ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಸೆ ತೋರಿಸಿ ಕೋಟಿ ಕೋಟಿ ರೂ. ವಂಚನೆ..!

ಸಾವಿರಾರು ಜನರು ಕ್ರಿಪ್ಟೊ ಕರೆನ್ಸಿ ವಹಿವಾಟಿನಲ್ಲಿ ಕೆಲಸ ಮಾಡ್ತಿದ್ದಾರೆ ಅಂತಾ ಜನರನ್ನ ನಂಬಿಸುತ್ತಿದ್ದರು. 5 ಸಾವಿರ ಇನ್ವೆಸ್ಟ್ ಮಾಡಿದ್ರೆ ಪ್ರತೀ ದಿನ 49 ರೂಪಾಯಿ ಬಡ್ಡಿ ಕೊಡುತ್ತಿದ್ದರು. ಜನರಿಗೆ ನಂಬಿಕೆ ಬಂದು ಹಣ ಹೂಡಿಕೆ ಮಾಡೋಕೆ ಶುರು ಮಾಡಿದ್ದರು. ಇದಕ್ಕಾಗಿ 900 ವಾಟ್ಸಾಪ್ ಗ್ರೂಪ್‌ಗಳಲ್ಲಿ ಪ್ರತಿ ಗ್ರೂಪ್‌ನಲ್ಲಿ 256 ಜನ ಸದಸ್ಯರಾಗಿದ್ದರು.

Written by - VISHWANATH HARIHARA | Edited by - Yashaswini V | Last Updated : Apr 18, 2022, 02:44 PM IST
  • ಡಿಜಿಟಲ್ ಕರೆನ್ಸಿಯಲ್ಲಿ ಇನ್ವೆಸ್ಟ್ ಮಾಡಿ ಹೆಚ್ಚಿನ ಲಾಂಭಾಂಶ ಪಡೆಯಲು ಜನ ಹೂಡಿಕೆ ಮಾಡಿದ್ದನ್ನೇ ಬಂಡವಾಳ ಮಾಡಿಕೊಂಡು ಜನರಿಗೆ ಮೋಸ
  • 2022ರ ಜನವರಿಯಲ್ಲಿ ಶೇರ್ ಷಾ ಅಪ್ಲಿಕೇಷನ್ ದೋಷಪೂರಿತವಾಗಿದೆ. ಅದನ್ನ ಅಪ್‌ಡೇಟ್‌ ಮಾಡಿ ಎಂದು ಸಂದೇಶ ರವಾನಿಸಿದ್ದರು‌.
  • ಹೊಸ ಅಪ್ಲಿಕೇಷನ್ ಆದ 2.0 ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡ್ತೀವಿ ಎಂದು ನಂಬಿಸಿದ್ದರು.
ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಸೆ ತೋರಿಸಿ ಕೋಟಿ ಕೋಟಿ ರೂ. ವಂಚನೆ..! title=
ShareHash dot com Cheating in the name of Crypto Currency profit

ಬೆಂಗಳೂರು: ಹೂಡಿಕೆ ಸೋಗಿನಲ್ಲಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣ ಪಾವತಿಸಿಕೊಂಡು ಡಬಲ್ ಮಾಡಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಬೃಹತ್ ಜಾಲವನ್ನ ಸಿಸಿಬಿ ಭೇದಿಸಿದೆ. ಲಾಕ್ ಡೌನ್ ವೇಳೆ ಆರೋಪಿಗಳು ಗೂಗಲ್ ಪ್ಲೇ ಸ್ಟೋರ್ ಮುಖಾಂತರ ಶೇರ್ ಹ್ಯಾಶ್ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡುವಂತೆ ಮೆಸೇಜ್ ಮಾಡುತ್ತಿದ್ದರು.
 
ಶೇರ್ ಹ್ಯಾಶ್ ಚೈನಿ ಅಪ್ಲಿಕೇಷನ್ ಮೂಲಕ ಹಿಲೀಯಂ ಕ್ರಿಪ್ಟೋ ಟೋಕನ್ ಡಿಜಿಟಲ್ ರೂಪದಲ್ಲಿ ಹಣ ಹೂಡಿಕೆ ಮಾಡಿದರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಗ್ರಾಹಕರಿಗೆ ನಂಬಿಸಿದ್ದರು. ವಂಚಕರ ಮಾತನ್ನ ನಂಬಿದ ಜನ ಹಣ ಹೂಡಿಕೆ ಮಾಡಿದ್ರು. ಗ್ರಾಹಕರಿಗೆ ನಂಬಿಕೆ ಬರಲು ಆರಂಭದಲ್ಲಿ ಹೆಚ್ಚು ಬಡ್ಡಿ ಹಣ ನೀಡುತ್ತಿದ್ದರು. ಹೂಡುವವರ ಸಂಖ್ಯೆ ಹೆಚ್ಚಾದಂತೆ ಶೇರ್ ಹ್ಯಾಶ್ ಡಾಟ್ ಕಾಮ್ ಕಂಪನಿಗೆ ಐದು ಕಂಪನಿಗಳಾದ ಕೋಟ್ಯಾಟ ಟೆಕ್ನಾಲಜಿ ಕಂಪೆನಿ, ಸಿರಾಲಿನ್ ಟೆಕ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ನೈಲಿನ್ ಇನ್ ಪೋಟೆಕ್ ಪ್ರೈವೇಟ್ ಲಿಮಿಟೆಡ್, ಮಾಲ್ಟ್ರೆಸ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ ಹಾಗೂ ಕ್ರಾಪಿಂಗಟನ್ ಟೆಕ್ನಾಲಜಿ ಪ್ರೈವೇಟ್ ಕಂಪೆನಿಗಳಿಗೆ  ಲಿಂಕ್ ಮಾಡಿ ಅದರ ಬ್ಯಾಂಕ್ ಖಾತೆಗಳಿಗೆ ಸಾರ್ವಜನಿಕರಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡುತ್ತಿದ್ದರು.

ಇದನ್ನೂ ಓದಿ- Crime News: 48 ಮಹಿಳೆಯರ ಜೊತೆಗೆ ಭಾರತೀಯ ಮೂಲದ ವೈದ್ಯನ 'ಗಂಧಿ ಬಾತ್', ನ್ಯಾಯಾಲಯ ಹೇಳಿದ್ದೇನು?

ಡಿಜಿಟಲ್ ಕರೆನ್ಸಿಯಲ್ಲಿ ಇನ್ವೆಸ್ಟ್ ಮಾಡಿ ಹೆಚ್ಚಿನ ಲಾಂಭಾಂಶ ಪಡೆಯಲು ಜನ ಹೂಡಿಕೆ ಮಾಡಿದ್ದನ್ನೇ ಬಂಡವಾಳ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದರು. ಸಾವಿರಾರು ಜನರು ಕ್ರಿಪ್ಟೊ ಕರೆನ್ಸಿ ವಹಿವಾಟಿನಲ್ಲಿ ಕೆಲಸ ಮಾಡ್ತಿದ್ದಾರೆ ಅಂತಾ ಜನರನ್ನ ನಂಬಿಸುತ್ತಿದ್ದರು. 5 ಸಾವಿರ ಇನ್ವೆಸ್ಟ್ ಮಾಡಿದ್ರೆ ಪ್ರತೀ ದಿನ 49 ರೂಪಾಯಿ ಬಡ್ಡಿ ಕೊಡುತ್ತಿದ್ದರು. ಜನರಿಗೆ ನಂಬಿಕೆ ಬಂದು ಹಣ ಹೂಡಿಕೆ ಮಾಡೋಕೆ ಶುರು ಮಾಡಿದ್ದರು. ಇದಕ್ಕಾಗಿ 900 ವಾಟ್ಸಾಪ್ ಗ್ರೂಪ್‌ಗಳಲ್ಲಿ ಪ್ರತಿ ಗ್ರೂಪ್‌ನಲ್ಲಿ 256 ಜನ ಸದಸ್ಯರಾಗಿದ್ದರು.

2022ರ ಜನವರಿಯಲ್ಲಿ ಶೇರ್ ಷಾ ಅಪ್ಲಿಕೇಷನ್ ದೋಷಪೂರಿತವಾಗಿದೆ.  ಅದನ್ನ ಅಪ್‌ಡೇಟ್‌ ಮಾಡಿ ಎಂದು ಸಂದೇಶ ರವಾನಿಸಿದ್ದರು‌. ಹೊಸ ಅಪ್ಲಿಕೇಷನ್ ಆದ 2.0 ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡ್ತೀವಿ ಎಂದು ನಂಬಿಸಿದ್ದರು. ಹೇಳಿದ ಸಮಯಕ್ಕೆ ಅಪ್ಲಿಕೇಷನ್ ಅಪ್‌ಡೇಟ್‌ ಮಾಡಿರದ ಹೂಡಿಕೆದಾರರಿಗೆ ಯಾವುದೇ ರಿಟರ್ನ್ ನೀಡಿರಲಿಲ್ಲ. ಈ ಸಂಬಂಧ ಪರಿಶೀಲಿಸಿದಾಗ ಮೋಸವಾಗಿರೋದು ಬೆಳಕಿಗೆ ಬಂದಿದೆ. 

ಇದನ್ನೂ ಓದಿ- ಊಬರ್ ಕ್ಯಾಬ್ ಬುಕ್ ಮಾಡಿ ಖತರ್ನಾಕ್ ಗ್ಯಾಂಗ್ ಮಾಡಿದ್ದೇನು ಗೊತ್ತಾ..!?

ಈ ಸಂಬಂಧ  ಇಮ್ರಾನ್, ಶೀತಲ್ ಬಸ್ತವಾಡಿ  ಜಬಿವುಲ್ಲಾಖಾನ್, ರೆಹಮತ್ ಉಲ್ಲಾಖಾನ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಸುಮಾರು 40 ಕೋಟಿ ಹಣ ವಂಚಿಸಿದ್ದು, ಸದ್ಯ 15 ಕೋಟಿ ನಗದು ಹಣ ಹಾಗೂ 2 ಕೋಟಿ ಮೌಲ್ಯದ ಚಿನ್ನಾಭರಣ ಸೇರಿ 17 ಕೋಟಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News