ಹುಬ್ಬಳ್ಳಿ ಗಲಭೆಗೂ ಕೆಜಿ ಹಳ್ಳಿ, ಡಿ ಜೆ ಹಳ್ಳಿ ಗಲಭೆಗೂ ಸಾಮ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಅಬ್ಬಯ್ಯನವ್ರ ವೋಟ್ ಬ್ಯಾಂಕ್ ರಾಜಕಾರಣಕ್ಕಿಂತ ರಾಜ್ಯದ ನೆಮ್ಮದಿ ಮುಖ್ಯ. ಇದು ಕಣ್ಣು ಒರೆಸುವ ತಂತ್ರ ಅಲ್ಲ. ನಮಗೆ ದೇಶದ ನೆಮ್ಮದಿ ಮೊದಲು, ದೇಶದ ಏಕತೆ ಮೊದಲು. ಯಾವ ಸಂಘಟನೆಯನ್ನ ರದ್ದು ಮಾಡಬೇಕು ಎನ್ನುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ. 

Written by - Prashobh Devanahalli | Edited by - Yashaswini V | Last Updated : Apr 22, 2022, 01:26 PM IST
  • ಈ ಪ್ರಕರಣದಲ್ಲಿ ಸಾಕಷ್ಟು ವಿಚಾರಣೆ ಆಗ್ಬೇಕು.
  • ಇದರ ಹಿಂದೆ ಇರುವ ದೇಶದ್ರೋಹಿ ಸಂಘಟನೆಗಳು ಹೊರಬರ್ಬೇಕು.
  • ತಪ್ಪಿತಸ್ಥರು ಅಲ್ಲದೇ ಇರುವವರನ್ನ ಬಂಧನ ಮಾಡುವ ಅವಶ್ಯಕತೆ ಇಲ್ಲ- ಗೃಹ ಸಚಿವ
ಹುಬ್ಬಳ್ಳಿ ಗಲಭೆಗೂ ಕೆಜಿ ಹಳ್ಳಿ, ಡಿ ಜೆ ಹಳ್ಳಿ ಗಲಭೆಗೂ ಸಾಮ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ title=
Home Minister Araga Jnanendra

ಬೆಂಗಳೂರು: ಹಳೇ ಹುಬ್ಬಳ್ಳಿಯಲ್ಲಿ ಗಲಭೆ ಹಾಗೂ ಈ ಹಿಂದೆ ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಭೆಗೂ ಸಾಮ್ಯತೆ ಇರುವುದು ಕಂಡುಬಂದಿದೆ. ಪೋಲಿಸರು ಸ್ವಲ್ಪ ವೀಕ್ ಆಗಿದ್ರೆ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು. ಈ ಕಾರಣ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಕಾಸ ಸೌಧದಲ್ಲಿ ಹೇಳಿದ್ರು.

ಈ ಪ್ರಕರಣದಲ್ಲಿ ಸಾಕಷ್ಟು ವಿಚಾರಣೆ ಆಗ್ಬೇಕು. ಇದರ ಹಿಂದೆ ಇರುವ ದೇಶದ್ರೋಹಿ ಸಂಘಟನೆಗಳು ಹೊರಬರ್ಬೇಕು. ತಪ್ಪಿತಸ್ಥರು ಅಲ್ಲದೇ ಇರುವವರನ್ನ ಬಂಧನ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಪೋಲೀಸರು ಸರಿ ದಾರಿಯಲ್ಲಿ ಹೋಗುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಅವ್ರನ್ನ ಹಿಡಿ, ಇವ್ರನ್ನ ಬಿಡಿ ಎನ್ನುವುದಕ್ಕೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ- ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ

ಅಬ್ಬಯ್ಯನವ್ರ ವೋಟ್ ಬ್ಯಾಂಕ್ ರಾಜಕಾರಣಕ್ಕಿಂತ ರಾಜ್ಯದ ನೆಮ್ಮದಿ ಮುಖ್ಯ. ಇದು ಕಣ್ಣು ಒರೆಸುವ ತಂತ್ರ ಅಲ್ಲ. ನಮಗೆ ದೇಶದ ನೆಮ್ಮದಿ ಮೊದಲು, ದೇಶದ ಏಕತೆ ಮೊದಲು. ಯಾವ ಸಂಘಟನೆಯನ್ನ ರದ್ದು ಮಾಡಬೇಕು ಎನ್ನುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟು ಜನರ ಕೇಸ್‌ಗಳನ್ನ ವಾಪಸ್ ತೆಗದುಕೊಂಡ್ರು. ಅದರ ಪರಿಣಾಯವನ್ನ ನಾವು ಅನುಭವಿಸುತ್ತಿದ್ದೇವೆ. ಕೆಜಿ ಹಳ್ಳಿ ಡಿಜೆ ಹಳ್ಳಿಯಲ್ಲಿ ಎಷ್ಟು ಜನರನ್ನ ಅರೆಸ್ಟ್ ಮಾಡಿದ್ದೇವೆ. ಇದು ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಆಗ್ತಿತ್ತಾ ಎಂದು ಪ್ರಶ್ನಿಸಿದರು.

545 ಸಬ್ ಇನ್ಸ್‌ಪೆಕ್ಟರ್ ಅಕ್ರಮ ವಿಚಾರದಲ್ಲಿ ವೈಫಲ್ಯ ವಿಚಾರ:
ಅವರನ್ನ ಹಿಡಿಯದೆ ಬಿಟ್ರೆ ಅದು ವೈಫಲ್ಯ. ನಾನೇ ಅದನ್ನ ಸಿಐಡಿಗೆ ಕೊಟ್ಟಿದ್ದು. ಎಲ್ಲಿದ್ರೂ ಅರೆಸ್ಟ್ ಮಾಡ್ತಾರೆ. ಅವರು ನಿನ್ನೆ ಕೋರ್ಟ್‌ಗೆ ಹೋಗಿದ್ರು, ಬೇಲ್ ಸಿಕ್ಕಿಲ್ಲ ಎನ್ನುವ ಮಾಹಿತಿ ಇದೆ. ಅವರಿಗೊಂದು, ಇವರಿಗೊಂದು ಇಲ್ಲ. ನಮ್ಮ ಆಡಳಿತದಲ್ಲಿ ಕಾನೂನು ಎಲ್ಲರಿಗೂ ಒಂದೇ. ಎಲ್ಲರನ್ನು ಅರೆಸ್ಟ್ ಮಾಡುತ್ತೇವೆ. ಪಿಎಸ್‌ಐ ಪರೀಕ್ಷೆ ವಿಚಾರದಲ್ಲಿ ಬಹಳ ಬಿಗಿ ಕ್ರಮ ತೆಗದುಕೊಂಡಿದ್ದೇವೆ ಎಂದು ಸಮರ್ಥನೆ ನೀಡಿದರು.

ಇದನ್ನೂ ಓದಿ- PSI Recruitment Scam: ಮುನ್ನಾಭಾಯಿ MBBS ಸ್ಟೈಲ್‍ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು

ಸಣ್ಣ ದಾಖಲಾತಿ ಸಿಕ್ಕ ಎರಡು ಮೂರು ಗಂಟೆ ಒಳಗೆ ಸಿಎಂ ಅನುಮತಿ ಪಡೆದು ಸಿಐಡಿ ಟೀಮ್ ಮಾಡಿದ್ದೇವೆ. ಎಲ್ಲವನ್ನೂ ಬಗೆದು, ಬೇರು ಸಹಿತ ಕಿತ್ತು ಹೊರ ತರಬೇಕು ಎಂದು ಹೇಳಿದ್ದೇವೆ. ಸಿಐಡಿ ಟೀಮ್ ಅತ್ಯಂತ ಒಳ್ಳೆಯ ಟೀಮ್. ಪ್ರಮಾಣಿಕವಾಗಿ ತನಿಖೆಯಾಗುತ್ತದೆ. ಈಗಾಗಲೇ ತನಿಖೆಯಾಗುತ್ತಿದೆ. ತನಿಖೆ ನಂತರ ಪರೀಕ್ಷೆ ವಿಚಾರವಾಗಿ ತೀರ್ಮಾನ ಮಾಡುತ್ತೇವೆ ಎಂದರು.

ಯುಪಿಎಸ್‌ಸಿ ಮಾದರಿಯಲ್ಲಿ ಪರೀಕ್ಷೆ:
ರಂಗೋಲಿ ಕೆಳಗೆ ನುಸುಳುವವರು ಇದ್ದಾಗ, ಈ ರೀತಿ ಅಕ್ರಮ ಮಾಡಿ ಬರಬೇಕು ಎನ್ನುವವರು ಇದ್ದಾಗ ಇದು ಸಹಜವಾಗಿಯಾಗುತ್ತದೆ. ಕಷ್ಟ ಪಟ್ಟು ವರ್ಷಪೂರ್ತಿ ಓದಿದವರ ಬಾಯಿಗೆ ಮಣ್ಣು ಹಾಕುವ ಕೆಲಸವನ್ನ ಇವರೆಲ್ಲಾ ಮಾಡಿದ್ದಾರೆ. ಪರೀಕ್ಷೆ ಈ ರೀತಿ ಆಗಲೇಬಾರದು ಎನ್ನುವ ಕಾರಣಕ್ಕೆ ತನಿಖೆ ನಡೆಯುತ್ತಿದೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News