Shocking: ಪತ್ನಿಯ ಮೇಲೆ ಸಂದೇಹ, ಪತಿನಿಷ್ಠೆ ಪರೀಕ್ಷಿಸಲು ಅಗ್ನಿ ಪರೀಕ್ಷೆ ನಡೆಸಿದ ಪತಿ ಮಹಾಶಯ

Shocking News: ಪತಿಯೊಬ್ಬ ತನ್ನ ಪತ್ನಿಯ ನಿಷ್ಠೆಯನ್ನು ಪರೀಕ್ಷಿಸಲು ಆಕೆಯ ಅಗ್ನಿ ಪರೀಕ್ಷೆ ತೆಗೆದುಕೊಂಡ ಘಟನೆ ಸಂಭವಿಸಿದೆ. ಪತಿ ಮಹಾಶಯ ಪತ್ನಿಯ ನಿಷ್ಠೆ ಪರೀಕ್ಷಿಸಲು ಕೈಯಲ್ಲಿ ಕರ್ಪೂರವನ್ನು ಉರಿಸುವಂತೆ ಆಕೆಯನ್ನು ಒತ್ತಾಯಿಸಿದ್ದಾನೆ.  

Written by - Nitin Tabib | Last Updated : May 1, 2022, 08:13 PM IST
  • ಪತ್ನಿಯ ನಿಷ್ಠೆ ಅನುಮಾನಿಸಿದ ಪತಿ
  • ಪತ್ನಿಯ ಅಗ್ನಿ ಪರೀಕ್ಷೆಯನ್ನೇ ಕೈಗೊಂಡ
  • ಬಳಿಕ ನಡೆದಿದ್ದೇನು ತಿಳಿಯಲು ಸುದ್ದಿ ಓದಿ
Shocking: ಪತ್ನಿಯ ಮೇಲೆ ಸಂದೇಹ, ಪತಿನಿಷ್ಠೆ ಪರೀಕ್ಷಿಸಲು ಅಗ್ನಿ ಪರೀಕ್ಷೆ ನಡೆಸಿದ ಪತಿ ಮಹಾಶಯ title=
Shocking Incident

ಕೋಲಾರ: Shocking News -  ಕರ್ನಾಟಕದ ಕೋಲಾರದಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂಬ ಶಂಕೆ ಉಂಟಾಗಿದೆ. ಇದಾದ ನಂತರ ಪತಿ ಪತ್ನಿಗೆ ಮಾಡಿದ ಕೆಲಸ ಕೇಳಿದರೆ, ನೀವೂ ಕೂಡ ಬೆಚ್ಚಿಬೀಳುವಿರಿ. ತನ್ನ ಹೆಂಡತಿಯ ನಿಷ್ಠೆಯನ್ನು ಪರೀಕ್ಷಿಸಲು ಮುಂದಾದ ಪತಿ ಮಹಾಶಯ  ಅವಳ 'ಅಗ್ನಿ ಪರೀಕ್ಷೆ'ಯನ್ನು ತೆಗೆದುಕೊಂಡಿದ್ದಾನೆ. ಪತಿ ತನ್ನ ಹೆಂಡತಿಯ ನಿಷ್ಠೆಯನ್ನು ಪರೀಕ್ಷಿಸಲು ಆಕೆಗೆ ಕೈಯಲ್ಲಿ ಕರ್ಪೂರವನ್ನು ಉರಿಸುವಂತೆ ಒತ್ತಾಯಿಸಿದ್ದಾನೆ.

ಇದನ್ನೂ ಓದಿ-ಉರ್ದು ಭಾಷೆ ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ್ದೇ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಹೆಂಡತಿಯ ನಿಷ್ಠೆಯ ಮೇಲೆ ಅನುಮಾನ
ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, ಪೊಲೀಸರು ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಕೋಲಾರದ ಎನ್‌ಜಿಒವೊಂದು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಪತಿ ಕೋಪಗೊಳ್ಳುತ್ತಾನೆ ಎಂಬ ಕಾರಣಕ್ಕೆ ಪತ್ನಿ ದೂರು ನೀಡಿರಲಿಲ್ಲ ಎಂದು ವರದಿ ಹೇಳಲಾಗಿದೆ. ಇನ್ನೊಂದೆಡೆ, ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಲು ಆತನ ಮನೆಗೆ ತಲುಪಿದ್ದಾರೆ. ಆದರೆ, ಆಗಲೇ ವಿಷಯ ತಿಳಿದ ಆರೋಪಿ ಪೊಲೀಸರು ಬರುವ ಮುನ್ನವೇ ಮನೆಯಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ-ಮೇ 3ರಂದು ನೃಪತುಂಗ ವಿವಿ ಉದ್ಘಾಟನೆ: ಕೇಂದ್ರ ಸಚಿವ ಅಮಿತ್ ಶಾ ಆಗಮನ

ಹೆಂಡತಿಯ ಕೈಯಲ್ಲಿ ಕರ್ಪೂರ ಉರಿಸಿದ ಪತಿ
ಆರೋಪಿಯ ಹೆಸರು ಆನಂದ್ ಎಂದು ಹೇಳಲಾಗುತ್ತಿದ್ದು, ವರದಿಯ ಪ್ರಕಾರ, ಆತ ತನ್ನ ಹೆಂಡತಿಯ ನಿಷ್ಠೆಯನ್ನು ಪರೀಕ್ಷಿಸಲು ಅವಳ ಅಂಗೈಯಲ್ಲಿ ಕರ್ಪೂರವನ್ನು ಉರಿಸುವಂತೆ ಒತ್ತಾಯಿಸಿದ್ದಾನೆ. ಇದರಿಂದ ಆಕೆಯ ಕೈಗೆ ತೀವ್ರ ಸುಟ್ಟ ಗಾಯಗಳಾಗಿವೆ. ಕೋಲಾರದ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಬರುವ ವೀರೇನಹಳ್ಳಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಇಬ್ಬರೂ ಮದುವೆಯಾಗಿ 14 ವರ್ಷಗಳಾಗಿವೆ. ಮದುವೆಯಾಗಿ 14 ವರ್ಷಗಳಾದರೂ ಪತಿಗೆ ಪತ್ನಿಯ ನಿಷ್ಠೆಯ ಬಗ್ಗೆ ಅನುಮಾನವಿತ್ತು ಎನ್ನಲಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News