'ಕೆಜಿಎಫ್ 2 ಫೈನಲ್ ಕಲೆಕ್ಷನ್ ಬಾಲಿವುಡ್‌ನ ಮೇಲೆ ಎಸೆದ ಅಣುಬಾಂಬ್ ಆಗಿರುತ್ತದೆ'

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್- 2’ ಗುರುವಾರ ದೇಶ-ವಿದೇಶಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಭಾರತವೂ ಸೇರಿದಂತೆ 70ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡಿದ್ದು, ಸಿನಿಪ್ರೇಮಿಗಳಿಗೆ ಹೃದಯ ಗೆದ್ದಿದೆ.

Written by - Zee Kannada News Desk | Last Updated : Apr 15, 2022, 05:56 PM IST
  • ಇದೇ ವೇಳೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಜಿಎಫ್ 2 ಚಿತ್ರದ ಬಗ್ಗೆ ತಮ್ಮ ಸರಣಿ ಟ್ವೀಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಕೆಜಿಎಫ್ 2 ಫೈನಲ್ ಕಲೆಕ್ಷನ್ ಬಾಲಿವುಡ್‌ನ ಮೇಲೆ ಎಸೆದ ಅಣುಬಾಂಬ್ ಆಗಿರುತ್ತದೆ' title=
file photo

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್- 2’ ಗುರುವಾರ ದೇಶ-ವಿದೇಶಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಭಾರತವೂ ಸೇರಿದಂತೆ 70ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡಿದ್ದು, ಸಿನಿಪ್ರೇಮಿಗಳಿಗೆ ಹೃದಯ ಗೆದ್ದಿದೆ.

ಇದೇ ವೇಳೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಜಿಎಫ್ 2 ಚಿತ್ರದ ಬಗ್ಗೆ ತಮ್ಮ ಸರಣಿ ಟ್ವೀಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: KGF: Chapter 2: ಕನ್ನಡದ ‘ರಾಕಿ’ ಅಬ್ಬರಕ್ಕೆ ಬಾಲಿವುಡ್ ಶೇಕ್ ಶೇಕ್..!

ಹಿಂದಿ ಚಿತ್ರೋದ್ಯಮವನ್ನು ಬಿಡಿ, ಕೆಜಿಎಫ್ ಮತ್ತು ಈಗ ತೆಲುಗು ಮತ್ತು ತಮಿಳು ಚಿತ್ರರಂಗ ಕೂಡ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಲಿಲ್ಲ.ಈಗ ಪ್ರಶಾಂತ್ ನೀಲ್ ಕೆಜಿಎಫ್ 2 ಮೂಲಕ ಅದನ್ನು ವಿಶ್ವ ಭೂಪಟದಲ್ಲಿ ಇರಿಸಿದ್ದಾರೆ.

ರಾಕಿ ಮುಂಬೈಗೆ ಮಷಿನ್ ಗನ್ ಮೂಲಕ ವಿಲನ್ ಗಳನ್ನು ಸೆದೆಬಡಿಯಲು ಹೇಗೆ ಬರುತ್ತಾರೋ ಹಾಗೆ ಯಶ್ ಅಕ್ಷರಶಃ ಎಲ್ಲಾ ಬಾಲಿವುಡ್ ತಾರೆಯರ ಕಲೆಕ್ಷನ್ ನ್ನು ಮಷಿನ್ ಗನ್ ಮೂಲಕ ಓಪನಿಂಗ್ ಕಲೆಕ್ಷನ್ ಹೊಸಕಿ ಹಾಕಿದಂತೆ. ಇದರ ಫೈನಲ್ ಕಲೆಕ್ಷನ್ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ನ ಮೇಲೆ ಎಸೆದ ಅಣುಬಾಂಬ್ ಆಗಿರುತ್ತದೆ.

ಇದನ್ನೂ ಓದಿ: Yash Boss:ದೇಶಾದ್ಯಂತ ಟ್ರೆಂಡ್​ ಆಗ್ತಿದೆ ‘ಯಶ್‌ ಬಾಸ್’ ಹೆಸರು!

ಪ್ರಶಾಂತ್ ನಿಲ್ ಅವರ ಕೆಜಿಎಫ್ 2 ಕೇವಲ ಗ್ಯಾಂಗ್‌ಸ್ಟರ್ ಚಿತ್ರವಲ್ಲ ಆದರೆ ಇದು ಬಾಲಿವುಡ್ ಇಂಡಸ್ಟ್ರಿಗೆ ಒಂದು ಭಯಾನಕ ಚಿತ್ರವಾಗಿದೆ ಮತ್ತು ಮುಂಬರುವ ವರ್ಷಗಳಲ್ಲಿ ಅದರ ಯಶಸ್ಸಿನ ಬಗ್ಗೆ ಅವರು ದುಃಸ್ವಪ್ನಗಳನ್ನು ಹೊಂದಿರುತ್ತಾರೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೆಜಿಎಫ್ ಚಿತ್ರವು ಮುಂಗಡ ಬುಕ್ಕಿಂಗ್ ಸೇರಿದಂತೆ ಬಾಲಿವುಡ್ ಮೊದಲ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆಯನ್ನು ಬರೆದಿದೆ.ಆ ಮೂಲಕ ಹಿಂದಿ ಆವೃತ್ತಿಯಲ್ಲಿ ಈ ಹಿಂದಿನ ಎಲ್ಲಾ ದಾಖಲೆಯನ್ನು ಕೆಜಿಎಫ್ ಮುರಿದಿದೆ.ಈಗ ಅದು ಭಾರತದಲ್ಲಿ ಮೊದಲ ದಿನವೇ 134 ಕ್ಕೂ ಅಧಿಕ ಕೋಟಿ ಕಲೆಕ್ಷನ್ ನ್ನು ಗಳಿಸಿದೆ.ಹಿಂದಿಯಲ್ಲಿ ಒಟ್ಟು 53.95 ಕೋಟಿ ರೂ ಗಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News