Viral Video: ಪರಸ್ಪರರ ಜೀವ ತೆಗೆಯಲು ಮುಂದಾದ ಹಾವು-ಮುಂಗುಸಿ, ರಕ್ತಸಿಕ್ತ ಕಾಳಗ ನೋಡಿ ಎದೆ ಝಲ್ಲೇನ್ನುತ್ತದೆ

Mongoose Snake Fight - ಹಾವು-ಮುಂಗುಸಿಗಳು ಒಂದೆಡೆ ಇರಲು ಎಂದಿಗೂ ಸಾಧ್ಯವಿಲ್ಲ. ಇದಕ್ಕೆ ಕಾರಣ ಎಂದರೆ, ಒಂದು ವೇಳೆ ಅವು ಪರಸ್ಪರ ಎದುರಾದರೆ, ರಕ್ತಸಿಕ್ತ ಕಾಳಗವೇ ನಡೆದ್ಹೋಗುತ್ತದೆ. ಅಂತಹುದೇ ಒಂದು ಹಾವು ಮುಂಗುಸಿಯ ಕಾಳಗದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.  

Written by - Nitin Tabib | Last Updated : May 2, 2022, 10:27 PM IST
  • ಹಾವು ಮುಂಗುಸಿಯ ರಕ್ತಸಿಕ್ತ ಕಾಳಗ
  • ವಿಡಿಯೋ ನೋಡಿ ಎದೆ ಝಲ್ ಎನ್ನುತ್ತದೆ
  • ನೀವೂ ವಿಡಿಯೋ ಅನ್ನು ನೋಡಿ
Viral Video: ಪರಸ್ಪರರ ಜೀವ ತೆಗೆಯಲು ಮುಂದಾದ ಹಾವು-ಮುಂಗುಸಿ, ರಕ್ತಸಿಕ್ತ ಕಾಳಗ ನೋಡಿ ಎದೆ ಝಲ್ಲೇನ್ನುತ್ತದೆ title=
Snake Mungoose Fight Video

Mongoose Snake Fight Video: ಕಾಡಿನಲ್ಲಿರುವ ಅನೇಕ ಪ್ರಾಣಿಗಳು ಮತ್ತು ಜೀವಿಗಳು ಪರಸ್ಪರ ಬದ್ಧ ಶತ್ರುಗಳಾಗಿರುತ್ತವೆ. ಇವುಗಳಲ್ಲಿ ಹಾವು ಮತ್ತು ಮುಂಗುಸಿಯ ಜೋಡಿ ಕೂಡ ಒಂದು. ಹಾವು, ಮುಂಗುಸಿಗಳ ಕಾದಾಟ ಕಂಡು ಮನುಷ್ಯರ ಎದೆ ಝಲ್ ಎನ್ನುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪರಸ್ಪರ ಮುಖಾಮುಖಿಯಾಗಿರುವ ಹಾವು-ಮುಂಗುಸಿ ಪರಸ್ಪರ ರಕ್ತ ದಾಹ ತೀರಿಸಿಕೊಳ್ಳಲು ಮುಂದಾಗಿವೆ.

ಹಾವು ಮತ್ತು ಮುಂಗುಸಿಯ ರಕ್ತಸಿಕ್ತ ಕಾಳಗ
ಹಾವು ಮುಂಗುಸಿಯ ಈ ಕಾದಾಟದ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಹಾವು ಮತ್ತು ಮುಂಗುಸಿ ಪರಸ್ಪರರ ರಕ್ತದಾಹವನ್ನು ತೀರಿಸಿಕೊಳ್ಳಲು ಕಾದಾಟಕ್ಕಿಳಿದಿವೆ. ಹಾವುಗಳು ಮತ್ತು ಮುಂಗುಸಿಗಳು ಒಂದೆಡೆ ಇರಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಎಂದರೆ, ಒಂದು ವೇಳೆ ಅವು ಪರಸ್ಪರ ಎದುರಾದರೆ, ಭಯಂಕರ ಕಾಳಗವೇ ನಡೆದ್ಹೋಗುತ್ತದೆ. ಟ್ವಿಟ್ಟರ್‌ನಲ್ಲಿನ ಹಾವು ಮತ್ತು ಮುಂಗುಸಿಯ ಅಪಾಯಕಾರಿ ಕಾದಾಟದ ವೈರಲ್ ವಿಡಿಯೋ ಇದಾಗಿದ್ದು, ಇದನ್ನು ನೋಡಿ ನಿಮ್ಮ ಮೈಮೇಲಿನ ರೋಮಗಳು ಕೂಡ ಎದ್ದು ನಿಲ್ಲಲಿವೆ.

ಇದನ್ನೂ ಓದಿ-Viral Video: ನೀವು ಹಾರುವ ಬೆಕ್ಕನ್ನು ನೋಡಿದ್ದೀರಾ..?

ಕೇವಲ 42 ಸೆಕೆಂಡ್‌ಗಳ ಈ ಹಾವು-ಮುಂಗುಸಿಯ ಕಾದಾಟದಲ್ಲಿ ವಿಡಿಯೋದಲ್ಲಿ ಎರಡು ಜೀವಿಗಳು ತಮ್ಮ ಸಂಪೂರ್ಣ ಬಲವನ್ನು ಪ್ರಯೋಗಿಸುತ್ತಿವೆ ಎಂಬಂತೆ ತೋರುತ್ತಿದೆ. ಕೆಲವೊಮ್ಮೆ ಹಾವು ಮುಂಗುಸಿಯ ಮೇಲೆ ಹಿಡಿತ ಸಾಧಿಸುವುದನ್ನು ನೀವು ನೋಡಿದರೆ, ಕೆಲವೊಮ್ಮೆ ಮುಂಗುಸಿ ಹಾವಿನ ಮೇಲೆ ತನ್ನ ಪಟ್ಟು ಬಿಗಿಗೊಳಿಸುತ್ತಿದೆ. ಈ ಕಾಳಗದಲ್ಲಿ (ಮುಂಗುಸಿಯ ಹಾವಿನ ಕಾಳಗ), ಎರಡು ಪ್ರಾಣಿಗಳು ಸರದಿಯಲ್ಲಿ ಪರಸ್ಪರ ಮೇಲೆ ಭಾರಿ ಬೀಳುತ್ತಿರುವುದನ್ನು ನೀವು ನೋಡಬಹುದು. ವೀಡಿಯೊ ನೋಡಿ-

ಇದನ್ನೂ ಓದಿ-Viral Video: ಎತ್ತರದ ಗುಡ್ಡದಿಂದ ಸೈಕಲ್ ಸಮೇತ ಜಿಗಿದ ಬಾಲಕಿ! ಆಮೇಲೇನಾಯ್ತು..?

ಕೊನೆಗೆ ಮುಂಗುಸಿ ಜೊತೆಗಿನ ಕಾಳಗ ಹಾವಿಗೆ ದುಬಾರಿ ಸಾಬೀತಾಗಿದೆ
ಈ ರಕ್ತಸಿಕ್ತ ಕಾಳಗದ ಕೊನೆಯಲ್ಲಿ ಮುಂಗುಸಿಯು ಹಾವನ್ನು ಸೋಲಿಸಿದೆ ಮತ್ತು ಅದಕ್ಕೆ ತುಂಬಲಾರದ ಗಾಯವನ್ನು ಉಂಟುಮಾಡಿದೆ. ಮುಂಗುಸಿಗೆ ಹೆದರಿದ ಹಾವು ಅಲ್ಲಿಂದ ಕಾಲ್ಕಿತ್ತಿದೆ. ಮತ್ತೊಂದೆಡೆ, ಮುಂಗುಸಿ ಕೂಡ ಹಾವನ್ನು ಸುಮ್ಮನೆ ಬಿಡುವ ಮನಸ್ಥಿತಿಯಲ್ಲಿಲ್ಲ ಎಂಬಂತೆ ತೋರಿದೆ. ಅದು ತನ್ನ ಸಂಪೂರ್ಣ ಬಲಪ್ರಯೋಗದಿಂದ ಹಾವನ್ನು ಓಡಿಸಿದೆ. ಈ ವೇಳೆ ಸಮಯ ಸಾಧಿಸಿರುವ ಹಾವು ಹತ್ತಿರದಲ್ಲಿಯೇ ಇರುವ ಬಿಲವನ್ನು ಪ್ರವೇಶಿಸಿದೆ. ಒಂದು ವೇಳೆ ಹಾವು ಬಿಲದಲ್ಲಿ ಪ್ರವೇಶಿಸದೇ ಇದ್ದರೆ, ಇಬ್ಬರಲ್ಲಿ ಒಬ್ಬರ ಪ್ರಾಣ ಹೋಗುವುದು ಖಚಿತ ಎಂಬುದುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News