ಹಾರ್ದಿಕ್ ಪಾಂಡ್ಯ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಸುನಿಲ್ ಗವಾಸ್ಕರ್..!

ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನದ ಕುರಿತಾಗಿ ಮೆಚ್ಚುಗೆಯ ಸುರಿಮಳೆಗಳೇ ಹರಿದು ಬರುತ್ತಿವೆ.ಗಾಯಗೊಂಡು ಟೀಮ್ ಇಂಡಿಯಾದಿಂದ ಹೊರಗೆ ಉಳಿದಿದ್ದ ಹಾರ್ದಿಕ್ ಪಾಂಡ್ಯ ಅವರು ಈಗ ಐಪಿಎಲ್ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟಾನ್ಸ್ ತಂಡದ ನೇತೃತ್ವವನ್ನು ವಹಿಸಿಕೊಂಡಿರುವ ಅವರು ಈಗ ನಾಯಕತ್ವದ ಜೊತೆಗೆ ತಮ್ಮ ಆಟದ ಮೂಲಕವೂ ಮಿಂಚುತ್ತಿದ್ದಾರೆ.

Written by - Zee Kannada News Desk | Last Updated : Apr 23, 2022, 08:45 PM IST
  • 'ಅದು ಟೀಮ್ ಇಂಡಿಯಾ ಅಥವಾ ಗುಜರಾತ್ ಟೈಟಾನ್ಸ್ ಆಗಿರಲಿ, ನಾಲ್ಕನೇ ಕ್ರಮಾಂಕದಲ್ಲಿ ಹಾರ್ದಿಕ್ ಅತ್ಯಂತ ಸೂಕ್ತವಾದ ಬ್ಯಾಟ್ಸ್‌ಮನ್.ಏಕೆಂದರೆ ಅವರು ಜವಾಬ್ದಾರಿಯನ್ನು ನಿಭಾಯಿಸುತ್ತಾರೆ" ಎಂದು ಪಠಾಣ್ ಶ್ಲಾಘಿಸಿದರು.
ಹಾರ್ದಿಕ್ ಪಾಂಡ್ಯ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಸುನಿಲ್ ಗವಾಸ್ಕರ್..!  title=

ನವದೆಹಲಿ: ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನದ ಕುರಿತಾಗಿ ಮೆಚ್ಚುಗೆಯ ಸುರಿಮಳೆಗಳೇ ಹರಿದು ಬರುತ್ತಿವೆ.ಗಾಯಗೊಂಡು ಟೀಮ್ ಇಂಡಿಯಾದಿಂದ ಹೊರಗೆ ಉಳಿದಿದ್ದ ಹಾರ್ದಿಕ್ ಪಾಂಡ್ಯ ಅವರು ಈಗ ಐಪಿಎಲ್ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟಾನ್ಸ್ ತಂಡದ ನೇತೃತ್ವವನ್ನು ವಹಿಸಿಕೊಂಡಿರುವ ಅವರು ಈಗ ನಾಯಕತ್ವದ ಜೊತೆಗೆ ತಮ್ಮ ಆಟದ ಮೂಲಕವೂ ಮಿಂಚುತ್ತಿದ್ದಾರೆ.

ಇದುವರೆಗೆ ಅವರ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಆರು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸುವ ಮೂಲಕ ನಾಯಕತ್ವದಲ್ಲಿಯೂ ಅವರು ಸೈ ಎನಿಸಿಕೊಂಡಿದ್ದಾರೆ.ಹಾಗಾಗಿ ಈಗ ಅವರು ಹಿರಿಯ ಆಟಗಾರರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಈಗ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಕುರಿತಾಗಿ ಪ್ರತಿಕ್ರಿಯಿಸಿರುವ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಪಾಂಡ್ಯ ಅವರ ಬ್ಯಾಟಿಂಗ್ ನಲ್ಲಿನ ಶಿಸ್ತಿನ ಕುರಿತಾಗಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ರವಿ ದಹಿಯಾಗೆ ಚಿನ್ನದ ಪದಕ

"ಅವರು ಐಪಿಎಲ್‌ಗೆ ಮೊದಲು ಹೆಚ್ಚು ಕ್ರಿಕೆಟ್ ಆಡಲಿಲ್ಲ, ಏಕೆಂದರೆ ಅವರು ಗಾಯದ ಕಾರಣದಿಂದಾಗಿ ಅವರು ಎದುರಿಸಿದ ಎಲ್ಲಾ ಸಮಸ್ಯೆಗಳೊಂದಿಗೆ ಸಂಪೂರ್ಣವಾಗಿ ಫಿಟ್ ಆಗಲು ಪ್ರಯತ್ನಿಸುತ್ತಿದ್ದರು.ಈಗ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ತೋರಿಸುತ್ತಿರುವ ಶಿಸ್ತನ್ನು ನೋಡಿ.ಅವರು ಪವರ್‌ಪ್ಲೇನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಮತ್ತು ಮೈದಾನದ ನಿರ್ಬಂಧಗಳನ್ನು ಸಂಪೂರ್ಣವಾಗಿ ಬಳಸುತ್ತಿದ್ದಾರೆ,ಅವರು ಮೈದಾನದಲ್ಲಿಯೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ"ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

'ಹಾರ್ದಿಕ್ ನಿಸ್ಸಂಶಯವಾಗಿ ಎಂಎಸ್ ಧೋನಿ ಅವರನ್ನು ಮಾರ್ಗದರ್ಶಕರಾಗಿ ಪರಿಗಣಿಸುತ್ತಾರೆ ಎಂದು ನಾನು ಭಾವಿಸುತ್ತೇನೆ, ಅವರು ಎಂಎಸ್‌ಗೆ ತುಂಬಾ ಹತ್ತಿರವಾಗಿದ್ದ ಆಟಗಾರರಾಗಿದ್ದರು ಹಾಗಾಗಿ ಅವರು ಎಂ.ಎಸ್.ಧೋನಿ ಅವರಿಂದ ಸರಿಯಾದ ಪಾಠಗಳನ್ನು ಕಲಿತಿದ್ದಾರೆ.ನಾವು ಶ್ರೇಷ್ಠತೆಯ ಸಹವಾಸದಲ್ಲಿದ್ದಾಗ, ನಾವು ಚಿಕ್ಕ ತುಣುಕುಗಳನ್ನು ತೆಗೆದುಕೊಳ್ಳುವುದರ ಮೂಲಕ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ.ಈಗ ಅದನ್ನು ನಾವು ಹಾರ್ದಿಕ್ ಅವರಲ್ಲಿ ಕಾಣುತ್ತಿದ್ದೇವೆ ಎಂದು ಚೋಪ್ರಾ ಹೇಳಿದರು.

ಇದನ್ನೂ ಓದಿ: ನೋ ಬಾಲ್ ವಿವಾದ: ಅಂಪೈರ್ ವಿರುದ್ಧ ರಿಷಭ್ ಪಂತ್ ಅಸಮಾಧಾನ, ವಿಡಿಯೋ ವೈರಲ್

'ಈಗ ನಾವು ನೋಡುತ್ತಿರುವುದು ಹೊಸ ಹಾರ್ದಿಕ್ ಪಾಂಡ್ಯ.ಇದು ಅವರ ಉತ್ತಮ ಆವೃತ್ತಿಯಾಗಿದೆ.ಈ ಋತುವಿನಲ್ಲಿ ಅವರ  ಪ್ರದರ್ಶನವನ್ನು ನೋಡಿದಾಗ ನಿಜಕ್ಕೂ ನಮಗೆ ಸಂತಸವಾಗುತ್ತದೆ.ಹಾರ್ದಿಕ್ ರಲ್ಲಿರುವ ಉತ್ತಮ ಸಂಗತಿ ಏನೆಂದರೆ ಅವರು ನಂಬರ್ 4 ರಲ್ಲಿಯೂ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುತ್ತಾರೆ' ಎಂದು ಪಠಾಣ್ ಹೇಳಿದರು.

'ಅದು ಟೀಮ್ ಇಂಡಿಯಾ ಅಥವಾ ಗುಜರಾತ್ ಟೈಟಾನ್ಸ್ ಆಗಿರಲಿ, ನಾಲ್ಕನೇ ಕ್ರಮಾಂಕದಲ್ಲಿ ಹಾರ್ದಿಕ್ ಅತ್ಯಂತ ಸೂಕ್ತವಾದ ಬ್ಯಾಟ್ಸ್‌ಮನ್.ಏಕೆಂದರೆ ಅವರು ಜವಾಬ್ದಾರಿಯನ್ನು ನಿಭಾಯಿಸುತ್ತಾರೆ" ಎಂದು ಪಠಾಣ್ ಶ್ಲಾಘಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News