ಬೆಂಗಳೂರು : Mangal Shani Yuti : ಜ್ಯೋತಿಷ್ಯದಲ್ಲಿ, ಶನಿ ಮತ್ತು ಮಂಗಳ ಎರಡನ್ನೂ ಬಹಳ ಮುಖ್ಯವಾದ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಶನಿಯ ಅಶುಭ ಸ್ಥಾನವು ಆರ್ಥಿಕ, ಮಾನಸಿಕ, ದೈಹಿಕ ನೋವನ್ನು ಉಂಟುಮಾಡುತ್ತದೆ. ಮಂಗಳನ ಅಶುಭ ಸ್ಥಾನವು ವ್ಯಕ್ತಿಯ ವೈವಾಹಿಕ ಜೀವನಡ ಮೇಲೆ ಪರಿಣಾಮ ಬೀರುತ್ತದೆ. ಈ ತಿಂಗಳು ಅಂದರೆ ಮೇ ಶನಿ ಮತ್ತು ಮಂಗಳನ ಸಂಯೋಗದಿಂದ ಪ್ರಾರಂಭವಾಗುತ್ತಿದೆ. ಈ ಎರಡೂ ಗ್ರಹಗಳು ಕುಂಭ ರಾಶಿಯಲ್ಲಿ ಒತ್ತಿಗೆ ಸೇರಲಿದ್ದು, 3 ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರುತ್ತದೆ. ಮುಂದಿನ 15 ದಿನಗಳವರೆಗೆ ಈ ಮೂರೂ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು.
ಶನಿ-ಮಂಗಳರು ಪರಸ್ಪರ ಶತ್ರುಗಳು :
ಶನಿ ಮತ್ತು ಮಂಗಳ ಗ್ರಹಗಳು ಪ್ರಬಲ ಗ್ರಹಗಳು ಮಾತ್ರವಲ್ಲ, ಅವು ಪರಸ್ಪರ ಶತ್ರುಗಳೂ ಆಗಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಇರುವುದರಿಂದ ಇವರ ನಡುವೆ ದ್ವಂದ್ವ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕಾಗಿಯೇ ಈ ಯೋಗವನ್ನು ದ್ವಂದ ಯೋಗ ಎಂದು ಕರೆಯಲಾಗುತ್ತದೆ. ಈ ಯೋಗವು 3 ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಈ ರಾಶಿಯ ಜನರು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು. ಅಲ್ಲದೆ, ಮಂಗಳವಾರ ಮತ್ತು ಶನಿವಾರದಂದು ದೋಷನಿವಾರಕನಾದ ಹನುಮಂತನನ್ನು ಮತ್ತು ಶನಿವಾರದಂದು ಶನಿದೇವನನ್ನು ಪೂಜಿಸಿ, ಮಂತ್ರಗಳನ್ನು ಪಠಿಸಬೇಕು.
ಇದನ್ನೂ ಓದಿ : ಅಕ್ಷಯ ತೃತೀಯದಲ್ಲಿ 3 ರಾಜಯೋಗಗಳು! ಈ ಶುಭ ಮುಹೂರ್ತದಲ್ಲಿ ಶಾಪಿಂಗ್ ಮಾಡಿದರೆ ಅಪಾರ ಐಶ್ವರ್ಯ ಪ್ರಾಪ್ತಿ
ಕರ್ಕಾಟಕ : ಕರ್ಕ ರಾಶಿಯವರಿಗೆ ಶನಿ-ಮಂಗಳರ ಈ ಸಂಯೋಗ ಒಳ್ಳೆಯದಲ್ಲ. ಈ ರಾಶಿಯವರು ಅಪಘಾತ, ಗಾಯ ಮುಂತಾದವುಗಳಿಂದ ಎಚ್ಚರದಿಂದ ಇರಬೇಕು. ಕೆಲಸದ ಸ್ಥಳದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು. ತಾಳ್ಮೆಯಿಂದ ಈ ಸಮಯವನ್ನು ಕಳೆಯುವುದು ಉತ್ತಮ.
ಕನ್ಯಾ ರಾಶಿ : ಈ ಶನಿ-ಮಂಗಳ ದ್ವಂದ್ವ ಯೋಗವು ಕನ್ಯಾ ರಾಶಿಯವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಈ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೌಷ್ಟಿಕಾಂಶವಿರುವ ವಸ್ತುಗಳನ್ನು ಸೇವಿಸಬೇಕು. ಹೊರಗಡೆ ತಿನ್ನುವುದನ್ನು ತಪ್ಪಿಸಿ.
ಇದನ್ನೂ ಓದಿ : ಅಕ್ಷಯ ತೃತೀಯದಂದು ತಾಯಿ ಲಕ್ಷ್ಮಿಯ ಆಶೀರ್ವಾದಕ್ಕಾಗಿ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ
ಕುಂಭ : ಈ ರಾಶಿಯಲ್ಲಿ ಮಂಗಳ-ಶನಿಗಳ ಸಂಯೋಗ ಆಗುತ್ತಿರುವುದರಿಂದ ಕುಂಭ ರಾಶಿಯವರಿಗೆ ಈ ಸಮಯ ಅತ್ಯಂತ ಕಷ್ಟಗಳನ್ನು ಸೃಷ್ಟಿಸಲಿದೆ. ಈ ರಾಶಿಚಕ್ರದ ಜನರು ಭಾವೋದ್ರೇಕಕ್ಕೆ ಒಳಗಾಗುವುದನ್ನು ತಪ್ಪಿಸಬೇಕು. ಈ ಸಂದರ್ಭದಲ್ಲಿ ಕಹಿ ಮಾತುಗಳನ್ನು ಆಡುತ್ತಾರೆ. ಆಯಾಸ ಸುಸ್ತು ಕಾಡಬಹುದು. ಕೆಲಸಕ್ಕೆ ಹೋಗುವವರು ಕಚೇರಿಗಳಲ್ಲಿ ಜಾಗರೂಕರಾಗಿರಿ. ಅಪ್ಪಿತಪ್ಪಿಯೂ ಯಾವುದೇ ವಿವಾದಕ್ಕೆ ಸಿಲುಕಬೇಡಿ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.