ ಕಿಂಗ್ಸ್   title=
Photo Courtesy: Twitter

ಮುಂಬೈ: ಇಲ್ಲಿನ ಬ್ರಾಬೋರ್ನ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ 16 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು ಕೊನೆಯ ಓವರ್ ನಲ್ಲಿನ ಕೊನೆಯ ಎರಡು ಎಸೆತಗಳಲ್ಲಿ ರಾಹುಲ್ ತೇವಾಟಿಯಾ ಸಿಡಿಸಿದ ಎರಡು ಸಿಕ್ಸರ್ ಗಳ ನೆರವಿನಿಂದ ರೋಚಕ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಗುಜರಾತ್ ಟೈಟಾನ್ಸ್ ತಂಡವು ಆರಂಭದಲ್ಲಿ ತನ್ನ ನಿರ್ಧಾರ ಸರಿ ಎನ್ನುವಂತೆ ಬೌಲ್ ಮಾಡಿತು. ಕೇವಲ 34 ರನ್ ಆಗುವಷ್ಟರಲ್ಲಿ ಪಂಜಾಬ್ ತಂಡದ ಮಾಯಾಂಕ್ ಅಗರವಾಲ್ ಮತ್ತು ಬೇರ್ ಸ್ಟೋ ಅವರ ವಿಕೆಟ್ ಕಬಳಿಸುವ ಮೂಲಕ ಆರಂಭಿಕ ಮುನ್ನಡೆಯನ್ನು ಸಾಧಿಸಿತು.ಇದಾದ ನಂತರ ಶಿಖರ್ ಧವನ್ ಮತ್ತು ಲಿವಿಂಗ್ ಸ್ಟೋನ್ ಅವರ ಭರ್ಜರಿ ಜೊತೆಯಾಟದಿಂದ ಮತ್ತೆ ಆಟದ ಲಯವನ್ನು ಕಂಡುಕೊಂಡಿತು.ಆದರೆ ಈ ಹಂತದಲ್ಲಿ ಧವನ್ 35 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: ಬಸ್ ನಂಬರ್ 315 ರ ಹಿಂದಿನ ಸ್ಪೂರ್ತಿದಾಯಕ ಕಥೆ ಹೇಳಿದ ಸಚಿನ್..!

ಇನ್ನೊಂದೆಡೆಗೆ ಸ್ಪೋಟಕ ಬ್ಯಾಟಿಂಗ್ ಮಾಡಿದ ಲಿವಿಂಗ್ ಸ್ಟೋನ್ ನಾಲ್ಕು ಭರ್ಜರಿ ಸಿಕ್ಸರ್ ಹಾಗೂ ಏಳು ಬೌಂಡರಿಗಳ ನೆರವಿನಿಂದಾಗಿ ಕೇವಲ 27ಎಸೆತಗಳಲ್ಲಿ 64 ರನ್ ಸಿಡಿಸುವ ಮೂಲಕ ಅಪಾಯಕಾರಿಯಾಗಿ ಪರಿಣಮಿಸಿದ್ದರು.ಇವರಿಗೆ ಸಾಥ್ ನೀಡಿದ ಜಿತೇಶ್ ಕೂಡ ಕೇವಲ 11 ಎಸೆತಗಳಲ್ಲಿ 23 ರನ್ ಗಳಿಸಿದರು.ಒಂದು ಹಂತದಲ್ಲಿ 200 ಕ್ಕೂ ಅಧಿಕ ರನ್ ಗಳಿಸುವ ಸಾಧ್ಯತೆ ಇದ್ದಂತಹ ಸಂದರ್ಭದಲ್ಲಿ ಪ್ರಮುಖ ವಿಕೆಟ್ ಗಳು ಉರುಳಿದ್ದರಿಂದಾಗಿ ಕೊನೆಗೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡದ ಪರವಾಗಿ ಶುಭ್ಮನ್ ಗಿಲ್  ಸ್ಪೋಟಕ ಬ್ಯಾಟಿಂಗ್ ಮೂಲಕ ನೆರವಾದರು.ಕೇವಲ 59 ಎಸೆತಗಳಲ್ಲಿ 11 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದಾಗಿ 96 ರನ್ ಗಳಿಸಿ ರಬಾಡಾಗೆ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದರು. ತದನಂತರ ಬಂದಂತಹ ಸಾಯಿ ಸುದರ್ಶನ 35, ಹಾಗೂ ಹಾರ್ದಿಕ್ ಪಾಂಡ್ಯ 27 ರನ್ ಗಳ ನೆರವಿನಿಂದ ಗೆಲುವಿನ ದಡಕ್ಕೆ ತಂದಿದ್ದರು.ಆದರೆ ಯಾವಾಗ ಹಾರ್ದಿಕ್ ಪಾಂಡ್ಯ ಬೇರ್ ಸ್ಟೋ ಅವರ ರನ್ ಔಟ್ ಬಲಿಯಾದರೋ ಆಗ ಪಂದ್ಯವು ಪಂಜಾಬ್ ಕಿಂಗ್ಸ್ ನತ್ತ ತಿರುಗಿತು.

ಇದನ್ನೂ ಓದಿ: IPL 2022 : ಬುಮ್ರಾ ಮತ್ತು ನಿತೀಶ್ ರಾಣಾ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಿಸಿಸಿಐ!

ಆದರೆ ಕೊನೆಯ ಓವರ್ ನಲ್ಲಿ ಕೊನೆಯ ಎರಡು ಎಸೆತಗಳಲ್ಲಿ ತಂಡಕ್ಕೆ 12 ರನ್ ಗಳ ಅಗತ್ಯವಿದ್ದಾಗ ರಾಹುಲ್ ತೇವಾಟಿಯಾ ಸತತ ಎರಡು ಭರ್ಜರಿ ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News