ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿ ಔಟ್ ಆಗುತ್ತಾರಾ...? ಗಂಗೂಲಿ ಹೇಳಿದ್ದೇನು?

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ.

Written by - Zee Kannada News Desk | Last Updated : Apr 29, 2022, 06:18 PM IST
  • 'ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗದಿದ್ದರೆ, ಐಪಿಎಲ್ ನಂತರ ಜೈವಿಕ ಬಬಲ್‌ಗಳು ಅಗತ್ಯವಿಲ್ಲ.
  • ಆದ್ದರಿಂದ ನಾವು ಈಗ ಒಂದೇ ಸ್ಥಳದಲ್ಲಿ ಎಷ್ಟು ದಿನಗಳವರೆಗೆ ಆಡಬಹುದು ಎನ್ನುವ ಕುರಿತಾಗಿ ಕಾಯ್ದು ನೋಡಬೇಕಾಗಿದೆ ಎಂದು ಹೇಳಿದರು.

Trending Photos

 ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿ ಔಟ್ ಆಗುತ್ತಾರಾ...? ಗಂಗೂಲಿ ಹೇಳಿದ್ದೇನು? title=

ನವದೆಹಲಿ: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ.ತಂಡದ ನಾಯಕತ್ವವನ್ನು ತ್ಯಜಿಸಿದ ನಂತರ ಅವರು ಉತ್ತಮ ಫಾರ್ಮ್ ಕಂಡುಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು, ಆದರೆ ಅವರು ತಮ್ಮ ಎಂದಿನ ಫಾರ್ಮ್ ಗೆ ಮರಳಲು ಇಂದಿಗೂ ಪರದಾಡುತ್ತಿದ್ದಾರೆ.ಇದುವರೆಗೆ ಆಡಿರುವ ೯ ಪಂದ್ಯಗಳಲ್ಲಿ ಅವರು ೧೬ ರ ಸರಾಸರಿಯಲ್ಲಿ ಕೇವಲ ೧೨೮ ರನ್ ಗಳನ್ನು ಮಾತ್ರ ಗಳಿಸಿದ್ದಾರೆ.

ವಿರಾಟ್ ಯಾವ ಹಂತದ ಕ್ರಿಕೆಟ್‌ನಲ್ಲಿಯೂ ಈ ರೀತಿ ಕಷ್ಟಪಡುವುದನ್ನು ಹಿಂದೆಂದೂ ನೋಡಿರಲಿಲ್ಲ. ವಿರಾಟ್ ಕೊನೆಯ ಬಾರಿಗೆ 2014 ರಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯ ಸಮಯದಲ್ಲಿ ರನ್ ಗಳಿಸಲು ಹೆಣಗಾಡಿದ್ದರು. ಆದರೆ ಅದೇ ವರ್ಷದ ನಂತರ, ಅವರು ಆಸ್ಟ್ರೇಲಿಯಾದಲ್ಲಿ ಎರಡು ಶತಕಗಳೊಂದಿಗೆ ಮತ್ತೊಮ್ಮೆ ಭರ್ಜರಿ ಫಾರ್ಮ್ ಗೆ ಮರಳಿದ್ದರು.

ಇದನ್ನೂ ಓದಿ: South Africa vs India: ಕೊಹ್ಲಿಯನ್ನು ಜಗತ್ತಿನ ಶ್ರೇಷ್ಠ ನಾಯಕ ಎಂದ ಈ ಆಟಗಾರ..!

ಈಗ ಅವರ ಫಾರ್ಮ್ ಕುರಿತಾಗಿ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶೀಘ್ರದಲ್ಲೇ ಫಾರ್ಮ್ ಗೆ ಮರಳುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು. "ಅವರು ಶ್ರೇಷ್ಠ ಆಟಗಾರರು ಮತ್ತು ಅವರು ಫಾರ್ಮ್‌ಗೆ ಮರಳುತ್ತಾರೆ ಎಂದು ನನಗೆ ಖಾತ್ರಿಯಿದೆ. ಅವರು ಶೀಘ್ರದಲ್ಲೇ ರನ್ ಗಳಿಸಲು ಪ್ರಾರಂಭಿಸುತ್ತಾರೆ.ಈಗ ವಿರಾಟ್ ಕೊಹ್ಲಿ ಅವರ ತಲೆಯಲ್ಲಿ ಏನು ಓಡುತ್ತಿದೆ ಎನ್ನುವುದು ಎಂದು ನನಗೆ ತಿಳಿದಿಲ್ಲ, ಆದರೆ ಅವರು ತಮ್ಮ ಫಾರ್ಮ್ ಅನ್ನು ಮರಳಿ ಪಡೆಯುತ್ತಾರೆ ಎನ್ನುವುದು ನನಗೆ ಖಾತ್ರಿ ಇದೆ.ಅವರೊಬ್ಬ ಶ್ರೇಷ್ಠ ಆಟಗಾರ ಎಂದು ಸೌರವ್ ಗಂಗೂಲಿ ಹೇಳಿದರು.

ಇದನ್ನೂ ಓದಿ: Virat Kohli Controversy : ಕೊಹ್ಲಿ ಮತ್ತು BCCI ನಡುವಿನ ಮನಸ್ತಾಪ : ವಿರಾಟ್‌ಗೆ ಇದ್ದಕ್ಕಿದ್ದಂತೆ ಏಕೆ ಬೆನ್ನು ನೋವು?

ಇದೆ ವೇಳೆ ಬಯೋ ಬಬಲ್ ಗಳನ್ನು ತೆಗೆದುಹಾಕುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು "ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗದಿದ್ದರೆ, ಐಪಿಎಲ್ ನಂತರ ಜೈವಿಕ ಬಬಲ್‌ಗಳು ಅಗತ್ಯವಿಲ್ಲ. ಆದ್ದರಿಂದ ನಾವು ಈಗ ಒಂದೇ ಸ್ಥಳದಲ್ಲಿ ಎಷ್ಟು ದಿನಗಳವರೆಗೆ ಆಡಬಹುದು ಎನ್ನುವ ಕುರಿತಾಗಿ ಕಾಯ್ದು ನೋಡಬೇಕಾಗಿದೆ ಎಂದು ಹೇಳಿದರು.

ಕೋವಿಡ್ ಹಾಗೆಯೇ ಇರಲಿದೆ.ಇದು ಇನ್ನೂ 10 ವರ್ಷಗಳವರೆಗೆ ಇರುತ್ತದೆ, ಆದ್ದರಿಂದ ನಾವು ಅದರೊಂದಿಗೆ ಬದುಕಬೇಕು. ಏನು ಮಾಡಬಹುದೆಂದು ಅದರ ಬಗ್ಗೆ ಯೋಚಿಸೋಣ ಎಂದು ಅವರು ಹೇಳಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News